Site icon TUNGATARANGA

ಜೂ .17 ರಂದು ನಡೆಯುವ ಬಕ್ರೀದ್ ಹಬ್ಬ ಕುರಿತು ಸಭೆಯಲ್ಲಿ ಡಿಸಿ ಹಾಗೂ ಎಸ್ಪಿ ಹೇಳಿದ್ದೇನು ? ಯಾವುದೇ ರೀತಿಯ ಸಮಸ್ಯೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ :ಡಿಸಿ

ಶಿವಮೊಗ್ಗ : ಬಕ್ರೀದ್ ಹಬ್ಬವನ್ನ ಎಲ್ಲರೂ ಜೊತೆಯಾಗಿ ಸಂಭ್ರಮದಿಂದ ಆಚರಿಸುವಂಥಾಗಲಿ. ಒಂದು ಸಮುದಾಯ ಹಬ್ಬವನ್ನು ಆಚರಿಸಿದರೆ, ಮತ್ತೊಂದು ಸಮುದಾಯ ರಕ್ಷಣೆ ಮೂಲಕ ಹಬ್ಬದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜೂ 17 ರಂದು ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ ಹಿನ್ನಲೆಯಲ್ಲಿ ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಡಿಸಿ ಗುರುದತ್ತ ಹೆಗಡೆ ಮತ್ತು ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹಬ್ಬ ಆಚರಣೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಹಬ್ಬದ ಆಚರಣೆಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ. ಅದನ್ನ‌ ಏಕಾಏಕಿ ಸಾಮಾಜಿಕ ಜಾಲತಾಣದಿಂದ ಹರಿಬಿಡಬೇಡಿ. ಕಾನೂನು ಸುವ್ಯವಸ್ಥೆಗೆ ಭಂಗವಾಗದ ರೀತಿಯಲ್ಲಿ ಎಲ್ಲರೂ ಒಂದುಗೂಡಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಹಬ್ಬ ಆಚರಣೆಯನ್ನ ವಿಜೃಂಭಣೆಯಿಂದ ಮಾಡಬೇಕು. ಯಾರು ಹಬ್ಬ ಮಾಡೊಲ್ಲ ಹಬ್ಬ ಮಾಡುವರಿಗೆ ಸಹಕರಿಸೋಣ. ಈಗಾಗಲೇ ಮೊಹಲ್ಲಾ ಸಭೆ ನಡೆಸಲಾಗುತ್ತಿದೆ.  ಕಳೆದ ಬಾರಿಯ ಹಬ್ವದ ವೇಳೆ ಶಿಕಾರಿಪುರ ತಾಲೂಕಿನಲ್ಲಿ ಸಮಸ್ಯೆಯಾಗಿತ್ತು. ಕಳೆದ ಮೂರು ವರ್ಷದಿಂದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.

ಹಿಂದೂ ಸಂಘಟನೆಯ ಮುಖಂಡ ರಮೇಶ್ ಬಾಬು ಮಾತನಾಡಿ, ಬಕ್ರಿದ್ ಹಬ್ಬಕ್ಕೆ ಸಹಕಾರ ನೀಡುತ್ತೇವೆ. ಆದರೆ ಇದಕ್ಕೆ ಒಂದು ಸಮುದಾಯದ ಸಹಕಾರ ನೀಡಿದರೆ ಸಾಲದು ಪ್ರತಿಯೊಬ್ಬರು ಕೈಜೋಡಿಸಬೇಕು. ಮುಖ್ಯವಾಗಿ ಯುವಕರಿಗೆ ಇದನ್ನು ತಿಳಿಸಿ ಹೇಳೋ ಕಾರ್ಯ ಮಾಡಬೇಕಿದೆ ಎಂದರು.

