Site icon TUNGATARANGA

ಸಾಗರ ;ಪಟ್ಟಣ ಟ್ರಾಫಿಕ್ ಅವ್ಯವಸ್ಥೆಯ ಆಗರ-ಸೂಕ್ತ ಚಿಕಿತ್ಸೆಗೆ ಸಾರ್ವಜನಿಕರ ಆಗ್ರಹ /ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಲಾಕ್ ಸಂಸ್ಕೃತಿ..!

ಸಾಗರ(ಶಿವಮೊಗ್ಗ),ಜೂನ್.೦೭: ಸಾಗರ ಪಟ್ಟಣ ಟ್ರಾಫಿಕ್ ಅವ್ಯವಸ್ಥೆಯ ಆಗರ ಎಂದು ಸಾರ್ವಜನಿಕರು ವಾಹನ ಸವಾರಾರು,ಪ್ರವಾಸಿಗರು ದೂರುತ್ತಿದ್ದಾರೆ. ಹೌದು ಇಲ್ಲಿನ ಪೊಲೀಸ್ ಇಲಾಖೆ ಈ ಹಿಂದೆ ಚುರುಕುಗೊಂಡು ಸಾಗರ ಪಟ್ಟಣದಲ್ಲಿ ಟ್ರಾಫಿಕ್ ಅವ್ಯವಸ್ಥೆಗೆ ಸುಕ್ತ ಚಿಕಿತ್ಸೆ ನೀಡಿತ್ತು.


ಕಳೆದ ೨ ದಶಕಗಳ ಹಿಂದೆ ಒಬ್ಬರು ಮಂಜುನಾಥ್ ಎಂಬ ಸಬ್‌ಇನ್ಸ್‌ಪೆಕ್ಟರ್ ಸಾಗರ ನಗರದ ಪೊಲೀಸ್ ಠಾಣೆಯಲ್ಲಿ ಒಬ್ಬ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮಂಜುನಾಥ್ ಂಬ ಸಬ್‌ಇನ್ಸ್‌ಪೆಕ್ಟರ್ ಮಲೆನಾಡಿನ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರು.ಅವರು ಬಹುಷ್ಯ ಈಗ ಡಿವೈಎಸ್ಪಿ ಆಗಿರಬಹುದು.ಅವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದರು. ಚೌಕಟ್ಟುಮೀರಿದ ಯಾವ ಶಬ್ದಗಳನ್ನು ಬಳಸುತ್ತಿರಲಿಲ್ಲ. ಬೈಯ್ಯುತ್ತಿರಲಿಲ್ಲ. ಆದರೇ ಕಾನೂನು ಕ್ರಮದಲ್ಲಿ ರಾಜೀ ಇರಲಿಲ್ಲ.


ಅಂದು ರಾಜ್ಯದಲ್ಲಿ ಹಾಗೂ ಸಾಗರ ಪುರ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿತ್ತು.ಪೊಲೀಸ್ ಇಲಾಖೆಯ ಮೇಲೆ ಯಾವಾಗಲೂ ರಾಜಕೀಯ ಒತ್ತಡವಿರುತ್ತದೆ.ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಸವಾರರ ವಾಹನ ಸೀಜ್ ಮಾಡಿ ದಂಡ ಹಾಕುತ್ತಿದ್ದರು.ರಾಜಕೀಯ ವ್ಯಕ್ತಿಗಳಿಂದ ಒತ್ತಡ ಹಾಕಿಸಿದರೇ ಒತ್ತಡಗಳಿಗೆ ಗೌರವ ನೀಡುವ ಮೂಲಕ ೩೦೦ ರೂಗಳ ದಂಡದ ಬದಲಿಗೆ ೧೦೦ ರೂ ರಶೀದಿ ಹಾಕಿ ವಾಹನ ಬಿಡುಗಡೆ ಮಾಡುತ್ತಿದ್ದರು.
ಮಂಜುನಾಥ್ ಅವರ ವರ್ಗಾವಣೆ ನಂತರ ಸಾಗರದ ಟ್ರಾಫಿಕ್ ತುಂಬಾನೆ ಹದಗೆಟ್ಟಿತ್ತು. ಪತ್ರಿಕೆಯಲ್ಲಿ ಕಠಿಣ ಶಬ್ದಗಳಿಂದ ವರದಿ ಮಾಡಿದ ಪ್ರತಿಫಲವಾಗಿ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಕೆಲವು ಶಿಫಾರಸ್ಸುಗಳ ಪ್ರಸ್ತಾವನೆ ಕಳುಹಿಸಿ ಸಾಗರದ ಕೆಲವು ರಸ್ತೆಗಳ ಏಕಮುಖ ಸಂಚಾರ ಹಾಗೂ ದಿನಬಿಟ್ಟುದಿನ ವಾಹನ ನಿಲುಗಡೆ,ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನ ನಿಲುಗಡೆ ಕುರಿತು ಆದೇಶ ಜಿಲ್ಲಾಧಿಕಾರಿಗಳಿಂದ ಹೊರಬಿದ್ದಿತು.


ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದ ನಂತರ ಸಾಗರದ ಪೊಲೀಸ್ ಠಾಣೆಯಲ್ಲಿನ ಒಂದು ಜೀಪ್ ಮತ್ತು ನಾಲ್ಕು ಸಿಬ್ಬಂಧಿಗಳು ನಿಯೋಜನೆಗೊಂಡರು.ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ನಿಲುಗಡೆ ನಿಷೇಧಿಸಿದ ಸ್ಥಳದಲ್ಲಿ ನಿಲ್ಲಿಸುವ ವಾಹನಗಳ ಚಕ್ರಗಳಿಗೆ ಲಾಕ್ ಮಾಡುವ ಪ್ರಕ್ರಿಯೆ ಆರಂಭಿಸಿದರು.

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಲಾಕ್ ಮಾಡುವುದರಿಂದ ಪೊಲೀಸ್ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ರೂಗಳ ದಂಡ ವಸೂಲಿ ಯಾಯಿತು.ಸಾಗರದ ರಸ್ತೆಗಳಲ್ಲಿ ಟ್ರಾಫಿಕ್ ವ್ಯವಸ್ಥೆ ಸುವ್ಯವಸ್ಥೆಗೊಂಡಿತು.ಪಟ್ಟಣದ ವರ್ತಕರು ಮತ್ತು ಗ್ರಾಹಕರು ಸುಗಮ ಸಂಚಾರದ ಕುರಿತು ಖುಷಿಪಟ್ಟರು.ಕೆಲವು ವಾಹನ ಸವಾರರು ನಿಯಮ ಉಲ್ಲಂಘಿಸಿ ದಂಡ ತೆತ್ತವರು ಮಾತ್ರ ಪೊಲೀಸರ ಮೇಲೆ ಸಿಟ್ಟಾದರೂ ಅವರಿಗೂ ತಪ್ಪಿನ ಅರಿವಾಗಿ ತಿದ್ದಿಕೊಂಡರು.


ಬದಲಾದ ದಿನಗಳಲ್ಲಿ ಸರ್ಕಾರ ರಾಜ್ಯಾದ್ಯಂತ ಪೊಲೀಸ್ ಇಲಾಖೆಗಳಿಗೆ ವಿಶೇಷವಾಗಿ ಕರ್ತವ್ಯ ನಿರ್ವಹಿಸಲು ಬೆಂಗಳೂರಿನ ಕೇಂದ್ರ ಕಚೇರಿಯಿಂದ ಹೆಲ್ಫ್‌ಲೈನ್ ವ್ಯವಸ್ಥೆಯ ಮೂಲಕ ರಾಜ್ಯಾದ್ಯಂತ ಬರುವ ದೂರುಗಳ ನಿರ್ವಹಣೆಗೆ ತಕ್ಷಣ ಡಿಜಿಟಲ್ ವ್ಯವಸ್ಥೆ ಜಿಪಿಎಸ್ ಅಳವಡಿಸಿದ ೧೧೨ ನಂಬರಿನ ವಾಹನಗಳ ವ್ಯವಸ್ಥೆ ಜಾರಿ ಮಾಡಿ ಹೊಸ ಜೀಪ್‌ಗಳನ್ನು ನೀಡಿರುವ ಕಾರಣ ಸಾಗರದ ಹಳೆ ವಾಹನ ಜಿಲ್ಲಾ ಪೊಲೀಸರು ಹಿಂದಕ್ಕೆ ಪಡೆದರು.
ಜಿಪಿಎಸ್ ಅಳವಡಿಸಿರುವ ೧೧೨ ವಾಹನಗಳು ದೂರು ಕರೆಗಳ ಆಧಾರದಲ್ಲಿ ಸದರಿ ವ್ಯಾಪ್ತಿಗೆ ಮಾತ್ರ ಸಂಚರಿಸಬೇಕು ಎಂಬ ನಿಯಮಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ.ಟ್ರಾಫಿಕ್ ನಿಯಂತ್ರಣಕ್ಕೆ ಅಧಿಕಾರಿಗಳ ವಿವೇಚನೆಯಂತೆ ಬಳಸುವಂತಿಲ್ಲವಾದ್ದರಿಂದ ಸಾಗರದ ಟ್ರಾಫಿಕ್ ವ್ಯವಸ್ಥೆಗೆ ಗ್ರಹಣ ಹಿಡಿಯಿತು.


