Site icon TUNGATARANGA

ವಿದ್ಯುತ್ ಚಾಲಿತ ವಾಹನಗಳು ಪರಿಸರ ಸ್ನೇಹಿ ಹಾಗೂ ದೇಶದ ಆರ್ಥಿಕ ಸ್ವಾವಲಂಬನೆಗೂ ಸಹಕಾರಿ:ಮಾಜಿ ಉಪ ಮಹಾಪೌರರಾದ ಶ್ರೀಮತಿ ಸುರೇಖಾ ಮುರುಳೀಧರ್

ಶಿವಮೊಗ್ಗ ನಗರದ ಶಂಕರ ಮಠ ರಸ್ತೆಯಲ್ಲಿರುವ ಸುಪ್ರೀಂ ಮೋಟರ್ಸ್ ನ ಚೇತಕ್ ಶೋರೂಮ್ ನಲ್ಲಿ ಚೇತಕ್ 2901 ವಾಹನವನ್ನು ಮಾಜಿ ಉಪ ಮಹಾಪೌರರಾದ ಶ್ರೀಮತಿ ಸುರೇಖಾ ಮುರುಳೀಧರ್ ರವರು ಅನಾವರಣಗೊಳಿಸಿ, ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಅವರು ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿ ಹಾಗೂ ದೇಶದ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಸಹಕಾರವನ್ನು ನೀಡುತ್ತಿದೆ. ಇನ್ನೂ ಬರುವ ದಿನಗಳಲ್ಲೂ ಮುಂಬರುವ ದಿನಗಳಲ್ಲೂ ಹೆಚ್ಚೆಚ್ಚು ಸಹಾಯ ಸಹಕಾರ ಸಿಗುವ ನಂಬಿಕೆ ಇದೆ.

ಇದೀಗ ಬಿಡುಗಡೆಯಾಗುತ್ತಿರುವ ಬಜಾಜ್ ಚೇತಕ್ ವಾಹನವನ್ನು ಬಹಳಷ್ಟು ಜನ ಗ್ರಾಹಕರು ಖರೀದಿ ಮಾಡಲು ಕಾಯುತ್ತಿರುವುದು ಅತ್ಯಂತ ಸಂತಸದ ಸಂಗತಿ.

ಬಹಳಷ್ಟು ದಶಕಗಳಿಂದ ವಾಹನ ತಯಾರಿಕೆಯಲ್ಲಿ ಬಜಾಜ್ ಎಲ್ಲರ ಮನಸ್ಸನ್ನು ಗೆದ್ದಿದೆ. ಶಿವಮೊಗ್ಗದ ಸುಪ್ರೀಂ ಸಂಸ್ಥೆಯ ಚೇತಕ್, ಸೇವನಿಷ್ಠೆಗೆ ಹೆಸರುವಾಸಿಯಾಗಿದೆ.

ನಾಗರೀಕರ, ಗ್ರಾಹಕರ ಸಹಕಾರ ಹೀಗೆ ನಿರಂತರವಾಗಿರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಆದ ಶ್ರೀಯುತ ಪ್ರಭಾಕರ್, ಅಧಿಕಾರಿಗಳಾದ ಯೋಗೀಶ್, ಇಫ್ಕೋ ಟೊಕಿಯೋ ವಿಮಾ ಅಧಿಕಾರಿಗಳಾದ ಸುನಿಲ್, ಹಾಗೂ ಅಧಿಕಾರಿಗಳಾದ ರಾಮಸ್ವಾಮಿ, ಮಂಜುನಾಥ್, ಕುಮಾರ್, ನಾಗರಿಕರಾದ ನಾಗೇಶ್ ಮುರಳೀಧರ್, ನೂತನ ಗ್ರಾಹಕರು ಉಪಸ್ಥಿತರಿದ್ದರು.

Exit mobile version