ಶಿವಮೊಗ್ಗ,ಜು.20: ಸಾಮಾನ್ಯ ಜನರು ನೆಮ್ಮದಿಯಿಂದ ಜೀವನ ಮಾಡುವಂತಹ ಬಜೆಟ್‍ನ್ನು ಕೇಂದ್ರ ಸರ್ಕಾರ ಮಂಡಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ಗಾಜನೂರಿನ ತುಂಗಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎನ್‍ಡಿಎ ಸರ್ಕಾರ ಜು.23ರಂದು ಬಜೆಟ್ ಮಂಡನೆ ಮಾಡಲಿದೆ. ಈ ಬಾರಿಯ ಬಜೆಟ್ ಐತಿಹಾಸಿಕ ಬಜೆಟ್ ಆಗಲಿದೆ. ಎಲ್ಲ ಬಡವರು ನೆಮ್ಮದಿಯಿಂದ ಜೀವನ ಮಾಡುವಂತಹ ಬಜೆಟ್‍ನ್ನು ಮಂಡಿಸುವ ವಿಶ್ವಾಸವಿದೆ ಎಂದರು.
ಹಾಗೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚು ಅನುದಾನದ ನಿರೀಕ್ಷೆಯಲಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಪ್ರವಾಸೋಧ್ಯಮಕ್ಕೆ ಹೆಚ್ಚಿನ ನೆರವು ಸಿಗಲಿದೆ. ಈಗಾಗಲೇ ಬೀರೂರು -ಶಿವಮೊಗ್ಗ ನಡುವೆ ಡಬ್ಲಿಂಗ್ ಮಾಡಲು 1600 ಕೋಟಿ ನೆರವು ಸಿಗಲಿದೆ. ಹಾಗೆಯೇ ಆಗುಂಬೆ 12ಕಿ.ಮೀ. ಟೆನಲ್ ಕೂಡ ಆಗಬೇಕಾಗಿದೆ. ಒಟ್ಟಾರೆ ಈ ವರ್ಷ ಸುಮಾರು 10 ಸಾವಿರ ಕೋಟಿ ಕ್ಷೇತ್ರದ ಅಭಿವೃದ್ಧಿಗೆ ಬರಲಿದೆ ಎಂದರು.
ತುಂಗೆಗೆ ಬಾಗಿನವನ್ನು ಸಂತೋಷದಿಂದ ಅರ್ಪಿಸಿದ್ದೇನೆ. ಇದು ಜೀವನದಿಯಾಗಿದೆ. ಕಳೆದ ಬಾರಿ ಬರಗಾಲವಿತ್ತು, ರೈತರ ಕಣ್ಣಿನಲ್ಲಿ ನೀರಿತ್ತು. ಈಗ ಮಳೆಯಾಗಿದೆ. ರೈತರಲ್ಲಿ ಹರ್ಷ ತಂದಿದೆ. ಸುಮಾರು 80 ಸಾವಿರ ಹೆಕ್ಟೇರ್‍ಗೆ ಇದು ನೀರುಣ್ಣಿಸುತ್ತದೆ. ರೈತರು ನೀರನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅರಗಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಬಿ.ಅಶೋಕ್‍ನಾಯ್ಕ್, ಎಸ್. ದತ್ತಾತ್ರಿ, ಅನಿತಾ ರವಿಶಂಕರ್, ಯಶೋಧ, ಪವಿತ್ರ ರಾಮಯ್ಯ, ಸುಮಾಭೂಪಾಳಂ, ಸಂತೋಷ ಬೆಳ್ಳಕೆರೆ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಕೆ.ವಿ.ಅಣ್ಣಪ್ಪ, ವಿನ್ಸಂಟ್ ರೂಡ್ರಿಗಸ್ ಸೇರಿದಂತೆ ಇನ್ನಿತರರಿದ್ದರು.