Site icon TUNGATARANGA

ಮದುವೆ ಮುರಿದು ಬಿದ್ದ ಕಾರಣಕ್ಕೆ ಗಾಂಜಾ ಕೇಸ್ ಹಾಕಿಸಲು ಮುಂದಾಗಿದ್ದು ಯಾರು ? :KPTCL ಸಹಾಯಕ ಅಭಿಯಂತರ ಶಾಂತಕುಮಾರ ಸ್ವಾಮಿ ವಿರುದ್ದ ಪ್ರಕರಣ ದಾಖಲಾಗಲು ಕಾರಣವೇನು ?

Davanagere Crime

ಸಾಗರ : ಪಟ್ಟಣದ ಕೆಳದಿ ರಸ್ತೆಯಲ್ಲಿ ಮನೆಯೊಂದರ ಕಾಂಪೋಂಡ್‌ನೊಳಗೆ ಗಾಂಜಾ ಪಟ್ಟಣ ಎಸೆದು ಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ಸಹಾಯಕ ಅಭಿಯಂತರ ಶಾಂತಕುಮಾರ ಸ್ವಾಮಿ ವಿರುದ್ದ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದಿನಾಂಕ ೧೪-೦೭-೨೦೨೪ರಂದು ಕೆಳದಿ ರಸ್ತೆಯ ವಿದ್ಯಾನಗರ ಲೇಔಟ್‌ನ ಸಿವಿಲ್ ಇಂಜಿನಿಯರ್ ಜಿತೇಂದ್ರ ಎಂಬುವವರು ವೈಯಕ್ತಿಕ ಕಾರಣಕ್ಕೆ ತಮ್ಮನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರು ನೀಡಿದ್ದರು. ಜು. ೧೩ರಂದು ರಾತ್ರಿ

೧೦-೪೦ರ ಸುಮಾರಿಗೆ ತಮ್ಮ ಮನೆಯ ಕಾಂಪೋಂಡ್ ಒಳಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾವನ್ನು ಎಸೆದು ಹೋಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಜಿತೇಂದ್ರ ದೂರಿನಲ್ಲಿ ಒತ್ತಾಯಿಸಿದ್ದರು.


ರಾತ್ರಿ ಪೊಟ್ಟಣ ಎಸೆದಿರುವುದನ್ನು ಬೆಳಿಗ್ಗೆ ಜಿತೇಂದ್ರ ಅವರು ಸಿ.ಸಿ. ಕ್ಯಾಮರಾ ಕ್ಲಿಪ್ಪಿಂಗ್ ಪರಿಶೀಲನೆ ನಡೆಸಿದಾಗ ಯಾರೋ ಕಪ್ಪು ಪೊಟ್ಟಣ ಎಸೆದು ಹೋಗಿರುವುದು ಪತ್ತೆಯಾಗಿದೆ. ಅದು ಬಿಡಿಸಿ ನೋಡಿದಾಗ ಗಾಂಜಾ ಎನ್ನುವುದು ಪತ್ತೆಯಾಗಿತ್ತು. ತಮಗೆ ಸಿಕ್ಕಿರುವ ಗಾಂಜಾ ಪೊಟ್ಟಣವನ್ನು ಜಿತೇಂದ್ರ ಪೊಲೀಸರಿಗೆ ಒಪ್ಪಿಸಿದ್ದರು.


ದೂರಿನಲ್ಲಿ ಜೇತೇಂದ್ರ ಅವರ ಮಾವನ ಮಗಳು ಪಲ್ಲವಿ ಮತ್ತು ಶಾಂತಕುಮಾರಸ್ವಾಮಿ ಅವರ ಮದುವೆ ವಿಷಯದಲ್ಲಿ ಹೊಂದಾಣಿಕೆ ಆಗದೆ ಮದುವೆ ಮುರಿದು ಬಿದ್ದಿತ್ತು. ಶಾಂತಕುಮಾರ ಸ್ವಾಮಿ ಈ ದ್ವೇಷದಿಂದಲೇ ಜಿತೇಂದ್ರ ಅವರ ಮೇಲೆ ಗಾಂಜಾ ಕೇಸ್ ಹಾಕಿಸಲು ಯಾರೋ

ವ್ಯಕ್ತಿಯನ್ನು ಕಳಿಸಿ ಕಾಂಪೋಂಡ್‌ನೊಳಗೆ ಗಾಂಜಾ ಎಸೆದು ಹೋಗುವಂತೆ ಮಾಡಿದ್ದಾರೆ ಎನ್ನುವುದು ಜಿತೇಂದ್ರ ಅವರು ದೂರಿನಲ್ಲಿ ತಿಳಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಲೈನ್ಸನ್ ಕಾಯ್ದೆ ಪ್ರಕಾರ

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಂಜಾ ಎಸೆದು ಹೋದ ಸನಾವುಲ್ಲಾ, ಪ್ರೇರಣೆ ನೀಡಿದ ಶಾಂತಕುಮಾರ ಸ್ವಾಮಿ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Exit mobile version