Site icon TUNGATARANGA

ಕ್ವಾರಂಟೈನ್ ನಿಯಮ ಉಲ್ಲಂಘನೆ: ಆರು ಜನರ ವಿರುದ್ದ ದೂರು ದಾಖಲು, 119ಕ್ಕೆ ತಲುಪಿದ ಶಿವಮೊಗ್ಗ

ಶಿವಮೊಗ್ಗ, ಜೂ.23:
ಹೊರ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಬಂದ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ / ಹೋಂ ಕ್ವಾಂರಂಟೈನ್ ನಲ್ಲಿ ಇರಿಸಲು ಆದೇಶವಿದ್ದು, ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ ಮಾಡಿದ್ದ ಒಟ್ಟು 06 ಜನರ ಮೇಲೆ ಕಲಂ 51(b) NDMA ಕಾಯ್ದೆ ರಿತ್ಯಾ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗಿದೆ
ಹೊರ ರಾಜ್ಯಗಳಿಂದ ಯಾರೇ ವ್ಯಕ್ತಿಗಳು ಕರ್ನಾಟಕ ರಾಜ್ಯಕ್ಕೆ ಬಂದಾಗ ಅವರನ್ನು ಸಾಂಸ್ಥಿಕ ಕ್ವಾರಂಟೈನ್ / ಹೋಂ ಕ್ವಾರಂಟೈನ್ ನಲ್ಲಿ ಇಡಲು ಆದೇಶ ಮಾಡಿ ಅವರುಗಳಿಗೆ ಮೊದಲೇ ಪೂರ್ವದಲ್ಲಿಯೇ ಸೂಕ್ತ ತಿಳುವಳಿಕೆಯನ್ನು ಸಹಾ ನೀಡಿರುತ್ತದೆ. ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ ಮಾಡದಂತೆ ಖಾತ್ರಿ ಪಡಿಸಿಕೊಳ್ಳಲು CQAS (COVID-19 Quarantine Alert System) ಮೂಲಕ ನಿಗಾ ಇಡಲಾಗಿರುತ್ತದೆ.
ಆದರೂ ಸಹಾ ಹೋಂ ಕ್ವಾರಂಟೈನ್ ನಲ್ಲಿದ್ದ ಈ ಕೆಳಕಂಡ 06 ಜನರು ಹೋಂ ಕ್ವಾರಂಟೈನ್ ಆದೇಶವನ್ನು ಅನುಸರಿಸದೇ ಉದ್ದೇಶ ಪೂರ್ವಕವಾಗಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಸರ್ಕಾರದ ಆದೇಶ ಮತ್ತು ನಿಯಮಾಳಿಗಳನ್ನು ಉಲ್ಲಂಘನೆ ಮಾಡಿರುವುದು ದೃಡಪಟ್ಟಿರುತ್ತದೆ.
ಇವರುಗಳ ವಿರುದ್ದ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಘನ ನ್ಯಾಯಾಲಯಕ್ಕೆ ಕಲಂ 51 (b) NDMA ಕಾಯ್ದೆ ರೀತ್ಯಾ ದೂರನ್ನು ದಾಖಲಿಸಲಾಗಿರುತ್ತದೆ.
ಆರು ಮಂದಿ ವಿರುದ್ದ ದೂರು
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಹಾಗೂ ಕೋಟೆ ಪೊಲೀಸ್ ಠಾಣೆ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಆನವಟ್ಟಿ ಪೊಲೀಸ್ ಠಾಣೆ, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬ ವ್ಯಕ್ತಿಯ ವಿರುದ್ಧ ಸೇರಿದಂತೆ ಒಟ್ಟು 6 ಜನರ ವಿರುದ್ಧ ಪ್ರಕಣ ದಾಖಲಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹೊರ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಬಂದಂತಹ ವ್ಯಕ್ತಿಗಳು ಹಾಗೂ ಕೋವಿಡ್-19 ಪಾಸಿಟಿವ್ ದೃಡಪಟ್ಟ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳು, ಸಾಂಸ್ಥಿಕ ಕ್ವಾರಂಟೈನ್ / ಹೋಂ ಕ್ವಾರಂಟೈನ್ ನಲ್ಲಿ ಇರಿಸುವ ಅವಕಾಶವಿದ್ದು ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ ಮಾಡದಂತೆ ಖಾತ್ರಿ ಪಡಿಸಿಕೊಳ್ಳಲು CQAS (COVID-19 Quarantine Alert System) ಮೂಲಕ ನಿರಂತರವಾಗಿ ನಿಗಾವಹಿಸಲಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ದ NDMA ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
ಹೋಂ ಕ್ವಾರಂಟೈನ್ ಆದೇಶ ಉಲ್ಲಂಘನೆ ಮಾಡಿದಂತಹ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿಯೂ ಸಹಾ ಇರಿಸುವ ಅವಕಾಶಗಳಿರುತ್ತದೆ. ಆದ್ದರಿಂದ ಸಾರ್ವಜನಿಕರು ಹೋಂ ಕ್ವಾರಂಟೈನ್ ಆದೇಶ ಉಲ್ಲಂಘನೆ ಮಾಡದೆ ಸದುಪಯೋಗ ಪಡೆಯುವಂತೆ ಸೂಚಿಸಲಾಗಿರುತ್ತದೆ.
ಶಿವಮೊಗ್ಗದಲ್ಲಿ ಮೂರು
ಕೊರೊನಾ ತಪಾಸಣೆಯಲ್ಲಿ ಇಂದು ಮೂರು ಪ್ರಕರಣಗಳು ಪತ್ತೆಯಾಗಿದ್ದು 119ರ ಗಡಿ ತಲುಪಿದೆ. ನಾಳೆ ನಾಲ್ವರಿಗೆ ಕೊರೊನಾ ಸೊಂಕು ಕಾಣಿಸಿಕೊಳ್ಳಬಹುದೆಂದು ಶಂಕಿಸಲಾಗಿದೆ.

Exit mobile version