ಶಿವಮೊಗ್ಗ: ತ್ಯಾಗದ ಪ್ರತೀಕವೇ ಮಹಾಯೋಗಿ ವೇಮನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಕುವೆಂಪು ರಂಗಮಂದಿ ರದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸರಳವಾಗಿ ನಡೆದ ಮಹಾಯೋಗಿ ವೇಮನ ಜಯಂತಿಯನ್ನು ವೇಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿಮಾತನಾಡಿದರು.
ವಾಲ್ಮೀಕಿಯಂತೆ ಪರಿವರ್ತಿತರಾಗಿ ಮಹಾತ್ಮ ಯೋಗಿ ಎನಿಸಿಕೊಂಡರವರಲ್ಲಿ ವೇಮನ ಕೂಡ ಒಬ್ಬರು. ರೆಡ್ಡಿ ಸಮಾಜದ ಉನ್ನತಿಗಾಗಿ ತಮ್ಮ ಸಾಹಿತ್ಯ ದಿಂದಲೇ ಸಮಾಜದ ಕಣ್ಣು ತೆರೆಸಿದ ಮಹಾತ್ಮರಾಗಿದ್ದು, ದುಷ್ಚಟಕ್ಕೆ ಬಲಿಯಾಗಿದ್ದ ವೇಮನ ನಂತರ ತಮ್ಮ ಅತ್ತಿಗೆಯಿಂದ ಪ್ರಭಾವಿತರಾಗಿ ಸರ್ವ ಸಂಘ ಪರಿತಕ್ತರಾಗಿ ಸರ್ವವನ್ನೂ ತ್ಯಾಗ ಮಾಡಿ ಹಿಂದುಳಿದ ಸಮಾಜದ ಉದ್ದಾರವೇ ತಮ್ಮ ಧ್ಯೇಯ ಎಂದು ಭಾವಿಸಿ, ತಮ್ಮ ಸಾಹಿತ್ಯದ ಮೂಲಕ ಮಾನವೀಯತೆಯ ತತ್ವಗಳ ಮೇಲೆ ಬೆಳಕು ಚೆಲ್ಲಿದ ಮಹಾತ್ಮರಲ್ಲಿ ಮೊದಲ ಸಾಲಿಗೆ ನಿಲ್ಲುತ್ತಾರೆ. ಅವರ ಆದರ್ಶಗಳು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ ಡಿ.ಎಸ್. ಅರುಣ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಅಪರ ಜಿಲ್ಲಾಧಿಕಾರಿ ಅನುರಾಧ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್, ಪಾಲಿಕೆ ಸದಸ್ಯ ವಿಶ್ವಾಸ್, ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷರಾದ ಹೆಚ್.ಜಿ.ಭೀಮಾರೆಡ್ಡಿ, ಉಪಾಧ್ಯಕ್ಷ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಖಜಾಂಚಿ ಡಾ. ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.