Site icon TUNGATARANGA

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯನವರಿಗೆ ಬೈರವಿ ರೈತ ಮಹಿಳೆ ಪ್ರಶಸ್ತಿ


ಶಿವಮೊಗ್ಗ:

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಲಿಂಗೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ನೇ ವರ್ಷದ ಜಯಂತ್ಯೋತ್ಸವ ಹಾಗೂ 8ನೇ ವರ್ಷದ ಸಂಸ್ಮರಣ ಮಹೋತ್ಸವದ ಅಂಗವಾಗಿ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುವ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯನವರಿಗೆ ಬೈರವಿ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷ ಈ ಸಮಾರಂಭದಲ್ಲಿ ರಾಜ್ಯಾದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಮಹಿಳೆಯರಿಗೆ ಶ್ರೀ ಕ್ಷೇತ್ರವೂ ಗುರುತಿಸಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ.
ರಾಜ್ಯ ರೈತ ಸಂಘದ ಮೂಲಕ ಸುಧೀರ್ಘ 25ವರ್ಷಗಳ ಕಾಲ ರೈತರಿಗೆ ನ್ಯಾಯ ಕೊಡಿಸುವ ನಿರಂತರ ಹೋರಾಟ ಮಾಡಿರುವುದನ್ನು ಗುರುತಿಸಿ ಪವಿತ್ರಾ ರಾಮಯ್ಯನವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಅವರು ನನ್ನ ಈ ಗೌರವಕ್ಕೆ ರೈತಾಪಿವರ್ಗವೇ ಕಾರಣವಾಗಿದ್ದು, ಈ ಪ್ರಶಸ್ತಿಯನ್ನು ಸಮಸ್ತ ರೈತ ಬಾಂಧವರಿಗೆ ಅರ್ಪಿಸುವುದಾಗಿ ಮನದಾಳದ ಮಾತಿನಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಚುಂಚಾದ್ರಿ ಮಹಿಳಾ ಸಮಾಜದ ಪ್ರಮುಖರು ಭಾಗವಹಿಸಿದ್ದರು.

ನಕಲಿ ಗೊಬ್ಬರ ಕಂಪನಿಗಳ ಮೇಲೆ ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ೨೦ಕ್ಕೂ ಹೆಚ್ಚು ಬಯೋಪರ್ಟಿಲೈಸರ‍್ಸ್ ಕಂಪನಿಗಳು ರಾತ್ರೋರಾತ್ರಿ ಸಿದ್ಧಪಡಿಸುವ ಬ್ರಾಂಡ್‌ಗಳ ಹೆಸರಿನಲ್ಲಿ ಸರ್ಕಾರ ಅಧಿಕೃತಿ ಪರಿಶೀಲಿತಾ ಪರವಾನಿಗೆಗಳಿಲ್ಲದ, ಐಎಸ್‌ಐ, ಐಎಸ್‌ಓ, ಆಗ್‌ಮಾರ್ಕ್‌ಗಳಿಲ್ಲದ ನಕಲಿ ಅಗ್ರೋ ಪ್ರಾಡಕ್ಟ್ (ಸಾವಯವ)ಗೊಬ್ಬರಗಳನ್ನು ರೈತರಿಗೆ ನೇರವಾಗಿ ಸಾಲದ ರೂಪದಲ್ಲಿ ಕೊಟ್ಟು ವಸೂಲಿ ದಂದೆ ನಡೆಸುತ್ತಿದ್ದು, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ತಂಡಗಳಿಂದ ದಾಳಿ ನಡೆಸಿ ಕಾಳಸಂತೆ ಕೋರರನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಕಳೆದ ೭-೮ ವರ್ಷಗಳಿಂದ ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಈ ನಕಲಿ ಗೊಬ್ಬರ ಕಂಪನಿಗಳು ಏಜೆಂಟರುಗಳ ಮೂಲಕ ವಿತರಿಸುವ, ಬಯೋಪರ್ಟಿಲೈರಸ್ಸ್ ಕಂಪನಿಗಳ ಮಾಲೀಕರೊಂದಿಗೆ ಶಾಮೀಲಾಗಿರುವ ಕೃಷಿ ಅಧಿಕಾರಿಗಳನ್ನು ಕೂಡಲೇ ಅಮಾನತು ಗೊಳಿಸಿ ತನಿಖೆ ನಡೆಸುವಂತೆ ಸಂಘಟನೆ ಆಗ್ರಹಿಸಿದೆ.
ಈ ನಕಲಿ ಗೊಬ್ಬರದ ಗುಣಮಟ್ಟ ಪರಿಕ್ಷೀಸಲು ಅಧಿಕೃತ ಲ್ಯಾಬ್ ಕಳುಹಿಸಿದರೆ, ಎಲ್ಲಾ ಸತ್ಯ ಸತ್ಯಾತೆಗಳು ಹೊರಬೀಳಲಿದೆ. ಅಸಲು ಗೊಬ್ಬರನವನ್ನು ಹೋಲುವಂತೆ ನಕಲಿ ಕಾಂಪೋಸ್ಟ್ ತಯಾರಿಸಿ, ನ್ಯಾಚುರಲ್ ಪವರ್ ಆಗ್ರೋ ಪ್ರಾಡಕ್ಟ್ ಗೊಬ್ಬರ ಎಂದು ವಿವಿಧ ಬ್ರಾಂಡುಗಳ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ.
ಬಯೋಪರ್ಟಿಲೈಸರ‍್ಸ್ ಕಂಪನಿಯೊಂದು ಲೀಗಲ್ ಆಗಿ ನೋಂದಣಿ ಮಾಡಿಸಿ ಕಾನೂನಿನಂತೆ ಜಿ.ಎಸ್.ಟಿ ಮಾಡಿಸಿ ಅಧಿಕೃತ ಮಾರಾಟದ ಅಂಗಡಿಗಳ ಮೂಲಕ ಮಾರಾಟ ಮಾಡದೇ ನೇರವಾಗಿ ಕಸಿಕರಿಗೆ ಮಾರಾಟ ಮಾಡುತ್ತಿರುವ ಈ ನಕಲಿ ಗೊಬ್ಬರ ವಿತರಕರ ಜಾಲದ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.
ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಪದಾಧಿಕಾರಿಗಳಾದ ಟಿ. ಬಸವರಾಜ್, ಶಿವಕುಮಾರ್, ಜಯಕೃಷ್ಣ, ಕವಿ ಚಂದ್ರನ್, ಜಯಪ್ಪ, ಗುರುಮೂರ್ತಿ ಮೊದಲಾದವರು ಇದ್ದರು.

