Site icon TUNGATARANGA

ಜೂ.14ರಂದು ಮೂರು ಕೋಟಿ ರೂ. ವೆಚ್ಚದ ವೀರಶೈವ-ಲಿಂಗಾಯತ ಸಭಾ ಭವನ ಉದ್ಘಾಟನಾ ಸಮಾರಂಭ:ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್

ಶಿವಮೊಗ್ಗ,ಜೂ.12: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕವು ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಕುವೆಂಪು ನಗರದಲ್ಲಿ ನಿರ್ಮಿಸಿರುವ ವೀರಶೈವ-ಲಿಂಗಾಯತ ಸಭಾ ಭವನ ಉದ್ಘಾಟನಾ ಸಮಾರಂಭವು ಜೂ.14ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1904ರಲ್ಲಿ ಜನ್ಮತಾಳಿದ ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾವು ಪ್ರಸ್ತುತ ಸಮಾಜ ಸೇವೆಯಲ್ಲಿ ತೊಡಗಿದೆ. ಜಿಲ್ಲಾ ಘಟಕವು ಅಸ್ತಿತ್ವಕ್ಕೆ ಬಂದ ನಂತರ ಪ್ರತಿಭಾ ಪುರಸ್ಕಾರ, ಸಮಾಜ ಹಾಗೂ ದೇಶಕ್ಕೆ ಅನುಪಮ ಸೇವೆಗೈದ ಸಮಾಜದ ಗಣ್ಯರನ್ನು ಗುರುತಿಸಿ ಅವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ನೀಡುತ್ತ ಬರುತ್ತಿದೆ ಎಂದರು.

ಶ್ರೀಶೈಲ ಫೀಠದ ಶ್ರೀ1008 ಜಗದ್ಗುರು ಡಾ.ಶ್ರೀ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು, ಬೆಕ್ಕಿನ ಕಲ್ಮಠದ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ

ಡಾ.ಶ್ರೀ ಬಸವಮರುಳ ಸಿದ್ದಸ್ವಾಮೀಜಿ ಸಾನಿಧ್ಯವಹಿಸಲಿರುವ ಈ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭಾ ಭವನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಚಿವ ಈಶ್ವರ ಖಂಡೆ,್ರ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್, ಡಾ.ಧನಂಜಯಸರ್ಜಿ, ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ, ಆಯನೂರು ಮಂಜುನಾಥ್, ಎಂ.ಪಿ.ರೇಣುಕಾಚಾರ್ಯ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎಂ.ಪಿ. ಆನಂದಮೂರ್ತಿ, ಸಿ.ಮಹೇಶ್‍ಮೂರ್ತಿ ಸರಳ ಚನ್ನಬಸಪ್ಪ, ಚಂದ್ರಶೇಖರ್ ತಳಗಿಹಾಳ ಉಪಸ್ಥಿತರಿದ್ದರು.

Exit mobile version