Site icon TUNGATARANGA

ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅನುಮತಿ ಕೊಡಬಾರದು ಮನವಿ

ಶಿವಮೊಗ್ಗ,ಜು.12: ಎಲ್‍ಎಲ್‍ಆರ್ ರಸ್ತೆಯಲ್ಲಿ ಪ್ರಾರಂಭವಾಗಲಿರುವ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅನುಮತಿ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಸಹ್ಯಾದ್ರಿ ಕನ್ನಡ ಸಿರಿ ಬಳಗ ಇಂದು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಎಲ್‍ಎಲ್‍ಆರ್ ರಸ್ತೆಯಲ್ಲಿರುವ ಸುಭದ್ರಾ ಲಾಡ್ಜ್‍ನಲ್ಲಿ ಪುಡ್ ಪ್ಯಾಲೆಸ್ ಉಡುಪಿ ಹೋಟೆಲ್ ಆರಂಭವಾಗಿದೆ. ಈ ಹೋಟೆಲ್‍ನಲ್ಲಿ ಬಾರ್ ಕೂಡ ಇದೆ. ಇದರ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯಿದೆ.

ಗಣಪತಿ ದೇವಸ್ಥಾನ ಇದೆ, ನರ್ಸಿಂಗ್ ಹೋಂಗಳಿವೆ. ಇವುಗಳ ಮಧ್ಯೆಯೇ ಬಾರ್ ಅಂಡ್ ರೆಸ್ಟೋರೆಂಟ್ ಇರುವುದು ನಿಯಮಕ್ಕೆ ವಿರೋಧವಾಗಿದೆ

. ಇವುಗಳಿಗೆ ಒಂದು ಕಿ.ಮೀ.ದೂರ ಇರಬೇಕು ಎಂಬ ನಿಯಮವಿದ್ದರು ಇದಕ್ಕೆ ಅನುಮತಿ ಕೊಟ್ಟಿರುವುದು ಸರಿಯಲ್ಲ ಎಂದು ಮನವಿದಾರರು ಹೇಳಿದ್ದಾರೆ.

ಅಲ್ಲದೆ ಈ ಹೋಟೆಲ್‍ನಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಸುತ್ತಮುತ್ತ ನಿವಾಸಿಗಳಿಗೆ ಮತ್ತು ಸಂಚಾರಕ್ಕೆ ಕಷ್ಟವಾಗಿದೆ. ನಿವಾಸಿಗಳ ಹಿತದೃಷ್ಟಿಯಿಂದ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅನುಮತಿ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಿರಿಬಳಗದ ಅಧ್ಯಕ್ಷ ಎಂ.ಕುಮಾರ್, ಎ.ಸುಬ್ರಮಣಿ, ಕೆ.ಅಣ್ಣಪ್ಪ, ಘನಶ್ಯಾಮ ಮುಂತಾದವರು ಇದ್ದರು.

Exit mobile version