Site icon TUNGATARANGA

ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರ ಪರ ಆಯನೂರು ಮಂಜುನಾಥ್‌ಗೆ :ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸಖತ್ ಬ್ಯಾಟಿಂಗ್

ಶಿವಮೊಗ್ಗ,ಜು.18: ಶಾಸಕ ಆರಗ ಜ್ನಾನೇಂದ್ರರ ಐದನೇ ಬಾರಿ ಆಯ್ಕೆ ಪ್ರಾಮಾಣಿಕತೆ ಗೆ ಸಾಕ್ಷಿ. ಸೋತಾಗಲೂ ಅನುದಾನ ತಂದಿರುವ ಕೀರ್ತಿ ಇದೆ. ಆದರೂ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದ್ದಾರೆ.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್ ವಸತಿ ಕಟ್ಟಡ ಉದ್ಘಾಟನೆಯ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಪ್ರಮುಖರೇ ಜ್ನಾನೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ. ಕ್ಷೇತ್ರಕ್ಕೆ ತಂದ ಅನುದಾನ ಶ್ಲಾಘನೀಯ ಎಂದಿದ್ದಾರೆ.

ಆದರೆ ಸಲ್ಲದ ಟೀಕೆ ಆಯನೂರು ಮಂಜುನಾಥ್‍ಗೆ ಸಲ್ಲದು. ಅವರ ಮಾತು ಖಂಡನೀಯ, ರಾಜಕೀಯ ರಚನಾತ್ಮಕವಾಗಿ ಮಾಡಲಿ. ಪೂರ್ವಾಗ್ರಹ ಪೀಡಿತ ಸಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸುವ ಕೊರೆದಿರುವಲ್ಲಿ ನೀರು ಜಿನುಗಿದೆ. ಸರಿಯಾದ ಮಾಹಿತಿ ಪಡೆಯದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ತೀರ್ಥಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ಹೆದ್ದೂರು ಮಾತನಾಡಿ, ತೀರ್ಥಹಳ್ಳಿ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಜ್ನಾನೇಂದ್ರ ಆರೋಪ, ಕಪ್ಪು ಚುಕ್ಕೆ ಹೊಂದಿಲ್ಲದ ರಾಜ್ಯದ ನಾಯಕ. ಯಡಿಯೂರಪ್ಪ ಜೊತೆಗೆ ರಾಜಕೀಯ ಆರಂಭ ಮಾಡಿ. ಐದು ಅವಧಿ ಶಾಸಕ ಆಗಿದ್ದರೂ ಅವರು ಎಂದಿಗೂ ಮಂತ್ರಿಗಿರಿಗೆ ಲಾಭಿ ಮಾಡಿಲ್ಲ. ಒಂದೂವರೆ ವರ್ಷ ಮಂತ್ರಿ ಆಗಿದ್ದರು, ಕಳೆದ ಅವಧಿಯಲ್ಲಿ 3500 ಕೋಟಿ ಅನುದಾನ ತಂದಿದ್ದಾರೆ. ಸೇತುವೆ, ರಸ್ತೆ, ಶಾಲಾ ಕಟ್ಟಡ ಸೇರಿ ಅನುದಾನ ತಂದಿದ್ದು, ಹಿಂದೆ ಯಾವ ಜನಪ್ರತಿನಿಧಿ ಕೂಡ ಅಷ್ಟು ಅನುದಾನವನ್ನು ತೀರ್ಥಹಳ್ಳಿಗೆ ತಂದಿಲ್ಲ ಎಂದರು.

ಆಯನೂರು ಮಂಜುನಾಥ್ ಬಿಜೆಪಿಯಲ್ಲಿರುವಾಗ ನಾಲ್ಕು ಸದನದ ಮೆಟ್ಟಲು ಹತ್ತಿದ್ದಾರೆ. ಅವರ ಬಗ್ಗೆ ಅಯ್ಯೋ ಅನ್ನಿಸುತ್ತೆ. ಸವಕಲು ನಾಣ್ಯ, ತನ್ನ ಅಸ್ತಿತ್ವಕ್ಕಾಗಿ ಪ್ರಚಾರದ ದುರುದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ತೀರ್ಥಹಳ್ಳಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುವುದನ್ನು ಹೇಳಲಿ. ಈಗ ಅಧಿಕಾರ ಇರುವ ಪಕ್ಷದಲ್ಲಿ ಇದ್ದಾರೆ, ತನಿಖೆ ಮಾಡಿಸಲಿ, ಎಲ್ಲಾ ತನಿಖಾ ತಂಡಗಳು ಅವರ ಸರ್ಕಾರದ ಬಳಿಯೇ ಇದೆ. ಆರೋಪ ಸಾಬೀತಾಗಲಿ. ಹಿಟ್ ಅಂಡ್ ರನ್ ಬೇಡ ಎಂದರು.

ಮಲೆನಾಡಿನಲ್ಲಿ ಮಳೆ ಹೆಚ್ಚು ಇರುವುದರಿಂದ ಸೋರುವುದು ಸಹಜ. ಕಾಮಗಾರಿ ಪರಿಶೀಲಿಸಿ. ಆರ್‍ಸಿಸಿ ಸೋರುತ್ತಿಲ್ಲ, ಸರ್ಕಾರದ ಪ್ಲಾನ್‍ನಂತೆ ಒಂದೇ ಮಾದರಿ ಕಟ್ಟಡ ನಿರ್ಮಾಣ ಆಗುತ್ತದೆ. ಮಲೆನಾಡು, ಕರಾವಳಿ ಭಾಗಕ್ಕೆ ಬೇರೆ ಯೋಜನೆ ಮಾಡಬೇಕು. ಯಾರೇ ಮನೆ ಕಟ್ಟಿದರೂ ಎರಡು ವರ್ಷದಲ್ಲಿ ಮೇಲ್ಛಾವಣಿ ಹಾಕುವ ಸ್ಥಿತಿ ಇದೆ. ಖಾಸಗಿಯವರು ತಮ್ಮ ಸ್ವಂತಕ್ಕಾಗಿ ಕಟ್ಟಡಗಳು ಕೂಡ ಆರ್‍ಸಿಸಿ ಕೆಲವು ಬಾರಿ ಸೋರುತ್ತದೆ. ಅದಕ್ಕಾಗಿ ಅನೇಕರು ಮೇಲ್ಗಡೆಗೆ ಶೀಟ್ ಹಾಕುತ್ತಾರೆ ಎಂಬುವುದು ಆಯನೂರು ತಿಳಿಯಬೇಕು ಎಂದರು. 

ಅಭಿವೃದ್ಧಿ ಬೇಕು ಅನ್ನುವ ಒತ್ತಡ ಇದೆ. ಯೋಜನೆ ಮಾಡುವಾಗ ಅಧಿಕಾರಿಗಳು ತಂತ್ರಜ್ಞಾನ ಬಳಕೆ ಮಾಡಬೇಕು. ಭಾನುವಾರ ತೀರ್ಥಹಳ್ಳಿ ವಾಹನ ನಿಲುಗಡೆ ಜಾಗ ಇರುವುದಿಲ್ಲ. ಇದನ್ನೂ ಗಮನಿಸಬೇಕು. ಹೆದ್ದಾರಿ ತಡೆಗೋಡೆ ಕುಸಿತದ ಬಗ್ಗೆ ಕೂಡ ತನಿಖೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಕೆ ವಿ ಅಣ್ಣಪ್ಪ, ಮಾಲತೇಶ್, ಕುಪೇಂದ್ರ, ರತ್ನಾಕರ ಶೆಣೈ ಹಾಜರಿದ್ದರು.

Exit mobile version