ಆರ್.ಎ.ಎಫ್ ಘಟಕ ಶಿಲಾನ್ಯಾಸ ನಾಮಫಲಕ ಬದಲಿಸಲು ಆಗ್ರಹ
ಶಿವಮೊಗ್ಗ: ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಕನ್ನಡಿಗರ ರಕ್ಷಣಾವೇದಿಕೆ ಸಮರ ಸೇನೆ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆರ್‌ಎಎಫ್ ಘಟಕದ ಶಿಲಾನ್ಯಾಸ ಕಾರ್ಯಕ್ರಮದ ನಾಮಫಲಕವನ್ನು ಉದ್ಘಾಟನೆ ಮಾಡಿದ್ದು, ಆದರೆ, ಆ ನಾಮಫಲಕ ಕನ್ನಡ ಭಾಷೆಯಲ್ಲ ಇಲ್ಲ. ಇದು ಕನ್ನಡ ಭಾಷೆಗೆ ಮಾಡುತ್ತಿರುವ ಅನ್ಯಾಯವಾಗಿದ್ದು, ಕೂಡಲೇ ಈ ಅಡಿಗಲ್ಲನ್ನು ತೆಗೆದು ಕನ್ನಡದ ನಾಮಫಲಕ ಹಾಕಬೇಕು. ಇಲ್ಲವಾದಲ್ಲಿ ನಮ್ಮ ವೇದಿಕೆಯ ವತಿಯಿಂದ ಪುನರ್ ನಾಮಫಲಕ ಹಾಕಲಾಗುತ್ತದೆ ಎಂದು ವೇದಿಕೆ ತಿಳಿಸಿದೆ.
ಸಿಎಂ ಕ್ಷೇತ್ರದಲ್ಲೇ ಕನ್ನಡಕ್ಕೆ ಅನ್ಯಾಯವಾಗುತ್ತಿದ್ದು, ಮಹರಾಷ್ಟ್ರದ ಮುಖ್ಯಮಂತ್ರಿಗಳು ಬೆಳಗಾವಿ ತಮ್ಮದೆಂದು ಹೇಳುತ್ತಿದ್ದಾರೆ. ಆದರೆ, ಕರ್ನಾಟಕದ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲೀ, ಕನ್ನಡ ಭಾಷೆಯ ಪರವಾದ ಧ್ವನಿಯೆತ್ತುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಖಂಡಿಸಿ ವೇದಿಕೆಯ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಕನ್ನಡಿಗರ ರಕ್ಷಣಾ ವೇದಿಕೆ ನೀಡಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಾವಳ್ಳಿ ಚಂದ್ರ, ರವಿ, ಶ್ರೀನಿವಾಸ್, ಹೆಚ್. ಚಂದ್ರು, ನಾಗರಾಜ್, ಗೋಪಾಲಗೌಡ ಮೊದಲಾದವರು ಇದ್ದರು.

Exit mobile version