Site icon TUNGATARANGA

ಜು. 2ಕ್ಕೆ ಕೈಮಗ್ಗ ಸೀರೆಗಳ ಪ್ರದರ್ಶನ ಮೇಳ,ಶಿವಮೊಗ್ಗದ ಯುವ ಉದ್ಯಮಿ ಶಿಲ್ಪಾ ಗೋಪಿನಾಥ್ ರಿಂದ ಉದ್ಘಾಟನೆ

ಶಿವಮೊಗ್ಗ: ನಗರದ ಜ್ಯೂಯಲ್ ರಾಕ್ ಹೊಟೇಲ್‌ನಲ್ಲಿ ಜುಲೈ 2ರಂದು ಕೈಮಗ್ಗ ಸೀರೆ, ಮೈಸೂರು ರೇಷ್ಮೆ ಮತ್ತು ಕಾಂಚೀಪುರಂ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.


ಹಾಸನದ ರೇಷ್ಮೆ ಸೀರೆಗಳ ಅಂಗಡಿ ರತ್ನಂ ಸಿಲ್ಕ್ ವತಿಯಿಂದ ಆಯೋಜಿಸಿರುವ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜುಲೈ 2ರಂದು ಬೆಳಗ್ಗೆ 10ಕ್ಕೆ

ಶಿವಮೊಗ್ಗದ ಯುವ ಉದ್ಯಮಿ ಶಿಲ್ಪಾ ಗೋಪಿನಾಥ್ ಉದ್ಘಾಟಿಸುವರು. ದಂತ ವೈದ್ಯೆ ದೀಪಾ ಸಚಿನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸೀರೇಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕೈಮಗ್ಗ ಸೀರೆಗಳು,

ಮೈಸೂರು ರೇಷ್ಮೆ ಸೀರೆಗಳು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸ್ ಸೀರೆ ಸೇರಿದಂತೆ

ಮಹಿಳೆಯರಿಗೆ ಇಷ್ಟವಾಗಬಲ್ಲ ಅತ್ಯಾಕರ್ಷಕ ಸೀರೆಗಳು ಇರಲಿವೆ ಎಂದು ರತ್ನಂ ಸೀರೆಗಳ ಅಂಗಡಿಯ ದರ್ಶನ್ ಹಾಗೂ ದೀಪ್ತಿ  ತಿಳಿಸಿದ್ದಾರೆ.

Exit mobile version