Site icon TUNGATARANGA

ಅಡಿಕೆ ಬೆಳೆಯಲ್ಲಿ ಮಿಶ್ರ ಬೆಳೆ ಹಾಗೂ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಅನುಸರಿಸಿ ಹೆಚ್ಚಿನ ಲಾಭ ಪಡೆಯಿರಿ  – ಡಾ. ಆರ್.ಸಿ.ಜಗದೀಶ,ಕೃ.ತೋ.ವಿಶ್ವವಿದ್ಯಾಲಯದ  ಕುಲಪತಿ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರೈತರಿಗೆ ಅಡಿಕೆ ಸಮಗ್ರ ಬೇಸಾಯ ಪದ್ಧತಿಗಳು ಹಾಗೂ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು 04.07.2024  ರಂದು ಇರುವಕ್ಕಿ ಆವರಣದಲ್ಲಿ

ಆಯೋಜಿಸಲಾಗಿತ್ತು  ಕಾರ್ಯಕ್ರಮವನ್ನು ಗೌರವಾನ್ವಿತ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ ರವರು ಉದ್ಘಾಟಿಸಿ ಅನೇಕ ರೋಗಗಳು ಇತ್ತೀಚಿನ ದಿನಗಳಲ್ಲಿ ಅಡಿಕೆಯನ್ನು ಭಾದಿ ಸುತ್ತಿದ್ದು ಅವುಗಳನ್ನು ಸಮಗ್ರವಾಗಿ ನಿರ್ವಹಣೆ ಮಾಡಲು ಹಾಗೂ

ಅಡಿಕೆಯಲ್ಲಿ ಮಿಶ್ರ ಬೆಳೆಯನ್ನು ಅನುಸರಿಸಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಕರೆ ನೀಡಿದರು, ಕಾರ್ಯಕ್ರಮದಲ್ಲಿ ಡಾ. ಹೇಮ್ಲ ನಾಯಕ್, ಶಿಕ್ಷಣ ನಿರ್ದೇಶಕರು, ಡಾ. ಕೆ. ಟಿ. ಗುರುಮೂರ್ತಿ, ವಿಸ್ತರಣಾ ನಿರ್ದೇಶಕರು, ಡಾ. ಕೆ. ಸಿ. ಶಶಿಧರ,

ಕುಲಸಚಿವರು ಹಾಗೂ ವಿಶೇಷಾಧಿಕಾರಿಗಳು, ಡಾ. ಬಿ. ಕೆ. ಶಿವಣ್ಣ, ಮುಖ್ಯಸ್ಥರು, ರೈತ ತರಬೇತಿ ಸಂಸ್ಥೆ, , ಡಾ. ಬಿ. ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು ಮತ್ತು.  ಡಾ. ನಾಗರಾಜಪ್ಪ ಆಡಿವಪ್ಪರ್, ಮುಖ್ಯಸ್ಥರು,

ಅಡಿಕೆ ಸಂಶೋಧನಾ ಕೇಂದ್ರ, ಡಾ.ನರಸಿಂಹಮೂರ್ತಿ,  ಡಾ. ಅರುಣ್ ಕುಮಾರ್, ಡಾ. ಲತಾ, ಡಾ. ರವಿಶಂಕರ್ ಪಾಟೀಲ್, ಸಹ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೈತರಿಗೆ ಅಡಿಕೆಯಲ್ಲಿ ಸಮಗ್ರ ಬೇಸಾಯ ಪದ್ಧತಿಗಳು ಹಾಗೂ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು.

Exit mobile version