Site icon TUNGATARANGA

ಮಳೆಗೆ ಭಾರೀ ಗಾತ್ರದ ಮರ ಬಿದ್ದು ಪ್ರವಾಸಿ ಬಸ್ ಸಂಪೂರ್ಣ ಜಖಂ, ಕೆ.ಇ.ಬಿ.ಲೈನ್ ಸಂಪೂರ್ಣ ಕಟ್

ಮಾರಿಗುಡ್ಡದ ಬಳಿ ಗಜಗಾತ್ರದ ಅಕೇಶಿಯ ಮರ ಬಿದ್ದು ಪ್ರವಾಸಿ ಬಸ್ಸು, ಕೆ.ಇ.ಬಿ ಲೈನ್, ಟಿ.ವಿ ಕೇಬಲ್ ಆರ್.ಸಿ.ಸಿ ಮನೆ ಪ್ಯಾರ ಪೀಟ್
ಹೊಸನಗರ: ಹೊಸನಗರ ತಾಲ್ಲೂಕಿನದ್ಯಾಂತ ಗಾಳಿ ಸಹಿತ ಮೂರು ದಿನಗಳಿಂದ ಮಳೆಯಾಗುತ್ತಿದ್ದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ಸಣ್ಣ-ಪುಟ್ಟ ಆನಾಹುತಗಳು ನಡೆದ ಬಗ್ಗೆ ವರದಿಯಾಗಿದೆ


ಹೊಸನಗರದ ಮಾರಿಗುಡ್ಡದ ಸರ್ವೆನಂಬರ್ ೧೩ರಲ್ಲಿರಾತ್ರಿ ಗಾಳಿ ಮಳೆಗೆ ಚಂದ್ರಶೇಖರ ಗೌಡರವರ ಮಾಲಿಕತ್ವದ ನಿಲ್ಲಿಸಿದ್ದ ಪ್ರವಾಸಿ ಬಸ್ಸು, ಕೆ.ಇ.ಬಿ ಲೈನ್, ಕೇಬಲ್ ಲೈನ್ ಹಾಗೂ ಹಿರಿಯಣ್ಣನವರ ಮನೆಯ ಮೇಲೆ

ದೊಡ್ಡ ಗಾತ್ರದ ಆಕೇಶಿಯ ಮರ ಬಿದ್ದ ಪರಿಣಾಮ ಪ್ರವಾಸಿ ಬಸ್ಸ್ ಸಂಪೂರ್ಣ ನುಚ್ಚುನೂರಾಗಿದ್ದು ಕೆಇಬಿ ಲೈನ್ ಸಂಪೂರ್ಣ ಕಟ್ ಆಗುವುದರ ಜೊತೆಗೆ ಟಿ.ವಿ ಕೇಬಲ್ ತುಂತಾಗಿದ್ದು ಮನೆಯ ಮೇಲ್ಬಾಗದಲ್ಲಿ ಪ್ಯಾರ್ ಪಿಟ್ ಸಂಪೂರ್ಣ ಜಖಂ ಆಗಿದ್ದು ಸುಮಾರು ಅಂದಾಜು ೩ಲಕ್ಷದಷ್ಟು ನಷ್ಟ ಉಂಟಾಗಿದೆ


ಗ್ರಾಮ ಲೇಕ್ಕಾಧಿಕಾರಿ ಬೇಟಿ ಪರಿಶೀಲನೆ: ಹೊಸನಗರದ ತಹಶೀಲ್ದಾರ್ ಶ್ರೀಮತಿ ರಶ್ಮೀ ಹಾಲೇಶ್‌ರವರ ಅದೇಶದ ಮೇರೆಗೆ ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಕ್‌ರವರು ಬೇಟಿ ನೀಡಿ ಸ್ಥಳ ಪರಿಶೀಲಸಿ ನಷ್ಟದ ಬಗ್ಗೆ ಅಂದಾಜಿಸಿ ಕಂದಾಯ

ಇಲಾಖೆಗೆ ವರದಿ ನೀಡಿದ್ದಾರೆ
ಹೊಸನಗರದಲ್ಲಿ ಸಾಕಷ್ಟು ಮರಗಳು ಮನೆಯ

ಸುತ್ತ-ಮುತ್ತ ಸರ್ಕಾರಿ ಜಾಗದಲ್ಲಿದ್ದು ಈ ಬಗ್ಗೆ ಸಾಕಷ್ಟು ವರದಿಯನ್ನು ಪತ್ರಿಕೆಗಳಲ್ಲಿ ವರದಿ ಮಾಡಲಾಗಿದ್ದರೂ ಯಾವುದಕ್ಕೂ ಸ್ವಂದಿಸಿದೇ ಇರುವುದರಿಂದ ಈ ರೀತಿ ಆನಾಹುತಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಬಾರೀ ಆನಾಹುತ

ತಪ್ಪಿಸಬೇಕಾದರೇ ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ತುರ್ತು ಗಮನ ಹರಿಸಿ ಸರ್ಕಾರಿ ಜಾಗದಲ್ಲಿರುವ ಮರದ ಕೊಂಬೆಗಳನ್ನು ತೆಗೆಯದಿದ್ದರೇ ಇನ್ನೂ ಬಾರೀ ಆನಾಹುತ ಸಂಭವಿಸುವ ಸಾಧ್ಯತೆಗಳಿದ್ದು ತಕ್ಷಣ ಅಧಿಕಾರಿಗಳು ಸ್ವಂದಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Exit mobile version