Site icon TUNGATARANGA

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಅಖಂಡ ದೀಪ” ಸ್ಥಾಪನೆ…! ಸ್ರೀ ದೇವಿ ಮಹಾತ್ಮೆ ಧಾರಾವಾಹಿಯ ಯಶಸ್ವಿಗೆ ಸ್ಟಾರ್ ಸುವರ್ಣ ಕೊಡುಗೆ

ಸಾಗರ, ಜು.೧೭: ಪ್ರಸಿದ್ದ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯು ಅಖಂಡ. ದೀಪ ಸ್ಥಾಪನೆ ಮಾಡಿದೆ.


ಕನ್ನಡ ಕಿರುತೆರೆಯಲ್ಲಿ ಹೊಸತನಕ್ಕೆ ಸಾಕ್ಷಿಯಾಗಿರುವ “ಸ್ಟಾರ್ ಸುವರ್ಣ” ವಾಹಿನಿಯಲ್ಲೀಗ “ಶ್ರೀ ದೇವೀ ಮಹಾತ್ಮೆ ’ ಎಂಬ ಹೊಸ ಧಾರಾವಾಹಿ ಆರಂಭವಾಗಿದ್ದು, ಮೊದಲ ವಾರದಿಂದಲೇ ಅದಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಲೋಕಕಲ್ಯಾಣಾರ್ಥವಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಅಖಂಡ ದೀಪವನ್ನು ಸ್ಥಾಪಿಸಿದೆ ಎಂದು ವಾಹಿನಿಯ ಮುಖ್ಯಸ್ಥರು ತಿಳಿಸಿದ್ದಾರೆ.


ಮಂಗಳವಾರ ದೇವಾಲಯದ ದಶಕದ ಸ್ಟಾರ್ ಸುವರ್ಣ ವಾಹಿನಿ ಮತ್ತು ಶ್ರೀ ದೇವಿ ಮಹಾತ್ಮೆ ಧಾರವಾಹಿಯ ತಂಡವು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಶ್ರೀಸಿಗಂದೂರು ಚೌಡೇಶ್ವರಿ ದೇವಾಲಯದ ದೇವಾಲಯ ಸಮಿತಿ ಕಾರ್ಯದರ್ಶಿ ರವಿಕುಮಾರ್ ದೀಪ ಬೆಳಗಿಸುವ ಮೂಲಕ ಅಖಂಡ ದೀಪ ಉದ್ಘಾಟಿಸಿದರು.


ಇದಕ್ಕೂಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ದೇವಿ ಮಹಾತ್ಮೆ ಧಾರಾವಾಹಿಯ ನಿರ್ಮಾಪಕ ಅರವಿಂದ್ ಮಾತನಾಡಿ, ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿ ೧೦೦೦ ಎಪಿಸೋಡ್ ಮುಗಿದಿದೆ. ೫೦೦ ಎಪಿಸೋಡನ್ನ ಯಲ್ಲಮ್ಮ ದೇವಿ ಮಹತ್ಮೆ ಮುಗಿಸಿದೆ. ಪೌರಾಣಿಕ ಧಾರವಾಹಿ ಸುಲಭವಾಗಿ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಹೇಳಿದರು.
ಪೌರಾಣಿಕ ಧಾರಾವಾಹಿ ಅಂದ್ರೆ


