Site icon TUNGATARANGA

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ,ಸಿಎಂ ಅಪ್ರೋವಲ್ ಇಲ್ಲದೆ ಇಷ್ಟೋಂದು ದೊಡ್ಡ ಹಗರಣ ನಡೆದಿದೆಯಾ:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅರೋಪ

ಶಿವಮೊಗ್ಗ  : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮಾಡಿಕೊಂಡು ಬಂದಿದೆ. ಹೋರಾಟದ ಫಲ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಎಂದರು.

ಅಧಿಕಾರಿ ಚಂದ್ರಶೇಖರ ಡೆತ್ ನೋಟ್ ನಲ್ಲಿ ಅನೇಕ ಅಂಶ ಉಲ್ಲೇಖ ಆಗಿದೆ. ನಿನ್ನೆ ಸಹ ರಾಜ್ಯಾದ್ಯಂತ ಹೋರಾಟ ಮಾಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಹಗರಣ ನಡೆದಿದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಿಟ್ಟ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಸರ್ಕಾರ ಹಣ ಲೂಟಿ ಮಾಡಿರುವ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.

ಶರಣ ಪ್ರಕಾಶ್ ಪಾಟೀಲ್, ಬೋರ್ಡ್ ಅಧ್ಯಕ್ಷರು ಸೇರಿ ಮುಖ್ಯಮಂತ್ರಿಗಳು ಸಹ ರಾಜೀನಾಮೆ ಕೊಡಬೇಕಾಗುತ್ತೆ. ಹಣಕಾಸಿನ ಸಚಿವರು ಸ್ವತಃ ಸಿಎಂ ಇದ್ದಾರೆ. ಸಿಎಂ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಹಗರಣ ಆಗಿದೆ. ಜು. 3 ನೇ ತಾರೀಖು ಮಂಗಳವಾರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ರಾಜ್ಯದ ಇತಿಹಾಸದಲ್ಲಿ ಇಂತಹ ದೊಡ್ಡ ಹಗರಣ ನಡೆದಿಲ್ಲ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರುಪಯೋಗವಾಗಿದೆ. ಲೋಕಸಭೆ ಚುನಾವಣೆಗೆ ಈ ಹಣ ಉಪಯೋಗ ಆಗಿದೆ ಎನ್ನುವ ಚರ್ಚೆಮಾಡಿದ್ದಾರೆ. ಸತ್ಯನಾರಾಯಣ ಶರ್ಮ ಅವರಿಗೆ ಕೊಲೆ ಬೆದರಿಕೆ ಬರುತ್ತಿದೆ ಎಂದಿದ್ದಾರೆ. ಸಾವಿರಾರು ಅಕೌಂಟ್ ಓಪನ್ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ

. ಘಟನೆ ನಡೆದು ಇಷ್ಟು ದಿನಾ ಆದ್ರೂ ಎಸ್ಐಟಿ ತನಿಖೆಗೆ ಇಲ್ಲಿಯವೆಗೆ ಕರೆದಿಲ್ಲ. ಸಿಎಂ ತಮ್ಮ ಬುಡಕ್ಕೆ ಬರುತ್ತೆ ಅಂತ ಅವರ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಅಪ್ರೋವಲ್ ಇಲ್ಲದೆ ಇಷ್ಟೋಂದು ದೊಡ್ಡ ಹಗರಣ ನಡೆದಿದೆಯಾ? ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಮಳೆ ಸರಿಯಾಗಿ ಆಗುತ್ತಿಲ್ಲ. ಬಿತ್ತನೆ ಬೀಜ ದುಬಾರಿ ಆಗುತ್ತಿದೆ.‌ಲೋಕಸಭಾ ಸಭೆ ತನಕ ಒಗ್ಗಟಿನ ಪ್ರದರ್ಶನ ಮಾಡುತ್ತಿದ್ದರು. ಈಗ ಹಾದಿಲಿ ಬೀದಿಲಿ ಸಿಎಂ,ಡಿಸಿಎಂ ಬಗ್ಗೆ ಚೆರ್ಚೆ ಆಗುತ್ತಿದೆ. ಮುಖ್ಯಮಂತ್ರಿ ಬದಲಾಗಬೇಕು ಅಂತ ಚರ್ಚೆ ಆಗುತ್ತಿದೆ ರಾಜ್ಯದ ಜನರ ಪಾಲಿಗೆ ಸರ್ಕಾರ ಶಾಪವಾಗಿದೆ. ರೈತರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Exit mobile version