Site icon TUNGATARANGA

ಗುರುಪೂರ್ಣಿಮೆ ಎಂದರೇನು ?ಗುರು ಪೂರ್ಣಿಮೆಯ ಮಹತ್ವ ಹಾಗೂ ಇದರ ವಿಶೇಷತೆ ಏನು ಸಾಹಿತಿ ರಾ. ಹ. ತಿಮ್ಮೇನಹಳ್ಳಿ ರವರ ಲೇಖನದಲ್ಲಿ ಸಂಪೂರ್ಣ ವಿವರ

         ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಬರುವುದು, ಆಶಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನವೆಂದು ಪ್ರತೀತಿ.ವೇದವು ಮೊದಲು ಒಂದೇ ಆಗಿತ್ತು, ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು,  ವ್ಯಾಸ ವೆಂದರೆ  ವಿಂಗಡಿಸುವುದು ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು.

ಗುರುಪೂರ್ಣಿಮೆ ಎಂದರೇನು:  ಇಂದು ಗುರುಪೂರ್ಣಿಮೆಯ ಹಬ್ಬ,ಹಿಂದೂ ಪಂಚಾಂಗದ ಪ್ರಕಾರ ಆಶಾಡ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರುಪೂರ್ಣಿಮೆಯಂದು ಆಚರಿಸುತ್ತಾರೆ. ಈ ದಿನದಂದು ಹಿಂದೂಗಳು ಮತ್ತು ಬೌದ್ಧರು ಸಹ ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ.

          ಅಂದರೆ ನಾನು, ನಾನು ಯಾರೆಂದು ತಿಳಿಯುವುದೇ ಜ್ಞಾನ, ಭಗವಾನ್ ರಮಣ ಮಹರ್ಷಿಗಳು ಸಹ ಇದನ್ನೇ ಹೇಳಿರುವುದು, ಇದನ್ನು ತಿಳಿಯಲು ಸರಿಯಾದ ಸದ್ಗುರು ಬೇಕಾಗುವುದು, ಆದ್ದರಿಂದಲೇ ಪುರಂದರದಾಸರು ಈ ರೀತಿ ಹೇಳಿರುವುದು,ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು.

ಗುರು ಪೂರ್ಣಿಮೆಯ ಮಹತ್ವ : ಪ್ರಭುದ್ಧ ಮನಸ್ಸು ಮತ್ತು ಆತ್ಮವಿಲ್ಲದ ಮಾನವರು ಕೇವಲ ಮಾಂಸ ಮತ್ತು ಮೂಳೆಯಿಂದ ಕೂಡಿರುವ ವ್ಯಕ್ತಿಯಾಗಿರುತ್ತಾನೆ. ಹುಟ್ಟಿದ ಮಗುವಿಗೆ ಆರಂಭದಲ್ಲಿ ಎಲ್ಲವನ್ನು ತಿಳಿಸಿ ಕೊಡುವವಳು ತಾಯಿ, ತಾಯಿಯೇ ಮಗುವಿನ ಮೊದಲ ಗುರು, ತಾಯಿ ಉತ್ತಮ ಜ್ಞಾನ ಹಾಗೂ ಸಂಸ್ಕಾರದ ವರ್ತನೆಯನ್ನು ತಿಳಿದಿದ್ದರೆ,ಮಗು ಸಹ ಅವುಗಳನ್ನು ಕಲಿಯುತ್ತದೆ.ಜೀವನದಲ್ಲಿ ಅತ್ಯುತ್ತಮ ಗುರುಗಳಿಂದ  ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಂತರದ ಹಂತದಲ್ಲಿ ವಿದ್ಯೆ ಕಲಿಸುವ ಗುರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಮನುಷ್ಯನನ್ನು ಅತ್ಯಾಧುನಿಕ ವ್ಯಕ್ತಿಯನ್ನಾಗಿ ಮಾಡುವ ಉತ್ತಮ ಗುರುಗಳನ್ನು ಮತ್ತು ಅವರ ಬೋಧನೆಗಳನ್ನು ನೀಡುವವರು ಗುರುಗಳು.

          ಒಬ್ಬ ವ್ಯಕ್ತಿಯ ಮೊದಲ ಗುರು ಅಥವಾ ಶಿಕ್ಷಕ ತಾಯಿ,ತಾಯಿ ಮಗುವಿಗೆ ಜೀವನದ ನಿಜವಾದ ಮೌಲ್ಯಗಳನ್ನು ಅರ್ಥ ಮಾಡಿಸಿಕೊಡುತ್ತಾಳೆ. ಸರಿ ಮತ್ತು ತಪ್ಪುಗಳ ನಡುವೆ ಹೇಗೆ ವ್ಯತ್ಯಾಸವನ್ನು ತಿಳಿಸಿ ಕೊಡುವಳು. ಬಾಲ್ಯದಲ್ಲಿ ಅವಳು ನೈತಿಕ ಮೌಲ್ಯಗಳನ್ನು ಅವನಲ್ಲಿ ತುಂಬುತ್ತಾಳೆ.

