ಶಿವಮೊಗ್ಗ, ಜ.22:
ಶಿವಮೊಗ್ಗ ಸಮೀಪದ ಹುಣಸೋಡು ಅಬ್ಬಲಗೆರೆ ನಡುವಿನ ಅಕ್ರಮ ಕ್ವಾರೆ ಬಳಿ ಬಾರೀ ಪ್ರಮಾಣದ ಡೈನಾಮೆಟ್ ಸಿಡಿದು ಸುಮಾರು 5ಕ್ಕುಊ ಹೆಚ್ವು ಬಿಹಾರಿ ಮೂಲದ ಕಾರ್ಮಿಕರು ಸಾವು ಕಂಡಿರುವ ಘಟನೆ ಇಂದು ರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ.
ರಾತ್ರಿ ಹತ್ತು ಇಪ್ಪತ್ತರ ಹೊತ್ತಿಗೆ ಇಡೀ ಶಿವಮೊಗ್ಗ ಜನತೆಯನ್ನು ಬೆಚ್ಚಿಬೀಳಿಸಿದ್ದ ಬಾರೀ ಸದ್ದು ಈಗ ಭೂಕಂಪ ಎಂಬ ಮಾತಿನಿಂದ ತಿರುವು ಪಡೆದಿದೆ.
ಇಲ್ಲಿ ಕೇಳಿದ ಸದ್ದು ಭೂಕಂಪದ್ದಲ್ಲ, ಇದು ಡೈನಾಮೆಟ್ ಸ್ಪೋಟದಿಂದ ಎನ್ನಲಾಗಿದೆ.
ಈ ಸ್ಪೋಟಕ್ಕೆ ಭೂಕಂಪ ಕಾರಣ ಎಂದು ಹೇಳುತ್ತಿದ್ದ ಮಾತು ಬದಲಾಗಿದ್ದು ಈ ಸದ್ದು ಶಿವಮೊಗ್ಗ, ಭದ್ರಾವತಿ ಸೇರಿದಂತೆ ಬಹಳಷ್ಟು ಕಡೆ ಕೇಳಲು ಡೈನಾಮೆಟ್ ಬ್ಲಾಸ್ಟ್ ಎನ್ನಲಾಗುತ್ತಿದೆ.
ಘಟನೆ ನಡೆದು ಒಂದು ಗಂಟೆಯ ನಂತರ ಪೊಲೀಸರು ಹಾಗೂ ಅಧಿಕಾರಿಗಳು ಬೇಟಿ ನೀಡಿದ್ದಾರೆ.
ಸುಮಾರು ಒಂದು ಲಾರಿಯಲ್ಲಿ ಸಾಗಿಸುತ್ತಿದ್ದ ಒಂದು ಲೋಡ್ ಜೀಲಿಟಿಯನ್ ಕಡ್ಡಿಗಳು ಇನ್ನಿತರೆ ಬ್ಲಾಸ್ಟಿಂಗ್ ವಸ್ತುಗಳು ಲಘ ಭೂಕಂಪನದ ಸಮಯದಲ್ಲಿ ಒಂದಕ್ಕೊಂದು ತಗುಲಿ ಬ್ಲಾಸ್ಟ್ ಆದಕಾರಣ ಲಾರಿಯಲ್ಲಿದ್ದ ಆರುಮಂದಿಯು ಛಿದ್ರವಾಗಿ ಹೋಗಿದ್ದಾರೆಂದು ಮತ್ತೊಂದು ಕಡೆಯ ಮೂಲಗಳು ತಿಳಿಸಿವೆ.
ಹಿಂದೆ ಡಮ್ ಎಂದ ಒಂದೇ ಶಬ್ದಕ್ಕೆ ಬೆಚ್ಚಿಬಿದ್ದು ಜನ ಮನೆಯಿಂದ ಹೊರಗೆ ಬಂದು ಆತಂಕದಿಂದ ಏನಾಯಿತೆಂದು ಹುಡುಕುವ ದುಗುಡದ ಕ್ಷಣ ಇಂದು ರಾತ್ರಿ ಕಂಡುಬಂದಿತ್ತು.
ಇಲ್ಲಿ ಅಲ್ಲಿ ಹೀಗಾಗಿದೆ ಹಾಗಾಗಿದೆ ಮತ್ತೊಂದು ಕಡೆ ಗೋಡೆ ಕುಸಿದು ಹೋಗಿದೆ ಮಗದೊಂದು ಕಡೆ ಟವರ್ ಬ್ಲಾಸ್ಟ್ ಆಗಿದೆ ಇನ್ನೊಂದು ಕಡೆ ಗ್ಯಾಸ್ ಸ್ಟೋರೆಜಿಗೆ ಬೆಂಕಿ ಬಿದ್ದಿದೆ. ಕಲ್ಲುಕೋರೆಯ ಬಾಂಬ್ ಬ್ಲಾಸ್ಟ್ ಆಗಿದೆ ಎಂಬ ಅಂತೆ-ಕಂತೆಗಳ ಮಾತಿಗೆ ಉತ್ತರ ಸಿಕ್ಕಿದೆ ಎನ್ನಬಹುದು.