ಅಂಜುಮಾನ್ ಸಂಸ್ಥೆಯ ಮುಖಂಡರಾದ ಮುರ್ತುಜಾ ಖಾನ್  ಮಾತನಾಡಿ, ಪ್ರವಾದಿಯವರ ಕಾಲದಲ್ಲಿ ಮಗನಿಗೆ ಬಲಿಕೊಡಲಾಗಿತ್ತು. ಅದು ಈಗ ಕುರಿಯ ಮೂಲಕ ಬಲಿಕೊಡಲಾಗುತ್ತಿದೆ. ಭದ್ರಾವತಿಯಲ್ಲಿ ಹಬ್ಬದ ಪ್ರಾರ್ಥನೆ ನಡೆಯಲಿದೆ. ಭದ್ರಾವತಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ನಮ್ಮ ಸಹಕಾರವಿದೆ. ಹಿಂದೂ ಮಹಾಸಭಾ ಗಣಪತಿಯ ಸಮಿತಿ ಸಹ ಈ ಹಬ್ಬಕ್ಕೆ ಸಹಕಾರವಿದೆ. ಮಿಲಾದ್ ಹಬ್ಬ ಬದಲಾಯಿಸಲು ಅವಕಾಶವಿಲ್ಲ.‌ ಹಬ್ಬವನ್ನ ನಿಗದಿತ ದಿನಾಂಕದಂತೆ ನಡೆಸಿ ಮೆರವಣಿಗೆ ದಿನ ಬದಲಾಯಿಸಲಾಗಿದೆ ಎಂದರು.

ರಂಜಾನ್ ಹಬ್ಬದಲ್ಲಿ ಬಲಿದಾನವಿರಲ್ಲ. ಆದರೆ ಬಕ್ರೀದ್ ಹಬ್ಬದಲ್ಲಿ ಇದೆ. ಅನ್ಯಕೋಮಿನನವರಿಗೆ ತೊಂದರೆ ಆಗದಂತೆ ಕುರುಬಾನಿ ಮತ್ತು ನಮಾಜ್ ಗೆ ತೊಂದರೆ ಆಗದಂತೆ ಹಬ್ಬ ಆಚರಣೆ ನಡೆಯುತ್ತದೆ. ಸಣ್ಣಪುಟ್ಟ ಸಮಸ್ಯೆ ಕಂಡರೂ ಅನ್ಯ ಕೋಮಿನವರು ಸಹಕರಿಸುವಂತೆ ಭದ್ರಾವತಿಯ ಮುಸ್ಲೀಂ ಮುಝಂಡರು ತಿಳಿಸಿದರು.

ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ನೀರನ್ನ ಹೆಚ್ಚು ಮುತವರ್ಜಿಯಿಂದ 20-25 ಟ್ಯಾಂಕ್ ನ್ನ ಸಿದ್ದಪಡಿಸಿಕೊಳ್ಳಲಾಗಿದೆ. ಯಾವ ಮೊಹಲ್ಲಾ ಗಳಿಗೆ ನೀರು ಬೇಕು ಅಲ್ಲಿ ಒದಗಿಸಲಾಗುವುದು. ದೂರ ಸಂಪರ್ಕದಲ್ಲಿ ಸಹಕರಿಸಿದರೆ ಟ್ಯಾಂಕರ್ ಒದಗಿಸಲಾಗುವುದು ಎಂದರು.

ಪೌರಕಾರ್ಮಿಕರಿಗೆ ರಜಾ ಇದ್ದರೂ ಅದನ್ನ ಬದಲಾಯಿಸಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಸಂಭ್ರಮ ಮತ್ತು ಸಡಗರದಿಂದ ಹಬ್ಬ ಮಾಡೋಣ ಎಂದರು.

ಜಾಮೀಯ ಮಸೀದಿ ಗಾಂಧಿಬಜಾರ್, ಸುನ್ನೀ ಜಮಾಯತ್ ಉಲ್ಮ ಕಮಿಟಿ ದರ್ಗಾ ಕಮಿಟಿ, ಹಿಂದೂ ಸಂಘಟನೆಗಳು ಸೇರಿ 100 ಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗಿಯಾಗಿದ್ದರು.

Exit mobile version