Site icon TUNGATARANGA

ಜನಪ್ರತಿನಿಧಿಗಳೇ ಇತ್ತ ನೋಡ್ರಿ: ಇದಕ್ಕೆ ಹೆಸರಷ್ಟೇ ಪೊಲೀಸ್ ಲೇ ಔಟ್, ಅವ್ಯವಸ್ಥೆಯ ಆಗರ ಕಣ್ರಿ


ಹುಡುಕಾಟದ ವರದಿ

ಶಿವಮೊಗ್ಗ, ಜು. 05:
ಹೆಸರಿಗೆ ಇದು ಪೊಲೀಸ್ ಲೇ ಔಟ್, ಬಹುತೇಕ ಪೊಲೀಸ್ ಮನೆಗಳಿವೆ. ಉಳಿದಂತೆ ಸರ್ಕಾರಿ ನೌಕರರ ಮನೆಗಳಿವೆ. ಆದರೆ ಇಲ್ಲಿ ವ್ಯವಸ್ಥೆಗಳೇ ಸಂಪೂರ್ಣ ಅಯೋಮಯ.


ಎಡವಿದರೆ ಸಿಗುವ ಸಾಗರ ರಸ್ತೆಯಲ್ಲಿನ ಈ ಬಡಾವಣೆಯಲ್ಲಿ ರಸ್ತೆಗಳೇ ಸರಿಯಾಗಿಲ್ಲ. ಡಾಂಬರ್ರೇ ಕಂಡಿಲ್ಲ.
ಶಿವಮೊಗ್ಗದ ಪುರದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ  ಗುಡ್ಡದ ಅರಕೆರೆ ಗ್ರಾಮದಲ್ಲಿರುವ ಪೊಲೀಸ್ ಲೇಔಟ್ ನ ವ್ಯವಸ್ಥೆ ನಿಜಕ್ಕೂ ಅಯೋಮಯ. 


ಇದರ ಅಭಿವೃದ್ದಿಗೆ ಈಗಾಗಲೇ ಹತ್ತಾರು ಬಾರಿ ಮನವಿ ನೀಡಿದ್ದರೂ ಸಂಸದರಾಗಲಿ,  ಜಿಲ್ಲಾ  ಸಚಿವರಾಗಲಿ,  ಗ್ರಾಮಾಂತರ ಶಾಸಕರಾಗಲಿ ಗಮನಹರಿಸಿಲ್ಲ. ದಯಮಾಡಿ ಇತ್ತ ನೋಡಿ ಎಂಬುದು ಗುಡ್ಡದ ಅರಕೆರೆಯ  ಶ್ರೀ ವಿಘ್ನೇಶ್ವರ ಕ್ಷೇಮಾಭಿವೃದ್ಧಿ ಸಂಘದ ಮನವಿ.
ದಯಮಾಡಿ ಪೊಲೀಸ್ ಲೇಔಟ್ನಲ್ಲಿ  ಕನಿಷ್ಠ ಜೀವನ ನಡೆಸಲು ಮೂಲಭೂತ ಸೌಲಭ್ಯವನ್ನಾದರೂ ಮಾಡಿಕೊಡಬೇಕಾಗಿ ಲೇಔಟ್ ನ  ನಿವಾಸಿಗಳು ಮತ್ತು ಶ್ರೀ ವಿಘ್ನೇಶ್ವರ ಕ್ಷೇಮಾಭಿವೃದ್ಧಿ ಸಂಘ ವಿನಂತಿಸಿದೆ.


ಸಾಗರ ರಸ್ತೆಯಲ್ಲಿರುವ ಪೊಲೀಸ್ ಲೇಔಟ್ ನಲ್ಲಿ ಯಾವುದೇ ರೀತಿಯ ಕನಿಷ್ಠ ಸೌಲಭ್ಯವು ಸಹ ದೊರೆಯದೆ ಇಲ್ಲಿನ ನಿವಾಸಿಗಳು ಕನಿಷ್ಠ ಸೌಲಭ್ಯಗಳು ಇಲ್ಲದೆ ತಮ್ಮ ಜೀವನ ನಡೆಸುತ್ತಿದ್ದಾರೆ
ಒತ್ತಾಯ:           .    
ಮಳೆಗಾಲದಲ್ಲಿ  ವಾಹನಗಳಲ್ಲಿ  ಇರಲಿ ಸರಿಯಾಗಿ  ನಡೆದುಕೊಂಡು ಹೋಗಲು ಸಾಧ್ಯವಾಗದೇ ಇರುವ  ಪರಿಸ್ಥಿತಿ ಇದೆ.
ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇರುವುದಿಲ್ಲ.
ಒಳ ಚರಂಡಿ ವ್ಯವಸ್ಥೆಯಾಗಲಿ   ಯಾವುದು ಸಹ ಇರುವುದಿಲ್ಲ.


ಮುಖ್ಯಮಂತ್ರಿಯವರಿಗೆ,  ಜಿಲ್ಲಾಧಿಕಾರಿಯವರಿಗೆ, ಸಂಸದರಿಗೆ, ಮಾನ್ಯ ಸಚಿವರಿಗೆ, ಗ್ರಾಮಾಂತರ ಎಂ.ಎಲ್.ಎ. ರವರುಗಳಿಗೆ ಈ ಹಿಂದೆ ಹಲವಾರು ಬಾರಿ ಪತ್ರದ ಮೂಲಕ ಮನವಿಯನ್ನು ಸಲ್ಲಿಸಿದ್ದರೂ ಸಹ ಯಾವುದೇ ಉಪಯೋಗ ಆಗಿರುವುದಿಲ್ಲ..
ದಯಮಾಡಿ ಇನ್ನಾದರೂ ಇತ್ತ ಗಮನ ಹರಿಸಿ ಲೇಔಟ್ ನ ಅಭಿವೃದ್ಧಿ ಗೊಳಿಸಿದರೆ ಇಲ್ಲಿನ ನಿವಾಸಿಗಳು ಜೀವಿಸಲು ಅನುಕೂಲ  ಮಾಡಿಕೊಟ್ಟಂತಾಗುತ್ತದೆಂದು ಕೇಳಿಕೊಳ್ಳುತ್ತಿದ್ದೇವೆ.  ಇತ್ತ ನೋಡುವರಾರಾದರೂ ಜನಪ್ರತಿನಿಧಿಗಳಿದ್ದೀರಾ?

Exit mobile version