Site icon TUNGATARANGA

ಶುದ್ಧ ಕುಡಿಯುವ ನೀರು ಬಳಕೆ  ಪ್ರತಿಯೊಬ್ಬರಿಗೆ ಅಗತ್ಯ:  ಎಜಿಎಂ   ಲಕ್ಷ್ಮಣ್ ಧರ್ಮಟ್ಟಿ /ಶಿವಮೊಗ್ಗ ಶಾಹಿ ಎಕ್ಸೋರ್ಟ್ ನಿಂದ ಸಾರ್ವಜನಿಕ ಸೇವೆ

ಶಿವಮೊಗ್ಗ, ಜೂ.26:
ಶಿವಮೊಗ್ಗ ಶಾಹಿ ಎಕ್ಸ್ಪೋರ್ಟ್  ಪ್ರೈವೇಟ್ ಲಿಮಿಟೆಡ್ ಸಿಎಸ್ಆರ್ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಜಲಾ ಯೋಜನೆ ಅಡಿಯಲ್ಲಿ ರೂಪಿಸಿದ್ದು ಅದಕ್ಕಾಗಿ ನಮ್ಮ ಸಂಸ್ಥೆ ನೆರವು ನೀಡಿದೆ. ಇದರ ಸದುಪಯೋಗವನ್ನು ಆಯಾ ಗ್ರಾಮದ ಜನರು ಬಳಸಿಕೊಳ್ಳಲು ಶಾಹಿ ಎಕ್ಸೋರ್ಟ್ ಸಂಸ್ಥೆಯ ಎಜಿಎಂ   ಲಕ್ಷ್ಮಣ್ ಧರ್ಮಟ್ಟಿ ತಿಳಿಸಿದರು.


 ಇಂದು ಇಲ್ಲಿನ  ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಧಿಗೆ ಜನತಾ ಕಾಲೋನಿ ಮತ್ತು ಮಾಚೇನಹಳ್ಳಿ ಗ್ರಾಮದಲ್ಲಿ ಒಂದು ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಹಿ ಸಂಸ್ಥೆ ನಿರ್ಮಿಸಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು.


 ಸುಜಲ ಯೋಜನೆ ಅಡಿಯಲ್ಲಿ ಸುಮಾರು 21 ಲಕ್ಷದ ವೆಚ್ಚದಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದು ಸರಿಸುಮಾರು 770 ಮನೆಗಳಿಗೆ ಇದರ ಉಪಯೋಗ ಆಗಲಿದೆ ಎಂದು ತಿಳಿಸಿದರು.
 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ  ಸೈಯದ್ ಅನ್ಸದ್ ಅವರು ಮಾತನಾಡಿ ಶಾಹಿ

ಗಾರ್ಮೆಂಟ್ಸ್ ಅವರಿಂದ ಅನೇಕ ರೀತಿಯ ಅಭಿವೃದ್ಧಿಪರ ಕಾರ್ಯಗಳು ಜರುಗುತ್ತಿದ್ದು ಇದರಿಂದಾಗಿ ಶಾಲಾ ಮಕ್ಕಳಿಗೆ  ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುತ್ತಿದೆ.  ಇದೇ ರೀತಿಯ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಿಳಿಸಿದರು.


ತಮ್ಮ ಯೋಜನೆಗಳಿಗೆ ಅವಶ್ಯಕವಾದ ಸಹಕಾರವನ್ನು ನಿಧಿ ಗ್ರಾಮ ಪಂಚಾಯಿತಿ ನೀಡುತ್ತದೆ ಎಂದು ಭರವಸೆ ನೀಡಿದರು.


 ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸಮ್ಮ ಚಂದ್ರಪ್ಪ ಹಾಗೂ ಉಪಾಧ್ಯಕ್ಷರು ಮತ್ತು ಗ್ರಾಮದ ಸದಸ್ಯರು ಹಿರಿಯರು ಹಾಜರಿದ್ದರು.

Exit mobile version