Site icon TUNGATARANGA

ಅತಿ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ಹೋಟೆಲ್ ಉದ್ಯಮ:ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್

ಶಿವಮೊಗ್ಗ: ಹೋಟೆಲ್ ಉದ್ಯಮ ಒಂದು ಪ್ರಯಾಸಕರ ವ್ಯವಹಾರ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ಉದ್ಯಮ ಹೋಟೆಲ್ ಕ್ಷೇತ್ರ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.


ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಥುರಾ ಪಾರಡೈಸ್ ರಜತೋತ್ಸವ ಸಮಿತಿಯ ವತಿಯಿಂದ ರಜತೋತ್ಸವ ಸಂಭ್ರಮಾಚರಣೆಯ ಉದ್ಘಾಟನೆಯನ್ನು ಮಾಡಿ  ಮಾತನಾಡುತ್ತ ಶಿಕ್ಷಣ ಪಡೆದವರು, ಪಡೆಯದೇ ಇರುವವರು ಸೇರಿದಂತೆ ಎಲ್ಲ

ವರ್ಗದವರಿಗೂ ವಸತಿ, ಊಟದ ಜತೆಗೆ ಸಂಬಳ ನೀಡುವ ಉದ್ಯಮ ಹೋಟೆಲ್ ಆಗಿದೆ ಎಂದು ಹೇಳಿದರ. ಶಿವಮೊಗ್ಗ ನಗರದಲ್ಲಿ ಗೋಪಿನಾಥ್ ರವರು ಉಧ್ಯಮದ ಜೊತೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಇತರೆ ಉದ್ಯಮಿದಾರರಿಗೆ ಮಾರ್ಗದರ್ಶಕರಾಗಿದ್ದರೆ ಎಂದು ಮಥುರ ಪ್ಯಾರಡೈಸ್ ಗೋಪಿನಾಥ್ ರವರನ್ನು ಪ್ರಶಂಸಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಕೆ.ಪಿ.ಶ್ರೀಪಾಲ್ ಮಾತನಾಡುತ್ತ ಮಥುರಾ ಹೋಟೆಲ್ ವ್ಯಾಪಾರ ವಹಿವಾಟಿನ ಜತೆಯಲ್ಲಿ ಸಮಾಜಮುಖಿ ವೇದಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡುತ್ತ 25 ವರ್ಷಗಳ ಹಿಂದೆ ಶಿವಮೊಗ್ಗದ ಸಣ್ಣ ನಗರದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಉತ್ತಮ ಹೋಟೆಲ್ ಮತ್ತು ವಸತಿಗೃಹ ಪ್ರಾರಂಭಿಸುವ ಧೈರ್ಯ ಮಾಡಿದ್ದರು ಗೋಪಿನಾಥ್ ರವರು ಎಲ್ಲಾ ಕಾರ್ಯಕ್ರಮಗಳಿಗೆ ಸಹಯಹಸ್ತವನ್ನು ನೀಡಿ ಸಂಘ ಸಂಸ್ಥೆಗಳಿಗೆ ಸಹಕಾರವನ್ನು ನೀಡುತ್ತಿದ್ದರು  ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡುತ್ತ ಮಥುರಾ ಗೋಪಿನಾಥ್ ಅವರು ಒಬ್ಬ ದೂರದರ್ಶಿ. ನಮ್ಮ ಕನಸಿನ ಶಿವಮೊಗ್ಗ ಎಂಬ ಸಂಸ್ಥೆ ರೂಪಿಸಿ ಹಲವಾರು ಉತ್ತಮ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ವಿಶೆಷವಾಗಿ ಶಿವಮೊಗ್ಗ ನಗರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜ್ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ ಹೋಬಳಿದಾರ್ ಮಾತನಾಡಿ, ಪ್ರತಿಯೊಬ್ಬ ಉದ್ಯಮಿ ತನ್ನ ಉದ್ಯಮದ ಜತೆಗೆ ಸಮಾಜದ ಏಳಿಗೆಗೆ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದಲ್ಲಿ ಎಲ್ಲ ಸಮುದಾಯಗಳು, ನಗರಗಳು ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿ ಇದಕ್ಕೆ ಉತ್ತಮ ನಿದರ್ಶನ ಎಂದರೆ ಗೋಪಿನಾಥ್ ರವರು.

ರಜತೋತ್ಸವ ಸಂಭ್ರಮವನ್ನು ನಗರದ  50 ವಿವಿಧ ಸಂಘ ಸಂಸ್ಥೆಗಳು ನಡೆಸಲು ತೀರ್ಮಾನಿಸಿರುವುದು
 ಮಥುರಾ ಗೋಪಿನಾಥ್ ಅವರ ಬಗ್ಗೆ ಇರುವ ಅಭಿಮಾನವಾಗಿದೆ ಎಂದರು.

ಮಥುರಾ ಪಾರಡೈಸ್ ಮಾಲೀಕ ಎನ್.ಗೋಪಿನಾಥ್ ಹಾಗೂ ಡಾ. ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ರಜತೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಶಿವಮೊಗ್ಗ ನಗರಕ್ಕೆ ಆಗಮಿಸಿದ ದಾವಣಗೆರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರಿಗೆ ಗೌರವಿಸಿ ಸಭೆಗೆ ಅವರ ಕಾರ್ಯವೈಖರಿ ಪರಿಚಯಿಸಲಾಯಿತು.

ಸಮಾರಂಭದಲ್ಲಿ ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿರೇಂದ್ರ ಕಾಮತ್, ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ ಉಪಸ್ಥಿತರಿದ್ದರು.

ಜಿ.ವಿಜಯಕುಮಾರ್ ಸ್ವಾಗತಿಸಿದರು ಅ.ನಾ. ವಿಜಯೇಂದ್ರ ರಾವ್ ಪ್ರಾಸ್ತಾವಿಕ ಮಾಡಿದರು. ನಾಗಭೂಷಣ್ ವಂದಿಸಿದರು. ಕೃಷ್ಣಾನಂದ ಕೆ.ಜಿ. ಕಾರ್ಯಕ್ರಮ ನಿರೂಪಣೆ ಮಾಡಿದರು.

Exit mobile version