Site icon TUNGATARANGA

ಶಿವಮೊಗ್ಗದಲ್ಲಿ ಆಟೋ ಮೀಟರ್ ಎಲ್ಲೋದುವ್ರೀ..? ಯಾರಿಗೆ ಕೇಳಬೇಕು? ಪ್ರಯಾಣಿಕನ ಪ್ರಾಮಾಣಿಕತೆ ಕಾಣಿಸ್ತಿಲ್ವವೇ, ಮಲಗಿರುವ ಇಲಾಖೆಗಳು!

ಹುಡುಕಾಟದ ವರದಿ

ದುಬಾರಿ ದರ ಕೇಳುವ ಆಟೋಚಾಲಕರ ವರ್ತನೆಗೆ ಕಡಿವಾಣ ಹಾಕೋದ್ಯಾರು?

ಶಿವಮೊಗ್ಗ,ಜೂ.೧೪:
ಶಿವಮೊಗ್ಗ ನಗರದ ಆಟೋಗಳಲ್ಲಿ ಮೀಟರ್ ನೆಪಮಾತ್ರಕ್ಕಾ? ಎಲ್ಲಿ ಅವನ್ನು ಬಳಸುತ್ತಿದ್ದಾರೆ…? ವಿಶೇಷವಾಗಿ ಶಿವಮೊಗ್ಗ ಸಂಚಾರಿ ಪೊಲೀಸ್ ಅಧಿಕಾರಿಗಳೇ, ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೇ ಶಿವಮೊಗ್ಗ ನಗರದಲ್ಲಿ ಸಂಚರಿಸುವ ಆಟೋಗಳಲ್ಲಿರುವ ಮೀಟರ್ ಬಳಕೆಯಾಗುತ್ತಿವೆಯೇ ಎಂಬುದನ್ನು ಒಮ್ಮೆ ಗಮನಿಸಿ.


ಶೇಕಡ ಒಂದರಷ್ಟು ಆಟೋ ಚಾಲಕರು ಸಹ ಮೀಟರ್ ಬಳಸುವ ವಾಡಿಕೆಯನ್ನು ಇಟ್ಟುಕೊಂಡಿಲ್ಲ. ಯಾರಾದರೂ ಜೋರು ಮಾಡಿ ಗದರಿಸಿದಾಗ ಮೀಟರ್ ಹಾಕುವ ಪರಿಪಾಠವನ್ನು ಬೆಳೆಸಿಕೊಂಡಿರುವ ಆಟೋ ಚಾಲಕರುಗಳು ತಮ್ಮಲ್ಲಿರುವ ಆಟೋದಲ್ಲಿನ ಮೀಟರ್ ಸಹ ನಿಂತು ಹೋಗುವಂತೆ, ಹಾಳಾಗುವಂತೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.
ಕಳೆದ ವರ್ಷ ತುಂಗಾತಂಗ ಪತ್ರಿಕೆಯ ಓದುಗರಾದ ಹಿರಿಯ ನಿವೃತ್ತ ಇಂಜಿನಿಯರ್ ಒಬ್ಬರ ನೋವಿನ ಕಥನವನ್ನು ಪ್ರಕಟಿಸಿದ ನಂತರ ಶಿವಮೊಗ್ಗ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಬಳಿ ಬಹುತೇಕ ಪೊಲೀ ಸರು ಅದರಲ್ಲೂ ಸಂಚಾರಿ ಪೊಲೀಸ್ರು ಇಂತಹ ಕಿರಿಕಿರಿಯ ತಪ್ಪಿಸಲು ಜಾಗೃತ ವಹಿಸುತ್ತಿದ್ದರು.


ಆದರೆ ಈಗ ಆ ಪೊಲೀಸರು, ಸಾರಿಗೆ ಪ್ರಾಧಿಕಾರದ ಒಬ್ಬೇ ಒಬ್ಬ ಇನ್ಸ್ಪೆಕ್ಟರ್ ಒಂದೇ ಒಂದು ಚಿಕ್ಕ ದಾಳಿ ತನಿಖೆ ಮಾಡಿದ ನಿದರ್ಶ ನಗಳೇ ಇಲ್ಲ. ಎಲ್ಲಿಂದಲೋ ಬಂದು ಗೂಡು ಸೇರಿಕೊಳ್ಳುವ ತವಕದಲ್ಲಿ ಪ್ರಯಾಣಿಕರಿಗೆ ದುಬಾರಿ ದರ ವಸೂಲಿ ಮಾಡುತ್ತಿರುವ ಆಟೋ ಚಾಲಕರು ಇಲ್ಲಿ ಮೀಟರ್ ಬಳಸದೆ ಇರುವುದು ಸಾಕಷ್ಟು ಅನುಮಾನವನ್ನು ಹುಟ್ಟಿಸಿದೆ. ಮೀಟರ್ ಬಳಸುವುದಿಲ್ಲ

ಈಗಲೂ ಬೆಳಗಿನ ಜಾವ ಹಾಗೂ ರಾತ್ರಿಯ ಹೊತ್ತಿನಲ್ಲಿ ಶಿವಮೊಗ್ಗ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣ , ಖಾಸಗಿ ಬಸ್ ನಿಲ್ದಾಣ, ವಿಶೇಷವಾಗಿ ರೈಲ್ವೆ ನಿಲ್ದಾಣದ ಬಳಿ ಆಟೋ ಚಾಲಕರುಗಳು ಗುಂಪು ಕಟ್ಟಿಕೊಂಡು ಹೋಗಿ ಬರುವ ಪ್ರಯಾಣಿಕರನ್ನು ಹಿಗ್ಗಾಮುಗ್ಗಾ ದರ ಮಾತಾಡಿಕೊಂಡು ಸುಮಾರು ಐದಾರು ಪಟ್ಟು ಹೆಚ್ಚು ರೊಕ್ಕ ಕೇಳುವ ಪರಿಪಾಠ ಮತ್ತೆ ಶುರುವಾಗಿದೆ.

ಎನ್ನುವುದಾದರೆ ಅವುಗಳನ್ನು ನಗರ ಪಾಲಿಕೆಯಿಂದ ಕೊಡಿಸಿದ್ದಾದರೂ ಯಾಕೆ? ಮೀಟರ್ ಬಳಕೆ ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕರಿಗೆ ಕಿರಿಕಿರಿಯಾಗುವುದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಕಡ್ಡಾಯ ನಿಯಮವನ್ನು ಜಾರಿಗೊಳಿಸಿದ್ದು ನೆಪ ಮಾತ್ರಕ್ಕೆ ಎನಿಸುತ್ತದೆ.
ಗರಿಷ್ಟ ಇಂದಿನಿಂದಲಾದರೂ ಆ ಸ್ಥಳಗಳಲ್ಲಿ ಪೊಲೀಸರು ಗುಂಪು ಕಟ್ಟಿಕೊಂಡು ಆಟೋ ಚಾಲಕರು ಹೇಳುವ ದುಬಾರಿ ದರದ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.


ಮುಂದೇನಾಗುತ್ತೆ. ನೋಡೋಣ. ಮಾಡುತ್ತಾರೋ ಅಥವಾ ಪ್ರಯಾಣಿಕರ ಹೊಟ್ಟೆಯ ಮೇಲೆ ಆಟೋ ಚಾಲಕರು ಹೊಡೆಯಲು ಬಿಡುತ್ತಾರೋ?

Exit mobile version