Site icon TUNGATARANGA

ಮೆಸ್ಕಾಂ ಸಹಾಯಕ ಇಂಜಿನಿಯರ್ ಕಿರುಕುಳದ ಅರೋಪ.ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದೇನು ?

ಶಿವಮೊಗ್ಗ,ಅ.೮:ಮೆಸ್ಕಾಂ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಯಾರೆಂದೆ ನನಗೆ ಗೊತ್ತಿಲ್ಲ. ಅವರಿಗೆ ಕಿರುಕುಳ ನೀಡಿದ್ದೇನೆ ಎಂದು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಉಂಟು ಮಾಡಿದೆ. ಒಂದೊಮ್ಮೆ ನಾನು ಕಿರುಕುಳ ನೀಡಿದ್ದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.


ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್‌ನಲ್ಲಿ ಶಾಂತಕುಮಾರ್ ಎಂಬ ವ್ಯಕ್ತಿ ಬೆದರಿಕೆ ಆರೋಪ ಮಾಡಿದ್ದಾನೆ. ಈತ ಕೆಪಿಟಿಸಿಎಲ್ ಇಂಜಿನಿಯರ್ ಅಂತೆ ಆ ವ್ಯಕ್ತಿ ನನ್ನ ಗಮನಕ್ಕೆ ಇಲ್ಲ. ನಾನು. ಆತನಿಗೆ ಫೋನ್ ಮಾಡಿಲ್ಲ,

ಏಕೆ ಆಪಾದನೆ ಮಾಡಿದ್ದಾನೋ ಗೊತ್ತಿಲ್ಲ, ಅದರ ಉದ್ದೇಶ ಗೊತ್ತಿಲ್ಲ, ಆದರೆ ಬೇಳೂರು ಅಂತ ಮಾಧ್ಯಮಗಳಲ್ಲಿ ಬಂದಿದೆ, ಇದು ನನಗೆ ಅಚ್ಚರಿ ಮೂಡಿಸಿದೆ ಎಂದರು.


ಇದು ಬಿಜೆಪಿ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಆತನ ಮೇಲೆ ಮೂರು ಹುಡುಗಿಯರ ಕೇಸ್ ಇದೆ. ಹುಡುಗಿ ಮನೆ ಮೇಲೆ ಗಾಂಜಾ ಹಾಕಿ ಜೈಲು ಪಾಲಾಗಿದ್ದಾನೆ.ನಾನು ಆತನ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು.


ಆ ವ್ಯಕ್ತಿಯೇ ಗೊತ್ತಿಲ್ಲ. ದುರುದ್ದೇಶದಿಂದ ಈ ರೀತಿ ಮಾಡಿದ್ದಾನೆ. ಇದರಿಂದ ನನಗೆ ಬೇಸರ ಆಗಿದೆ. ನನ್ನ ಕ್ಷೇತ್ರದಲ್ಲಿ ಆ ವ್ಯಕ್ತಿಯೇ ಇಲ್ಲ. ಘಟನೆ ನಡೆದಾಗ ನಾನು ದೇಶದಲ್ಲಿ ಇರಲಿಲ್ಲ. ದಾಖಲೆ ಕೊಟ್ಟರೆ ರಾಜೀನಾಮೆ ಕೊಡುತ್ತೇನೆ. ಹುಡುಗಿ ವಿಚಾರದಲ್ಲಿ ನಮ್ಮ ಕಡೆಯವರು ಫೋನ್ ಮಾಡಿರಬಹುದು. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಡ್ಜ್ ಅದನ್ನು ತೆಗೆದುಕೊಂಡಿದ್ದು ತಪ್ಪು. ಈಗ ವಜಾ ಮಾಡಿ ಕಳಿಸಿದ್ದಾರೆ ಎಂದರು.


ಸಿದ್ದರಾಮಯ್ಯ ಇಳಿಸಲು ಪಿತೂರಿ ನಡೆಯುತ್ತಿದೆ, ರಾಜ್ಯಪಾಲ ಬಿಜೆಪಿ ಕೈಗೊಂಬೆಯಾಗಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಜ್ಯಪಾಲರ ನಡವಳಿಕೆ ಸರಿ ಇಲ್ಲ ಎಂದಿದ್ದಾರೆ. ಪಿಎಸೈ ಹಗರಣ ಸರಿಯಾಗಿ ತನಿಖೆ ಮಾಡಿದರೆ ವಿಜಯೇಂದ್ರ ಜೈಲು ಪಾಲು ಆಗುತ್ತಾರೆ. ಪ್ರೇರಣ ಟ್ರಸ್ಟ್‌ಗೆ ಎಷ್ಟು ಹಣ ಬಂತು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ರಾಜ್ಯ ಸರ್ಕಾರ ಗಟ್ಟಿ ಇದೆ ಎಂದರು.

Exit mobile version