Site icon TUNGATARANGA

ಭದ್ರಾವತಿ ಹಾತಿಕಟ್ಟೆ ಗ್ರಾಮದ ಹೊಸಕೆರೆಯಲ್ಲಿ ಮೀನುಗಳ ಮಾರಣ ಹೋಮ

ಭದ್ರಾವತಿ: ತಾಲೂಕಿನ ಶೆಟ್ಟಿಹಳ್ಳಿ ವ್ಯಾಪ್ತಿಯ ಹಾತಿಕಟ್ಟೆ ಗ್ರಾಮದ ಹೊಸಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಾತಿಕಟ್ಟೆ ಗ್ರಾಮದ ಸರ್ವೆ ನಂ.5ರ ಹೊಸಕೆರೆಯಲ್ಲಿ ಶಿಲ್ಪ ಕೋಂ ಕೃಷ್ಣಮೂರ್ತಿ ಎಂಬುವರು ತಡಸ ಗ್ರಾಮ ಪಂಚಾಯಿತಿ ಮೂಲಕ ಮೀನು ಕೃಷಿ ನಡೆಸಲು ಹರಾಜಿನ ಮೂಲಕ 5 ವರ್ಷ ಗುತ್ತಿಗೆ ಪಡೆತ್ತಿದ್ದು, ಲಕ್ಷಾಂತರ ರು. ಖರ್ಚು ಮಾಡಿ ಸುಮಾರು 4 ರಿಂದ 5 ಟನ್‌ಗಳಷ್ಟು ಮೀನು ಕೃಷಿ ನಡೆಸಿದ್ದಾರೆ. ಜ.14ರ ಸಂಜೆ ಕಿಡಿಗೇಡಿಗಳು ಕೆರೆಗೆ ವಿಷ ಬೆರಸಿರುವುದರಿಂದ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಶಿಲ್ಪರವರ ತಮ್ಮ ಮೋಹನ್ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 4 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

Exit mobile version