ಶಿವಮೊಗ್ಗ : ಕೆಲ ದಿನಗಳ ಹಿಂದೆ ಹಾವೇರಿ ಬಳಿ ನಡೆದ ಬೀಕರ ಅಪಘಾತದಲ್ಲಿ ಮೃತ ಪಟ್ಟ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಕುಟುಂಬಸ್ತರ ಮನೆಗಳಿಗೆ ಇಂದು ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಟಿ ನೀಡಿ ಸಾಂತ್ವಾನ ಹೇಳಿದರು.
ಅಲ್ಲದೆ ಈ ಹಿಂದೆ ಬಂದು ಕುಟುಂಬಸ್ತರಿಗೆ ಸಾತ್ವನ ಹೇಳಿದ್ದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರು ಮೃತ ಪಟ್ಟವರಿಗೆ ಗೀತಾ ಶಿವರಾಜ್ ಕುಮಾರ್ ರವರು ತಲಾ 1 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅಂತೆಯೆ ಇಂದು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಬೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ರವರು ಮೃತರ ಕುಟುಂಬಗಳಿಗೆ ನಗದು ಹಣ ವಿತರಿಸಿದರು.
ಸಾಂತ್ವಾನ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಅಲ್ಲದೆ ಘಟನೆಯಲ್ಲಿ ತೀರ್ವವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಮತ್ತು ಪರಷುರಾಮ್ ರವರಿಗೆ ತಲಾ 1.5 ಲಕ್ಷ ನೀಡಿ ಮಾನವಿಯತೆ ಮೆರೆದರು.
ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಂದಿನ ವಿದ್ಯಾಬ್ಯಾಸದ ಜವಬ್ದಾರಿಯನ್ನು ಹೊರುವುದಾಗಿ ತಿಳಿಸಿದರು. ಇನ್ನು ಇಗಾಗಲೆ ಚಿಕಿತ್ಸೆ ಪಡೆದು ಮನೆಗೆ ಬಂದಂತಹ ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ತಾವೇ ಬರಿಸುವುದಾಗಿ ತಿಳಿಸಿದರು.
ಸುದ್ದಿಗಾರರನ್ನುದ್ದೇಶಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಈ ರೀತಿಯ ಘಟನೆ ಎಲ್ಲಿಯು ನಡೆಯಬಾರದು ದೇವರ ಕುಟುಂಬಸ್ತರಿಗೆ ದುಖ ಬರಿಸುವ ಶಕ್ತಿ ನೀಡಲಿ, ನಾವು ಮುಂದಿನ ದಿನಗಳಲ್ಲಿ ಇನ್ನು ಹೇಚ್ಚಿನ ಸಹಾಯ ಮಾಡಬೇಕಾದಲ್ಲಿ ಅದಕ್ಕು ಸಿದ್ದರಿದ್ದೇವೆ ಎಂದು ತಿಳಿಸಿದರು.
ಎಮ್ಮೆಹಟ್ಟಿ ಗ್ರಾಮದಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿ, ಇದು ಮಾತಾನಾಡುವ ಸಮಯವಲ್ಲ. ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ. ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ. ಇಲ್ಲಿಗೆ ಬಂದಾಗ ತುಂಬಾ ಬೇಜಾರ್ ಆಯಿತು. ಘಟನೆ ನೋಡಿ ತುಂಬಾ ದುಃಖ ಆಯ್ತು. ವಿಶೇಷ ಚೇತನ ಅರ್ಪಿತಾಗೆ ದೇವರು ಶಕ್ತಿ ಕೊಡಲಿ. ನಾವು ಕುಟುಂಬದ ಜೊತೆ ಇರುತ್ತೇವೆ ಎಂದರು.
ದುರ್ಘಟನೆ ನೋಡಿ ಬರೋಕೆ ಧೈರ್ಯ ಮಾಡೋಕೆ ಕಷ್ಟ ಆಯ್ತು. ಒಂದು ನಿಮಿಷದಲ್ಲಿ 13 ಜನ ಸಾವನಪ್ಪಿದ್ದಾರೆ. ಸಾವಿನ ದುಃಖ ತಡೆದುಕೊಳ್ಳಲು ದೇವರು ಅವರಿಗೆ ಶಕ್ತಿ ತುಂಬಲಿ. ಘಟನೆಯಲ್ಲಿ ಮಾನಸ ಅವರನ್ನು ಕಳೆದುಕೊಂಡಿದ್ದು ತುಂಬಾ ದೊಡ್ಟ ನಷ್ಟವಾಗಿದೆ. ಊರಿನ ಗ್ರಾಮಸ್ಥರು ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಕುಟುಂಬಸ್ಥರ ನೆರವಿಗೆ ಬರೋಕೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಕೈ ಯಲ್ಲಿ ಆದಷ್ಟು ಸಹಾಯ ಮಾಡಿದ್ದೇವೆ ಎಂದರು.
ಇದೇ ಸಂದರ್ಭ ಸಾಂತ್ವಾನ ಸಭೆಯಲ್ಲಿ ಭದ್ರಾವತಿ ಶಾಸಕರಾದ ಸಂಗಮೇಶ್, ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ತಿತರಿದ್ದರು.