Site icon TUNGATARANGA

ಜು.6ರಂದು ಆರ್ಯ ಅಕಾಡೆಮಿಯಿಂದ ನೀಟ್, ಜೆಇಇ ಬಗ್ಗೆ ಮಾಹಿತಿ ನೀಡುವ ಸೆಮಿನಾರ್ ಅಯೋಜನೆ:ಆರ್ಯ ಅಕಾಡೆಮಿಯ ಮುಖ್ಯಸ್ಥ ಎನ್. ರಮೇಶ್

ಶಿವಮೊಗ್ಗ,ಜು.4:  ಆರ್ಯ ಅಕಾಡೆಮಿಯಿಂದ ಜು.6ರಂದು ಬೆಳಿಗ್ಗೆ ಕುವೆಂಪು ರಂಗಮಂದಿರದಲ್ಲಿ ನೀಟ್, ಜೆಇಇ ಬಗ್ಗೆ ಮಾಹಿತಿ ನೀಡುವ ಸೆಮಿನಾರ್ ಆಯೋಜಿಸಲಾಗಿದೆ ಎಂದು ಆರ್ಯ ಅಕಾಡೆಮಿಯ ಮುಖ್ಯಸ್ಥ ಎನ್. ರಮೇಶ್ ಹೇಳಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡಿನಲ್ಲಿ ನೀಟ್-ಜೆಇಇ ಇನ್ನಿತರ ಪರೀಕ್ಷೆಗಳಿಗೆ ಸಮರ್ಪಕ, ನಂಬಿಕಾರ್ಹ, ವಿದ್ಯಾರ್ಥಿ ಸ್ನೇಹಿ ಅನುಭವಿ ಉಪನ್ಯಾಸಕರು ಇರುವ, ಫಲಿತಾಂಶ ಖಚಿತವಾಗಿ ನೀಡುವ ಕೋಚಿಂಗ್ ಸಿಗಬೇಕು ಎನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳ ಬಹುದಿನದ ಕನಸನ್ನು ನೆನಸು ಮಾಡಲು ಶಿವಮೊಗ್ಗದ ಆರ್ಯ ಅಕಾಡೆಮಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಕೋಚಿಂಗ್‍ಗಳಲ್ಲಿ ತರಬೇತಿ ನೀಡುವುದರಲ್ಲಿ ರಾಷ್ಟ್ರಮಟ್ಟದ ಕೋಚಿಂಗ್ ಸಂಸ್ಥೆಗಳಲ್ಲಿ ಕನಿಷ್ಟ 30 ವರ್ಷ ಅನುಭವವಿರುವ ಉಪನ್ಯಾಸಕರ ತಂಡವು ಶಿವಮೊಗ್ಗ ನಗರವನ್ನು ಕೋಚಿಂಗ್ ಹಬ್ ಮಾಡುವ ದೃಷ್ಟಿಯಿಂದ ದಾಪುಗಾಲು ಇಡುತ್ತಿದೆ. ಈ ತಂಡದಲ್ಲಿ ಭೌತಶಾಸ್ತ್ರ ವಿಷಯದ ತಜ್ಞರಾದ ರಮಣ ಅಮರನೇನಿ ,ರಸಾಯನ ಶಾಸ್ತ್ರ ವಿಷಯ ತಜ್ಞರಾದ ಚಂದ್ರಮೋಹನ್, ಗಣಿತ ತಜ್ಞರಾದ ಚಂದ್ರಶೇಖರ್ ಜೋಸ್ಯುಳ, ಜೀವಶಾಸ್ತ್ರ ವಿಷಯ ತಜ್ಞರಾದ ಚಂದ್ರಶೇಖರ್ ಕಣ್ಣನ್, ಭಾಗವಹಿಸಲಿದ್ದು, ಇವರೆಲ್ಲರು ರಾಷ್ಟ್ರಮಟ್ಟದ ಮೊದಲ ರ್ಯಾಂಕ್‍ನಿಂದ ನೂರರ ಒಳಗಿನ ಸ್ಥಾನವನ್ನು ಪ್ರತಿವರ್ಷ ಪಡೆಯುತ್ತಿದ್ದಾರೆ ಎಂದರು.

ಈ ಕಾರ್ಯಾಗಾರದಲ್ಲಿ ಪರಿಣಾಮಕಾರಿ ಅಧ್ಯಯನ ತಂತ್ರಗಳು ಮತ್ತು ಸಮಯ ನಿರ್ವಹಣೆ ತಂತ್ರಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೇದಿಸಲು ವಿಷಯ-ನಿರ್ದಿಷ್ಟ ಸಲಹೆಗಳು ಮತ್ತು ತಂತ್ರಗಳು,ಸ್ಕೋರ್ ಮತ್ತು ಶ್ರೇಣಿ ಸುಧಾರಿಸಲು ಅನುಸರಿಸಬೇಕಾದ ತಂತ್ರಗಳು, ಸಾಮಾಥ್ರ್ಯ ಮತ್ತು ದೌರ್ಬಲ್ಯ ಹೇಗೆ ವಿಶ್ಲೇಷಿಸುವುದು ಎಂಬ ಬಗ್ಗೆ ತಿಳುವಳಿಕೆ, ಪರೀಕ್ಷಾ ತಯಾರಿ ಮತ್ತು ಒತ್ತಡ ನಿರ್ವಹಣೆ ಬಗ್ಗೆ ತಜ್ಞರ ಮಾರ್ಗದರ್ಶನ ಅಲ್ಲದೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ನೀಟ್ ಹಾಗೂ ಜೆಇಇ ಬಗ್ಗೆ ಇರುವ ಸಂಶಯ ಗೊಂದಲಗಳಿಗೆ ಈ ಕಾರ್ಯಗಾರದಲ್ಲಿ ಖಚಿತವಾಗಿ ಮುಕ್ತಿ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ತಜ್ಞರಾದ ಚಂದ್ರಶೇಖರ್ ಜೋಸ್ಯುಳ ಮಾತನಾಡಿ ಶಿವಮೊಗ್ಗದ ಯುವಕ-ಯುವತಿಯರು ನೀಟ್ ಮತ್ತು ಜೆಇಇ ತರಬೇತಿಗೆ ದಾವಣಗೆರೆ ಹಾಗೂ ಇನ್ನಿತರ ಕಡೆಗೆ ಹೋಗಬೇಕಾಗುತ್ತಿತ್ತು. ನೀಟ್ ರ್ಯಾಂಕಿಂಗ್‍ನಲ್ಲಿ ಬೇರೆ ಊರಿನ ಹೆಸರು ಕೇಳಿ ಬರುತ್ತಿತ್ತು. ಆದರೆ, ಇನ್ನೂ ಮುಂದೆ ಎನ್.ರಮೇಶ್‍ರವರ ಪ್ರಯತ್ನದಿಂದ ಶಿವಮೊಗ್ಗದಲ್ಲೇ ರಾಷ್ಟ್ರದಲ್ಲೇ ಅತ್ಯುತ್ತಮವಾದ ನೀಟ್ ತರಬೇತಿ ತಜ್ಞರಿಂದ ಸಿಗಲಿದೆ ಎಂದರು.

ಕಾರ್ಯಾಗಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9916321139, 08182-251408, 9008024448, 94823 45858 ಸಂಪರ್ಕಿಸಬಹುದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ತಜ್ಞರಾದ ರಮಣ ಅಮರನೇನಿ, ಚಂದ್ರಮೋಹನ್, ಚಂದ್ರಶೇಖರ್ ಕಣ್ಣನ್ ಇದ್ದರು.

Exit mobile version