Site icon TUNGATARANGA

ಮೆಗ್ಗಾನ್‌ನಲ್ಲಿ ಏನಿದು ವ್ಯವಹಾರ ಹಣ ಕೊಟ್ರೆ ಮಾತ್ರನ ಕೆಲಸ ? ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದು ಯಾರು ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ ಮಾಡಿರುವ ಅರೋಪವೇನು ?

ಶಿವಮೊಗ್ಗ,ಜು.೨೫: ಮೆಗ್ಗಾನ್ ಬೋಧನ ಆಸ್ಪತ್ರೆಯಲ್ಲಿ ಡಾಟಾಎಂಟ್ರಿ ಕೆಲಸಕ್ಕಾಗಿ ಒಂದು ಲಕ್ಷ ರೂ. ಪಡೆದು ಕೆಲಸ ನೀಡದೇ ಮಹಿಳಾ ಕಾರ್ಮಿಕರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ ಇಂದು ಮೆಗ್ಗಾನ್ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.

ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ೨೦೨೦ರಲ್ಲಿ ಡಾಟಾ ಎಂಟ್ರಿ ಕೆಲಸಕ್ಕಾಗಿ ಗುತ್ತಿಗೆದಾರ ಪುರುಷೋತ್ತಮ್ ಎಂಬಾತ ಮಹಿಳಾ ಕಾರ್ಮಿಕರಾದ ಸುಕನ್ಯಾ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಒಂದು ಲಕ್ಷ ರೂ.

ತೆಗೆದುಕೊಂಡಿದ್ದಾರೆ. ಒಮ್ಮೆ ೬೦ ಸಾವಿರ ಮತ್ತೊಮ್ಮೆ ೪೦ ಸಾವಿರ ರೂ.ಗಳನ್ನು ಸುಕನ್ಯಾ ಅವರು ಪುರುಷೊತ್ತಮ ಅವರಿಗೆ ಪೋನ್ ಪೇ ಮೂಲಕ ನೀಡಿದ್ದಾರೆ ಇದಕ್ಕೆ ಆಧಾರವಿದೆ ಎಂದರು.

ಆದರೆ, ೨೦೨೪ರಲ್ಲಿ ಯಾವುದೇ ಕಾರಣವಿಲ್ಲದೆ ಸುಕನ್ಯಾ ಅವರನ್ನು ನೋಟೀಸ್ ಕೂಡ ಜಾರಿಮಾಡದೇ ಕೆಲಸದಿಂದ ತೆಗೆದು ಹಾಕಿದ್ದಾರೆ. ಕಾರಣ ಕೇಳಿದರೆ, ಸಬೂಬು ಹೇಳುತ್ತಿದ್ದಾರೆ.

ಇದರಿಂದ ಮಹಿಳಾ ಕಾರ್ಮಿಕರಾದ ಸುಕನ್ಯಾ ಅವರಿಗೆ ಅನ್ಯಾಯವಾಗಿದೆ. ಕೂಡಲೇ ಅವರನ್ನು ಪುನಃ ಕೆಲಸಕ್ಕೆ ನೇಮಿಸಬೇಕು ಮತ್ತು ಮಾಹಿತಿ ಹಕ್ಕು ಕೇಳಿದರೆ ಅದನ್ನು ಕೂಡ ನೀಡಿಲ್ಲ ಮಾಹಿತಿ ಹಕ್ಕು ನೀಡಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ  ವಾಟಾಳ್‌ಮಂಜುನಾಥ್, ಸತೀಶ್ ಗೌಡ, ಅಕ್ಬರ್ ಬಾಷಾ, ನಿತಿನ್ ರೆಡ್ಡಿ, ರವಿಸಾಧುಶೆಟ್ಟಿ, ಲೋಕೇಶ್, ಚೇತನ್, ಮಾರುತಿ, ರಾಘವೇಂದ್ರ ಮುಂತಾದವರು ಇದ್ದರು. (

Exit mobile version