Site icon TUNGATARANGA

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಕೋರಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ

ಶಿವಮೊಗ್ಗ ಗೋಪಾಳದ ಗುಡ್ ಶಫರ್ಡ್ ಚರ್ಚ್ ನಲ್ಲಿ ಭಾನುವಾರ ಎಸ್ ಎಸ್ ಎಲ್ ಸಿ , ಪಿ ಯು ಸಿ ಮತ್ತು ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು,

ಈ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಕೋರಿದ ನೂತನ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಓದು ವಕ್ಕಾಲು ಬುದ್ದಿ ಮುಕ್ಕಾಲು ಎಂಬಂತೆ ಓದು ಕೆಲಸ ಮಾಡಿದರೆ ಬುದ್ದಿ ದೇಶ ಆಳುತ್ತದೆ, ವಿದ್ಯಾಭ್ಯಾಸದ ಜೊತೆ ಜೊತೆಗೆ ಹೊರ ಸಮಾಜದ

ಒಡನಾಟವು ಕೂಡ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾದುದು, ಗುರುಗಳಾಗಿ ಪೋಷಕರಾಗಿ ನಾವು ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ , ಒಳ್ಳೆಯ ಶಿಸ್ತು , ಒಳ್ಳೆಯ ಗುಣಗಳನ್ನು ಕಲಿಸಿ ಭವ್ಯ ಭಾರತದ ಮುಂದಿನ ನಾಗರಿಕ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಧರ್ಮಗುರು ಗುಡ್ ಶಫರ್ಡ್ ಚರ್ಚ್ ನ ಫಾದರ್ ವೀರೇಶ್ ವಿ. ಮೋರಾಸ್ ಅವರು ವಿಧಾನ ಪರಿಷತ್ತಿನ ನೂತನ ಸದಸ್ಯ ಡಾ. ಧನಂಜಯ ಸರ್ಜಿ ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ಗೆ ವರ್ಗಾವಣೆ ಗೊಂಡ ಫಾ.ವೀರೇಶ್ ಮೋರಾಸ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.

ಈ ವೇಳೆ ಶ್ರೀಮತಿ ದಿವ್ಯ ನವೀನ್ , ಶ್ರೀಮತಿ ಜೆನಿತ ಆಲ್ವಿನ್, ವಿಲಿಯಂ ಕ್ಯಾಸ್ತೆಲಿನೊ, ಖಜಾಂಚಿ
ಶ್ರೀಮತಿ ಫ್ಲಾರೆನ್ಸ್ ಮೇರಿ,
ಶ್ರೀಮತಿ ಅನಿತಾ ಸಂತೋಷ್, ಹಾಜರಿದ್ದರು.

Exit mobile version