ಇದು ಡೈರೆಕ್ಟ್ ಹೊಡ್ತಾ…೧
ತುಂಗಾತರಂಗ ಕಣ್ಣೋಟದ ವರದಿ
ಶಿವಮೊಗ್ಗ, ಜು.18:
ಶಿವಮೊಗ್ಗ ನಗರದ ನೆಹರು ಸ್ಟೈಲ್ ಈಗಲೂ ಆಗಲೋ ಎನ್ನುತ್ತಿರುವ ಕರೆಂಟ್ ಕಂಬ ಒಂದು ಹಳೆಯ ಕಟ್ಟಡ ಒಂದಕ್ಕೆ ತಗಲಿ ನಿಂತಿದೆ. ಜನ ಜಂಗುಳಿಯ ಈ ಜಾಗದಲ್ಲಿ ಏನಾದರೂ ಆ ಕಂಬ ಬಿದ್ದರೆ ಕನಿಷ್ಠ ಒಂದಿಷ್ಟು ಸಾವು ಖಚಿತ ಎಂಬುದನ್ನು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ನಿಮ್ಮ ತುಂಗಾತರಂಗ ದಿನಪತ್ರಿಕೆ ಮಾಡುತ್ತಿದೆ.
ಶಿವಮೊಗ್ಗ ನೆಹರು ರಸ್ತೆಯ ಜೆಹೆಚ್ ಪಟೇಲ್ ವಾಣಿಜ್ಯ ಸಂಕೀರ್ಣದ ಎದುರಿನ ರಸ್ತೆಯ ಭಾಗದಲ್ಲಿರುವ ಬಿಲ್ಡಿಂಗ್ ಗಳ ನಡುವೆ ಇರುವಂತಹ ವಿದ್ಯುತ್ ಕಂಬ ಒಂದು ಹಾಳಾಗಿರುವ ಬಗ್ಗೆ ಸುಮಾರು ಆರು ವರ್ಷಗಳಿಂದ ನಿರಂತರವಾಗಿ ಅಲ್ಲಿಯ ಜನ ದೂರು ನೀಡುತ್ತಲೇ ಇದ್ದಾರೆ.
ಇದೇ ರೀತಿ ಮಳೆ ಹಾಗೂ ಗಾಳಿ ಬೀಸಿದರೆ ಆ ಕಂಬ ಖಂಡಿತವಾಗಿಯೂ ಉಳಿಯುವುದಿಲ್ಲ ಅದರಲ್ಲಿ ಕರೆಂಟ್ ಇರುತ್ತದೆ ಎಂಬ ಪರಿಜ್ಞಾನ ಶಿವಮೊಗ್ಗ ನಗರದ ವ್ಯವಸ್ಥೆ ನೋಡಿಕೊಳ್ಳುವ ನಗರ ಪಾಲಿಕೆಗೆ ಹಾಗೂ ವಿದ್ಯುತ್ ಶಕ್ತಿ ವ್ಯವಸ್ಥೆ ನೋಡಿಕೊಳ್ಳುವ ಮೆಸ್ಕಾಂ ಗೆ ಇಲ್ಲದಿರುವುದು ದುರಂತವೇ ಹೌದು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬೇಕಿಲ್ಲದ ಅರ್ಧಂಬರ್ಧ ಕೆಲಸ ಮಾಡಿ ಇಡೀ ಆ ಭಾಗವನ್ನು ಸಂಪೂರ್ಣ ಕರೆಂಟ್ ಮಯ ಮಾಡಲಾಗಿದೆ ಎಂಬುದನ್ನು ಜಿಲ್ಲಾಡಳಿತ ಗಮನಿಸಬೇಕಿದೆ. ಮಳೆ ಬಂದಾಗ ನೀರು ನಿಲ್ಲುವುದು ಕಾಲುವೆಗಳಿಗೆ ಸೇರಿಕೊಳ್ಳದಿರುವುದು ಇಲ್ಲಿನ ದೊಡ್ಡ ದುರಂತಗಳಲ್ಲಿ ಒಂದು. ಈ ಬಿಲ್ಡಿಂಗ್ ನಡುವೆ ಇರುವಂತಹ ಕಂಬ ಸುಮಾರು 50ರಿಂದ 60 ವರ್ಷ ಹಿಂದಿನದು ಎನ್ನಲಾಗಿದೆ. ಇಂತಹ ಕಂಬವನ್ನು ಕನಿಷ್ಠಪಕ್ಷ ಬದಲಿಸಲು ಆಗದೆ ಜನ ಜಂಗುಳಿಯ ನಡುವೆ ಹಾಕಿರುವುದು ಯಾರ ತಪ್ಪು.
ಇದರ ಜವಾಬ್ದಾರಿ ಯಾರದು? ಸುಖಾ ಸುಮ್ಮನೆ ಯಾರದ್ದೋ ಹೆಣವನ್ನು ನೋಡಲು ಇಷ್ಟ ಪಡಬೇಡಿ. ಯಾರಿಗೋ, ಯಾರಿಗೆ ಆಗಿರಲಿ ಸರ್ಕಾರದ ಹಣ ತಿಂದವರಿಗೆ, ಸರ್ಕಾರವನ್ನು ನಡೆಸುವವರಿಗೆ, ಜನ ಪ್ರತಿನಿಧಿಗಳಿಗೆ ಪತ್ರಿಕೆ ನೀಡುವ ಅತ್ಯಂತ ಪ್ರೀತಿಯ ಸೂಚನೆ ಇದು. ಕಂಬ ಮುರಿದು ಬೀಳುವ ಮುನ್ನ ಬದಲಿಸಿ. ಇಲ್ಲವೇ ಹೆಣವನ್ನು ನೋಡದಂತೆ ಕಾಪಾಡಿಕೊಳ್ಳಿ.
ನಾಳಿನ ನೆಗಿಟೀವ್ ಥಿಂಕಿಂಗ್! ಓದಿ
*ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ
ನಾಳಿನ ಶನಿವಾರದ ನೆಗಿಟೀವ್ ಥಿಂಕಿಂಗ್- 5 ಅಂಕಣದ ಝಲಕ್.
ದಾನ ಮಾಡೋರನ್ನ ದಮ್ ದಮ್ ಅನುಮಾನಗಳಿಗೆ ತಂದ ಕೆಲ *ಸಮಾಜಸೇವಕ ಹೆಸರಿನ ಸ್ವಯಂ ಸೇವಿತರ* ಚಿತ್ರಣ., ದಾಖಲೆ ರಹಿತ ನಿಜ ಅಂಶಗಳನ್ನು ತೆರೆದಿಡುವ ವಾಸ್ತಾವಾಂಶ ಓದಿ. ಸ್ವಯಂ ಬೆಚ್ಚಗಾದ ಪೇ ಸ್ಕೀಮ್ ನೋಡ್ರಿ
ತುಂಗಾತರಂಗ ದಿನಪತ್ರಿಕೆ
tungataranga.com
tungataranga.blogspot.com. ಸಮಾಜಸೇವಕ ಹೆಸರಿನ ಸ್ವಯಂ ಸೇವಿತರಿದ್ದಾರೆ ಎಚ್ಚರ- ನೆಗಿಟೀವ್ ಥಿಂಕಿಂಗ್- 5 ಓದಿ👆