ಭದ್ರೆಯಂಗಳದ ಪೋಟೋ
ಶಿವಮೊಗ್ಗ, ಜು.07:
ರೈತರ ಆಕ್ರೋಶದ ದ್ವನಿಯನ್ನು ಎತ್ತಿ ಹಿಡಿದು ಭದ್ರಾ ಜಲಾಶಯದ ಅಭಿಯಂತರರಿಗೆ ಹಿಗ್ಗಾಮುಗ್ಗ ನಿಂಧಿಸಿದ್ದ “ತುಂಗಾತರಂಗ” ವರದಿಗೆ ಫಲಶೃತಿ ಸಿಕ್ಕಿದೆ. ಕಳೆದ ಎರಡು ದಿನದ ಹಿಂದೆ ತುಂಗಾತರಂಗ ಪತ್ರಿಕೆ ಹಾಗೂ ವೆಬ್ ನ್ಯೂಸ್ ಇ ವರದಿ ಬರೆದಿತ್ತು. ಈಗ ನೀರು ಸೋರಿಕೆ ತಪ್ಪಿದೆ.
ಈಗ ಭದ್ರಾ ಡ್ಯಾಂನ ರಿವರ್ ಸ್ಲೀವ್ಸ್ ಗೇಟ್‌ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಸ್ಲೀವ್ಸ್ ಗೇಟ್‌ನಿಂದ ಸುಮಾರು 3000 ಕ್ಯೂಸೆಕ್ ನೀರು ನದಿಗೆ ಹರಿದು ಹೋಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕಾಡ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಧ್ಯಕ್ಷರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಅಷ್ಟರಲ್ಲಾಗಲೇ ಶೇ.50ರಷ್ಟು ನೀರು ನದಿಗೆ ಸೋರಿಕೆಯಾಗಿತ್ತು.
ಜಲಾಶಯದ ಇಂಜಿನಿಯರ್‌ಗಳು, ಗುತ್ತಿಗೆದಾರ ವೇದಮೂರ್ತಿ, ನೌಕರರ ತಂಡ ನಿರಂತರವಾಗಿ ಶ್ರಮ ವಹಿಸಿ ಸ್ಲೀವ್ಸ್ ಗೇಟ್‌ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಲು ರೈತರು ಕೋರಿದ್ದಾರೆ.