ಬೌದ್ಧ ಧರ್ಮದಲ್ಲಿ ಗುರುಪೂರ್ಣಿಮೆ : ಈ ಧರ್ಮಕ್ಕೆ ಅಡಿಪಾಯ ಹಾಕಿದ ಭಗವಾನ್ ಬುದ್ಧನಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಹುಣ್ಣಿಮೆಯ ದಿನದಂದು ಭಗವಾನ್ ಬುದ್ಧ ಗಯಾದಲ್ಲಿನ ಬೋಧಿ ಮರದ ಕೆಳಗೆ  ಜ್ಞಾನೋದಯ ಪಡೆದ ನಂತರ ಉತ್ತರ ಪ್ರದೇಶದ ಸಾರಾನಾಥದಲ್ಲಿ ತಮ್ಮ ಮೊದಲ ಧರ್ಮೋಪದೇಶವನ್ನು ನೀಡಿದರು ಎಂದು ಬೌದ್ಧರು ನಂಬುತ್ತಾರೆ. ಅಂದಿನಿಂದ ಈ ಹಬ್ಬವನ್ನು ಆರಾಧಿಸಲು ಸಮರ್ಪಿಸಲಾಯಿತು.

ಬುದ್ಧನು ತನಗೆ ಜ್ಞಾನೋದಯವಾಗಿ ಐದು ವಾರಗಳ ನಂತರ ಬೋಧಗಯಾ ಇಂದ ಸಾರಾನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ  ಮುಂಚೆ ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ, ಆಗ ಅವನ ಗೆಳೆಯರಾದ  ಸನ್ಯಾಸಿಗಳು ಗೌತಮನನ್ನು ಬಿಟ್ಟು ಸಾರಾನಾಥಗೆ ಹೋದರು.  ಬುದ್ಧನಿಗೆ ತನ್ನ ಅಧ್ಯಾತ್ಮಿಕ ಶಕ್ತಿಯಿಂದ ಆತನ ಐದು ಸಂಗಾತಿಗಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು  ಹುಡುಕಿಕೊಂಡು ಉರುವೇಲಾ ಯಿಂದ ಸಾರಾನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕನಿಗೆ ಕೊಡಲು ದುಡ್ಡು ಇಲ್ಲದ ಕಾರಣ, ಗೌತಮಬುದ್ಧನು ಗಾಳಿಯಲ್ಲಿಯೇ ದಾಟಿದರು. ಇದನ್ನು ಕೇಳಿದ ಅಲ್ಲಿಯ ರಾಜ ಬಿಂದುಸಾರನೂ ನದಿ ದಾಟುವ ಸನ್ಯಾಸಿಗಳಿಗೆ  ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದರು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮಬೋಧನೆ ಮಾಡಿದನು, ಅದನ್ನು ಸ್ವೀಕರಿಸಿ ಅರ್ಥಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು.

        ಆದ್ದರಿಂದ ನಮ್ಮ ಗುರುಗಳನ್ನು ಗೌರವಿಸುವ ಮೂಲಕ ಈ ದಿನದ ಆಚರಣೆ ಅತ್ಯಗತ್ಯವಾಗುತ್ತದೆ. ನಮ್ಮ ಗುರುಗಳು, ಪೋಷಕರು-ಶಿಕ್ಷಕರು ಮತ್ತು ನಮ್ಮ ಹಿತೈಷಿಗಳು ಸರಿಯಾದ ಬೋಧನೆಗಳು ಮತ್ತು ಆಶೀರ್ವಾದಗಳು ಮಾತ್ರ ನಮ್ಮನ್ನು ಸುಸಂಸ್ಕೃತ  ಮತ್ತು ಪರಿಷ್ಕೃತ ವ್ಯಕ್ತಿಯನ್ನಾಗಿ ಮಾಡಬಹುದು.

    ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

    ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ, ಎನ್ನುವ ನಂಬಿಕೆ ಇದೆ. ಗುರು ಅನ್ನುವ ಶಬ್ದ ‘ಗು ‘ ಮತ್ತು ‘ರು ‘ ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ’ ಗು’ ಅಂದರೆ ಅಂಧಕಾರ ಅಥವಾ ಅಜ್ಞಾನ ‘ ರು’ ಅಂದರೆ ದೂರಮಾಡುವ ಎಂದರ್ಥ, ಅದಕ್ಕೆ ಗುರು ಅಂದರೆ ಅಂದಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಎಲ್ಲಾ ಕಾರ್ಯಗಳಿಗೆ ಮೊದಲು ಗುರು ಪೂಜೆ ಮಾಡಿಯೇ ತೀರಬೇಕು. ವೇದಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋ ನಮಃ ಹರಿಃ ಓಂ ಎಂದು ಹೇಳಿ ಪ್ರಾರಂಭಿಸಬೇಕು. ಎಲ್ಲಾ ಮಾನವ ಜಾತಿಗೆ ಮೂರು ಶಬ್ದಗಳ ಮೂಲಕ ದಾರಿಯನ್ನು ತೋರಿಸಿದ್ದಾರೆ. ಅವು ಯಾವುವು ಎಂದರೆ ‘ನಹೀ  ಜ್ಞಾನೇನ ಮುಕ್ತಿ: ‘ ಅಂದರೆ ಜ್ಞಾನವಿಲ್ಲದೇ ಮುಕ್ತಿ ಇಲ್ಲವೆಂದು, ಮಾನವನು ಜನ್ಮಜನ್ಮಾಂತರದಿಂದ ಕರ್ಮ ಸಂಸ್ಕಾರಗಳ ಜಂಜಾಟದೊಳಗೆ ಮುಳುಗಿದ್ದಾನೆ.

ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು, ಜ್ಞಾನ ಎಂದರೆ ನಮ್ಮ ಬುದ್ಧಿ ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಆದರೆ ಮಹಾಜ್ಞಾನಿಗಳು ಆಂತರಿಕ ಜ್ಞಾನವೆಂದು ಹೇಳಿದ್ದಾರೆ.

Exit mobile version