Site icon TUNGATARANGA

ಅ.ನಾ.ವಿಜಯೇಂದ್ರ ರಾವ್ ರಿಗೆ ವಿದ್ವಾನ್ ವಿ.ಎನ್ ಭಟ್ ರವರ ಪುರಸ್ಕಾರ

ಶಿವಮೊಗ್ಗ:05:

ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ಸಂಸ್ಕೃತ ಐಚ್ಛಿಕದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ದಿವಂಗತ ವಿ.ಎನ್. ಭಟ್ ರವರ ಸ್ಮರಣಾರ್ಥವಾಗಿ ಶ್ರೀಮತಿ ನಿರ್ಮಲ ವಿ.ಎನ್.ಭಟ್ ರವರು ನೀಡಿರುವ ದತ್ತಿ ನಿಧಿಯ ನಗದು ಪುರಸ್ಕಾರ ಈ ಬಾರಿ ಅ.ನಾ.ವಿಜಯೇಂದ್ರ ರಾವ್ ರವರಿಗೆ ಲಭಿಸಿದೆ. ಪ್ರಸ್ತುತ ಕುವೆಂಪು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಥಮ ವರ್ಷದ ಎಮ್.ಏ. ವಿದ್ಯಾರ್ಥಿಯಾದ ಅ.ನಾ.ವಿಜಯೇಂದ್ರ ರಾವ್ ರವರನ್ನು ವಿಭಾಗದ ವತಿಯಿಂದ ಇಂದು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸದ ಪ್ರಾಧ್ಯಾಪಕರಾದ ಡಾ.ಕೆ.ಎನ್. ಮಂಜುನಾಥ್ ರವರು ಮಾತನಾಡಿತ್ತ ಅ.ನಾ.ವಿಜಯೇಂದ್ರ ರಾವ್ ರವರು ತಮ್ಮ ೫೭ ನೆಯ ವಯಸ್ಸಿನಲ್ಲಿ ನಮ್ಮ ಸಹ್ಯಾದ್ರಿ ಕಲಾ

ಕಾಲೇಜಿನಲ್ಲಿ ೨೦೨೧ ರಲ್ಲಿ ಬಿ.ಏ.ತರಗತಿಗೆ ಸೇರಿಕೊಂಡು ಸಂಸ್ಕೃತ ಭಾ?ಯನ್ನು ಐಚ್ಛಿಕ ವಿ?ಯವನ್ನಾಗಿ ಪಡೆದು ಕೊಂಡು ಮೂರು ವ?ವು ಅದರಲ್ಲಿ ಹೆಚ್ಚಿನ ಅಂಕವನ್ನು ಪಡೆದು ೨೦೨೩ ರಲ್ಲಿ ಅಂದರೆ ಅವರು ತಮ್ಮ ೬೦ ನೇ ವಯಸ್ಸಿನಲ್ಲಿ ಪದವಿ ಪೂರೈಸಿರುತ್ತಾರೆ.


ನಿತ್ಯವೂ ಕಾಲೇಜಿಗೆ ಬರುತ್ತಿದ್ದರು, ಶ್ರದ್ಧೆಯಿಂದ ಮಕ್ಕಳೊಂದಿಗೆ ಕುಳಿತು ಪಾಠ ಪ್ರವಚನ ಕೇಳುತ್ತಿದ್ದರು. ನಮ್ಮ ಕಾಲೇಜಿನ ಇತಿಹಾಸದಲ್ಲಿ ಈ ರೀತಿ ಹಿರಿಯ ವ್ಯಕ್ತಿಯೊಬ್ಬರು ಬಿ.ಏ.ಪದವಿ ಪೂರೈಸಿದವರಲ್ಲಿ ಇವರೊಬ್ಬರೆ ಎಂದು ಹೇಳಲಿಕ್ಕೆ ಹೆಮ್ಮೆಯಾಗುತ್ತಿದೆ ನಗರದಲ್ಲಿ ಜನಪ್ರಿಯ ವ್ಯಕ್ತಿಯಾಗಿರುವ ಇಂತಹ ವ್ಯಕ್ತಿಯೊಬ್ಬರು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದರು.


ಕುವೆಂಪು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತುನ ಸಂಶೋಧನ ವಿಭಾಗದ ಅಧ್ಯಕ್ಷರಾದ ಡಾ.ಶೃತಕೀರ್ತಿ ಯವರು ಮಾತನಾಡುತ್ತ ಸಂಸ್ಕೃತ ಕ್ಷೇತ್ರದಲ್ಲಿ ಅಪಾರ ಸೇವೆ ಗೈಯುತ್ತಿರುವ ಅ.ನಾ.ವಿ ಯವರು ನಮ್ಮ ವಿದ್ಯಾರ್ಥಿಯೆಂದು ಹೇಳಿಕೊಳ್ಳಲು

ಹೆಮ್ಮೆಯಾಗುತ್ತಿದೆ ಎಂದರು. ಇತರರಿಗೆ ಸ್ಪೂರ್ತಿಯಾದ ಇವರು ಎಮ್.ಏ. ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಸಂಸ್ಕೃತ ಭಾರತಿ ಶಿವಮೊಗ್ಗ ನಗರ ಅಧ್ಯಕ್ಷ ಗುರುರಾಜ್, ವಿಭಾಗದ ಡಾ.ಚೆನ್ನಕೇಶವ ಉಪಸ್ಥಿತರಿದ್ದರು ಡಾ.ಶೋಭಾ ಭಟ್ ಸ್ವಾಗತಿಸಿದರು, ಬಂಗಾರಮ್ಮ ವಂದಿಸಿದರು.

Exit mobile version