Site icon TUNGATARANGA

ನಗರದಲ್ಲಿ ಬೀದಿನಾಯಿ ಹಂದಿಗಳ ಕಾಟ, ತಲೆಕೆಡಿಸಿಕೊಳ್ಳದ ಮಹಾನಗರ ಪಾಲಿಕೆ ಸಾರ್ವಜನಿಕರು ಅಕ್ರೋಶ

ಶಿವಮೊಗ್ಗ,ಜು.3: ನಗರದಲ್ಲಿ ಎಲ್ಲಾ ಬಡಾವಣೆಗಳಲ್ಲೂ ಬೀದಿ ನಾಯಿ ಮತ್ತು ಹಂದಿಗಳ  ಕಾಟ ಮಿತಿ ಮೀರಿದ್ದು, ಮಹಾನಗರ ಪಾಲಿಕೆಯ ಜಾಣ ಕುರುಡು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಹಲವಾರು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪೋಟೋ ಸಹಿತ ವರದಿ ಬಂದರೂ ಸಹ ಮಹಾನಗರ ಪಾಲಿಕೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ. ಈಗಾಗಲೇ ರಾಜ್ಯದಲ್ಲೇ ಶಂಕಿತ ಡೆಂಗ್ಯೂ ಪ್ರಕರಣದಲ್ಲಿ ಜಿಲ್ಲೆ ಮೂರನೇ ಸಾಲಿನಲ್ಲಿದ್ದು, ಸಾಂಕ್ರಾಮಿಕ ರೋಗ ಹರಡುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಾಗಿದೆ.

35 ವಾರ್ಡ್‍ಗಳಲ್ಲೂ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಹಂದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಅನೇಕ ಕಡೆ ಬೀದಿ ನಾಯಿಗಳು ದಾಳಿ ಮಾಡಿವೆ.

ನಗರದ ದುರ್ಗಿಗುಡಿ, ಬಸವನಗುಡಿ,ನಂಜಪ್ಪ ಲೇಔಟ್, ವಿನೋಬನಗರದ ಆಟೋ ಕಾಂಪ್ಲೆಕ್ಸ್, ಬೆಂಕಿನಗರ ಸೋಮಿನಕೊಪ್ಪ

, ಗೋಪಾಳಗೌಡ ಬಡಾವಣೆ, ಬೊಮ್ಮನಕಟ್ಟೆ, ಆರ್‍ಎಂಎಲ್ ನಗರ ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version