Site icon TUNGATARANGA

ಅವ್ಯವಸ್ಥೆಯ ಆಗರ: ಶಿವಮೊಗ್ಗ ಹನುಮಂತನಗರ ಬಡಾವಣೆ ಗೋಳು ಪಾಲಿಕೆ ಅಧಿಕಾರಿಗಳೇ ಇದನ್ನು ಗಮನಿಸಿದ್ದೀರಾ ?ಇದು ಗೋಪಾಳದ ಮಗ್ಗುಲಲ್ಲೇ ಇದೆ

ಶಿವಮೊಗ್ಗ,ಜು.23: ಶಿವಮೊಗ್ಗ ನಗರವು ಸ್ಮಾಟ್೯ ಸಿಟಿ ಎನಿಸಿ ಕೆಲ ವರ್ಷಗಳು ಕಳೆದಿವೆ.ಸ್ಮಾಟ್೯ ಸಿಟಿ ಅನುಷ್ಠಾನಕ್ಕಾಗಿ ನೂರಾರು ಕೋಟಿ ಹಣವನ್ನು ವ್ಯಯಿಸಿ ಬಹಳಷ್ಟು ಬದಲಾವಣೆ ಮಾಡಿದ್ದರೂ

ಕೂಡಾ ನಗರ ವ್ಯಾಪ್ತಿಯ ಹಲವು ಬಡಾವಣೆಗಳು ಮೂಲ ಸೌಕರ್ಯಗಳಿಲ್ಲದೇ ಅಲ್ಲಿನ ನಾಗರೀಕರು ತೊಂದರೆ ಪಡಬೇಕಾದ ಸ್ಥಿತಿಯಂತೂ ಇನ್ನೂ ಮುಂದುವರೆದಿರುವುದು ದುರಂತವೇ ಸರಿ.


ನಗರದ ಪ್ರತಿಷ್ಠಿತ ಬಡಾವಣೆಗಳೊಲ್ಲೊಂದಾದ ಸ್ವಾಮಿ ವಿವೇಕಾನಂದ ಬಡಾವಣೆಗೆ ಹೊಂದಿಕೊಂಡಿರುವ ಹನುಮಂತನಗರ ಬಡಾವಣೆ ಅವ್ಯವಸ್ಥೆಗಳ ಆಗರವಾಗಿದೆ.

ಸುಮಾರು ಮೂವತ್ತು ವರ್ಷಗಳ ಹಿಂದಿನ ಬಡಾವಣೆಯಾಗಿದ್ದರೂ ರಸ್ತೆಗಳಂತೂ ಡಾಂಬರನ್ನೇ ಕಂಡಿಲ್ಲ.ಬಹಳಷ್ಟು ಮನೆಗಳಿದ್ದರೂ ಬೀದಿ ದೀಪದ ವ್ಯವಸ್ಥೆಗಳಿಲ್ಲ.ಯುಜಿಡಿ,ಬಾಕ್ಸ್ ಚರಂಡಿ ಸೇರಿದಂತೆ ಯಾವ ಮೂಲ ಸೌಕರ್ಯಗಳು ಇಲ್ಲದಿರುವುದರಿಂದ

ಬಡಾವಣೆ ನಿವಾಸಿಗಳು ಪರದಾಡುವಂತಾಗಿದೆ.ಈ ಬಡಾವಣೆ ವ್ಯಾಪ್ತಿಯಲ್ಲಿ ವಸತಿ ಶಾಲೆ ಕೂಡಾ ಇದ್ದು ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಈ ಬಗ್ಗೆ ಕಾರ್ಪೋರೇಟರ್ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ತಿಳಿಸಿದ್ದಾರೆ.ಅದರ ಫಲವಾಗಿ ಇತ್ತೀಚೆಗೆ ಬಡಾವಣೆ ನಿವಾಸಿಗಳೇ ಒಗ್ಗೂಡಿ ಅಕ್ಕ ಪಕ್ಕದ ಖಾಲಿ ಸೈಟ್ ಸೇರಿದಂತೆ ರಸ್ತೆಯ ಇಕ್ಕೆಲಗಳ ಗಿಡಗಂಟಿ ತೆಗೆದು ಸ್ವಚ್ಚಗೊಳಿಸುತ್ತಿದ್ದಾರೆ.

ಅಲ್ಲದೇ ಬಡಾವಣೆ ವ್ಯಾಪ್ತಿಯ ನಾಮಫಲಕಗಳನ್ನು ಬರೆಸಿದ್ದಾರೆ.ಈ ಮೂಲಕ ಬಡಾವಣೆ ಅಭಿವೃದ್ಧಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ನೆರವಾಗಬೇಕೆಂಬುದು ಬಡಾವಣೆ ನಿವಾಸಿಗಳ ಒಕ್ಕೊರಲಿನ ಆಗ್ರಹವಾಗಿದೆ.

Exit mobile version