ಅದರದೇಯಾದ ವಸ್ತ್ರಾಲಂಕಾರ, ಸೆಟ್ ನಿರ್ಮಾಣ, ಸಂಬಾಷಣೆ, ಪಾತ್ರವರ್ಗ ಇರಬೇಕಾಗುತ್ತದೆ.ಹಾಗಾಗಿ
ಪೌರಾಣಿಕ ಧಾರವಾಹಿ ನಿರ್ಮಾಣಕ್ಕೆ ಟಿವಿಚಾನೆಲ್ ಗಳು ಹೊರ ರಾಜ್ಯದ ನಿರ್ಮಾಪಕರಿಗೆ ಕೊಡುತ್ತದೆ. ಆದರೆ ಸ್ಟಾರ್ ಸುವರ್ಣ ಟಿವಿ ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯನ್ನ ಮೊದಲ ಬಾರಿಗೆ ಕನ್ನಡಿಗರಿಗೆ ನೀಡಿದೆ. ಧಾರವಾಹಿ ಪ್ರತಿದಿನ ೭ ಗಂಟೆಗೆ ಪ್ರಸಾರವಾಗುತ್ತಿದೆ ಎಂದರು.


ಶಿವನ ಪಾತ್ರಧಾರಿ ಅರ್ಜುನ್ ರಮೇಶ್ ಮಾತನಾಡಿ, ಮೂರು ಬಾರಿ ಶಿವನ ಪಾತ್ರ ಬಣ್ಣ ಹಚ್ಚುವ ಅವಕಾಶ ನನಗೆ ಸಿಕ್ಕಿದೆ. ಸಣ್ಣ ಗರ್ವನೂ ಇದೆ. ಹೆಮ್ಮೆಯೂ ಇದೆ. ಪೌರಾಣಿಕ ಧಾರಾವಾಹಿಗಳು ಆಧುನಿಕ ಯುಗದಲ್ಲಿ ಜನ ಬೆಂಬಲಿಸುವಂತೆ ಕೋರಿದರು. ರೀಲ್ಸ್ ಮಾಡಿದ್ರೂ ಫೇಮಸ್ ಆಗ್ತೀವಿ. ಆದರೆ ಒಬ್ಬ ಕಲಾವಿದನಾಗಿ ಒಂದು ಪಾತ್ರಕ್ಕೆ ವೇಷ ಭೂಷಣ ತೊಟ್ಟು ಗಂಟೆಗಟ್ಟಲೆ ಚಿತ್ರೀಕರಣಕ್ಕೆ ನಿಲ್ಲು ವ ಕಲಾವಿದರ ಕಷ್ಟ ಜನರಿಗೆ ಅರ್ಥವಾಗಲ್ಲ. ಆದರೆ ನನ್ನ ಪಾತ್ರಗಳ ಮೂಲಕ ಜನ ಮಾನಸದಲ್ಲಿದ್ದೇವೆ ಎನ್ನುವುದೇ ಖುಷಿ ಕೊಟ್ಟಿದೆ ಎಂದರು.

ಪಾರ್ವತಿಯ ಪಾತ್ರಧಾರಿ ಜೀವಿತರವರು ಮಾತನಾಡಿ, ತಾಯಿ ಪಾತ್ರ ಮಾಡಲು ದೊಡ್ಡಪುಣ್ಯ ಮಾಡಿದ್ದೇನೆ. ಇದು ಮೊದಲನೇ ಧಾರವಾಹಿಯಾಗಿದೆ. ಒತ್ತಡ ವಿಲ್ಲದೆ ಕೆಲಸ ಮಾಡುತ್ತಿರುವೆ. ಧಾರವಾಹಿ ಈ ತಿಂಗಳು ಒಂದರಿಂದ ಆರಂಭವಾಗಿದೆ ಜನರು ಪ್ರತಿದಿನ ಸಂಜೆ ೭ ಗಂಟೆಗೆ ನೋಡುವಂತೆ ಕೋರಿದರು.ವೇದಿಕೆ ಮೇಲೆ ಗೋಪಾಲ ಕೃಷ್ಣ ಶರ್ಮ, ಧರ್ಮಾಧಿಕಾರಿಗಳ ಪುತ್ರ ರವಿಕುಮಾರ್ ಉಪಸ್ಥಿತರಿದ್ದರು. ಸ್ಟಾರ್ ಸುವರ್ಣ ದೀಪವನ್ನು ರವಿಕುಮಾರ್ ಬೆಳಗಿದರು.

Exit mobile version