Site icon TUNGATARANGA

ಕಮಲಾ ಹಂಪನಾ ಅಗಲಿಕೆಯಿಂದ ವಿದ್ವತ್ ಪರಂಪರೆಯ ದೊಡ್ಡ ಕೊಂಡಿ ಕಳಚಿದೆ: ಡಾ. ಅಣ್ಣಪ್ಪ ಮಳೀಮಠ

        ಶಿವಮೊಗ್ಗ :-ನಮ್ಮ ನಾಡಿನ ವಿದ್ವತ್ ಪರಂಪರೆಯ ದೊಡ್ಡ ಕೊಂಡಿ ಕಳಚಿದೆ. ಇಬ್ಬರೂ ದಂಪತಿಗಳು ಒಬ್ಬರನ್ನು ಒಬ್ಬರು ಮೀರಿಸುವಷ್ಟು ದೊಡ್ಡವರಾಗಿದ್ದರು. ವಿದ್ವತ್ ಪರಂಪರೆಯ ಒಂದು ನಾಣ್ಯದ ಎರಡು ಮುಖಗಳಾಗಿದ್ದರು ಎಂದು ಸಾಹಿತಿಗಳು, ಉಪನ್ಯಾಸಕರಾದ ಡಾ ಅಣ್ಣಪ್ಪ ಮಳೀಮಠ ಮಾತನಾಡಿದರು.


       ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಾಡೋಜ ಡಾ. ಕಮಲಾ ಹಂಪನಾ ಅವರ ಗೌರವಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


        ತಮ್ಮ ಜೀವಿತ ಅವಧಿಯಲ್ಲಿ ಅಷ್ಟೊಂದು ಸಾಧನೆ ಮಾಡಿದ ಡಾ. ಕಮಲಾ ಹಂಪನಾ ತಪ್ಪು ಮಾಡದೆ ಗೌರವಯುತವಾಗಿ ನಡೆದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಆ ಕಾಲದಲ್ಲಿ ಅವರು ಅಂತರ ಜಾತಿ ವಿವಾಹವಾಗಿ ಟೀಕೆಗಳನ್ನು ಎದುರಿಸಬೇಕಾಯಿತು. ಈಗ ಅಂತರಜಾತಿ ವಿವಾಹ ಆಗುವವರಿಗೆ ಆದರ್ಶ ವಾಗಿದ್ದರು ಎಂದು ಬಣ್ಣಿಸಿದವರು ಸಾಹಿತಿಗಳಾದ ಬಿ. ಚಂದ್ರೇಗೌಡರು.


        ಸಾಹಿತ್ಯ ಅಗ್ರಗಣ್ಯರಾಗಿದ್ದ ದಂಪತಿಗಳು ಅನೇಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಹಿರಿಯ ಸಾಹಿತಿಗಳಾದ ಆರ್. ರತ್ನಯ್ಯ ಸಂತಾಪ ವ್ಯಕ್ತಪಡಿಸಿದರು.


        ಡಾ. ಶೇಖರ್ ಗೌಳೇರ್ ಅವರು ಅವರು ಬರೆದ 48 ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವು. ಅರವತ್ತು ವರ್ಷಗಳ ಅಧ್ಯಾಪಕ ಅನುಭವ , ಸಂಶೋಧನಾ ಕೃಷಿ, ಮಹಿಳಾ ಧ್ವನಿಯಾಗಿ, ದಲಿತ ಚಳುವಳಿಯಲ್ಲಿ ತೊಡಗಿದ್ದರು ಎಂದು ವಿವರಿಸಿದರು.
       ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಅವರೊಡನೆ ಇದ್ದ ಒಡನಾಟ ಮೆಲಕು ಹಾಕಿ ಅವರ ಸಾಹಿತ್ಯ ಪ್ರಕಾರಗಳ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.


        ಗಾಯಕಿ ಬಿ. ಟಿ. ಅಂಬಿಕಾ ಗಿಳಿಯೂ ಪಂಜರದೊಳಿಲ್ಲ ಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು. ಡಾ. ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಆಚರಣೆ ಮಾಡಲಾಯಿತು. ಕೊನೆಯಲ್ಲಿ ಸುಶೀಲಾ ಷಣ್ಮುಗಂ, ಎಸ್. ನಾರಾಯಣ ಅವರ ಹಾಡಿನೊಂದಿಗೆ ಮುಕ್ತಾಯವಾಯಿತು.

Exit mobile version