Site icon TUNGATARANGA

ಸಿಟಿ ಸೆಂಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಮಹಿಳೆಗೆ ತಪ್ಪಿತು ಭಾರೀ ಅನಾಹುತ !

ಶಿವಮೊಗ್ಗ : ಇತ್ತೀಚಿಗೆ ಸಿಟಿ ಸೆಂಟರ್ ನ ಭಾರತ್ ಸಿನೆಮಾಸ್ ಕನ್ನಡ ಚಲನಚಿತ್ರ ವೀಕ್ಷಣೆಗೆ ಸ್ವಯಂಚಾಲಿತ ಯಂತ್ರ ಮೆಟ್ಟಿಲುಗಳಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರು ಆಯ ತಪ್ಪಿ ಬಿದ್ದಾಗ ತಕ್ಷಣವೇ ಸ್ವಿಚ್ ಆಫ್ ಮಾಡಿ ಹೆಚ್ಚಿನ ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ಅಲ್ಲಿನ ಸಿಬ್ಬಂದಿ ಸುಮಾರವರನ್ನು ಸನ್ಮಾನಿಸುವುದರ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.

ಎಸ್ಕ್ಯೂ ಲೇಟರ್ ನಲ್ಲಿ ಹತ್ತುವಾಗ ಇಳಿಯುವಾಗ ಬಹಳ ಜಾಗರೂಕರಾಗಿ ಇರುವುದು ಒಳ್ಳೆಯದು. ಪರಸ್ಪರ ಕೈ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿಕೊಂಡು ತೆರಳುವುದು ಅನಾಹುತಕ್ಕೆ ಕಾರಣವಾಗಬಹುದು. ಒಂದು ವೇಳೆ ಬೀಳುವ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸೇವೆ ನಿರ್ವಹಿಸಲು ತತ್ ಕ್ಷಣ ಲಭ್ಯವಿಲ್ಲದಲ್ಲಿ ಅವಘಡದ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.

ಸಿಬ್ಬಂದಿ ಸುಮಾ ಮಾತನಾಡಿ, ಇದೇ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಆದರೆ ಈ ಇತ್ತೀಚಿಗೆ ನಡೆದ ಘಟನೆಯ ಸಂದರ್ಭದಲ್ಲಿ ಡ್ಯೂಟಿಯಲ್ಲಿ ನಾನಿದ್ದೆ. ಅಪಾಯದ ಅರಿವಿನ ಸೂಚನೆ ದೊರಕಿದ ಕೂಡಲೇ ಸ್ವಿಚ್ ಆಫ್ ಮಾಡಿದೆ.

ದೊಡ್ಡ ಅಪಾಯ ಸಣ್ಣದರಲ್ಲಿ ಮುಗಿಯಿತು. ಹಾಗಾಗಿ ಎಲ್ಲರಿಗೂ ನಾನು ಹೇಳಬಯಸುವುದು ಇಂತಹ ಯಂತ್ರಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡೇ ಮಾಡುತ್ತೇವೆ. ನಮ್ಮ ಕರ್ತವ್ಯವನ್ನು ಮೆಚ್ಚಿ ಗೌರವ ನೀಡಿದ್ದಾರೆ, ಅದಕ್ಕಾಗಿ ಶಾಂತಾ ಮೇಡಮ್ ರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಂತಾ ಎಸ್ ಶೆಟ್ಟಿ ಹಾಗೂ ಶೋಭಸತೀಶ್, ಜಿ.ವಿಜಯಕುಮಾರ್, ಭದ್ರಾವತಿ ವಾಸು, ಕೆ.ಎಸ್.ಮಂಜುನಾಥ್, ತ್ರಿವೇಣಿ, ಸುಶೀಲ, ರವಿ, ಮಂಜುನಾಥ್, ಶಶಿಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version