Site icon TUNGATARANGA

ಆ. 2 ರಂದು ’ಸಾಹಿತ್ಯ ಸಹವಾಸ’ ಎಂಬ ವಿಚಾರ ಸಂಕಿರಣ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ವರ್ಧೆ ಅಯೋಜನೆ

ಶಿವಮೊಗ್ಗ,ಜು.೧೦:ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳ ವತಿಯಿಂದ ಆಗಷ್ಟ್ ೨, ೨೦೨೪ ರಂದು ’ಸಾಹಿತ್ಯ ಸಹವಾಸ’ ಎಂಬ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.


ಕುವೆಂಪು ವಿವಿ ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರ ಕಥೆಗಳು ಪುಸ್ತಕ ಕುರಿತು ವಿಮರ್ಶ ಬರಹ ಲೇಖನ ಸ್ಪರ್ಧೆ, ಹಾಗೂ ಪಿ.ಲಂಕೇಶ್‌ರವರ ಗುಣಮುಖ ಅಥವಾ ಸಂಕ್ರಾಂತಿ ನಾಟಕ ಕುರಿತು ವಿಮರ್ಶ ಲೇಖನ ಸ್ಪರ್ಧೆ

ಆಯೋಜಿಸಲಾಗಿದೆ. ಪ್ರತಿ ಕಾಲೇಜಿನಿಂದ ೨ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಕ್ಕಾಗಿ ಜು.೨೭ರವರೆಗೆ ಲೇಖನಗಳನ್ನು ತಲುಪಿಸಬೇಕು. ಲೇಖನಗಳು ೬ರಿಂದ೮ ಪುಟ ಅಥವಾ ೨೦೦೦ ಪದಗಳನ್ನು ಮೀರಬಾರದು. ಕ್ರಮವಾಗಿ ೧೫೦೦ ರೂ., ೧೨೫೦ರೂ.

,೧೦೦೦ ರೂ., ಮೂರು ಬಹುಮಾನಗಳು ಇರುತ್ತವೆ. ಲೇಖನಗಳನ್ನು ಡಾ. ಪ್ರಕಾಶ್ ಮರ‍್ಗನಳ್ಳಿ ಕನ್ನಡ ವಿಭಾಗ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ ೯೪೮೦೦೪೬೦೩೨ವನ್ನು ಸಂಪ್ರಿಸಬಹುದಾಗಿದೆ.


ಅ.೨ರಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಬಹುಮಾನ ವಿತರಿಸಲಾಗುವುದು. ಮತ್ತು ಅಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ಲಂಕೇಶ್, ತೇಜಸ್ವಿ, ಕುವೆಂಪು ಮತ್ತು ದಲಿತ ಸಾಹಿತ್ಯ ಕುರಿತು ಮಾತನಾಡಿರುವ ವೀಡಿಯೋ ಸರಣಿ ಬಿಡುಗಡೆ ಮಾಡಲಾಗುವುದು. ಇದೇ ಸಾಹಿತಿಗಳ ಮೇಲೆ ವಿಚಾರ ಗೋಷ್ಠಿಗಳು ನಡೆಯಲಿವೆ.

Exit mobile version