ಆದರೂ ಕಳೆದ ವಿದಾನಸಭೆ ಚುನಾವಣೆ ನೀತಿಸಂಹಿತೆ ಬರುವವರೆಗೂ ಇರುವ ಪೊಲೀಸ್ ವ್ಯವಸ್ಥೆಯನ್ನೇ ಬಳಸಿ ಟ್ರಾಫಿಕ್ ನಿಯಂತ್ರಣ ಮಾಡುವ ಮೂಲಕ ಸಾಗರದ ಸಂಚಾರಿ ನಿಯಂತ್ರಣ ಸುಗಮವಾಗಿತ್ತು.ವಿದಾನಸಭೆ ನೀತಿಸಂಹಿತೆ ಮುಗಿದು ಹೊಸ ಸರ್ಕಾರ ರಚನೆಯಾದರೂ ಸಾಗರದ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಮುಂದಾಗಲಿಲ್ಲ.
ಲೋಕಸಭಾ ಚುನಾವಣಾ ನೀತಿಸಂಹಿತೆ ಎದುರಾದಾಗ ಸಾಗರದ ಸಂಚಾರಿ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿತು.ಈಗ ಎಲ್ಲಾ ನೀತಿ ಸಂಹಿತೆಗಳು ಮುಕ್ತಾಯವಾಗಿವೆ.ಇನ್ನಾದರಾರೂ ಪೊಲೀಸ್ ಇಲಾಖೆ ಸಾಗರದ ಹದಗೆಟ್ಟ ಟ್ರಾಫಿಕ್ ವ್ಯವಸ್ಥೆಗೆ ಸೂಕ್ತ ಚಿಕಿತ್ಸೆ ಆರಂಭಿಸಲಿ ಎಂದು ಸಾಗರದ ವರ್ತಕರ ಮತ್ತು ಸಾರ್ವಜನಿಕರ ಆಗ್ರಹವಾಗಿದೆ.
ಏಕಮುಖ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಮಿತಿಮೀರುತ್ತಿದೆ.ಇನ್ನು ಜೀರೋ ಜೋನ್‌ನಲ್ಲಿಯೂ ವಾಹನ ನಿಲ್ಲಿಸಿದರೂ ಪೊಲೀಸರು ಕೇಳುತ್ತಿಲ್ಲ ಎಂಬ ಕುರಿತು ವಾಹನ ಸವಾರರು ಜೀರೋ ಜೋನ್‌ನಲ್ಲಿ ವಾಹನ ನಿಲ್ಲಿಸಿ ಶಾಫಿಂಗ್ ಮಾಡುತ್ತಿದ್ದಾರೆ. ಸಾಗರದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವ ಮೂಲಕ ಸುಗಮ ಸಂಚಾರಕ್ಕೆ ಪ್ರತಿನಿತ್ಯ ಸಂಚಕಾರ ಬಂದೊದಗಿದೆ.
ತಕ್ಷಣ ಸಾಗರದ ಶಾಸಕರು ಮತ್ತು ಪೊಲೀಸ್ ಇಲಾಖೆ ಸಮಗ್ರವಾಗಿ ಚರ್ಚಿಸಿಸಿ ಸಾಗರದ ಸುಗಮ ಸಂಚಾರಕ್ಕೆ ಅಗತ್ಯ ಕ್ರಮವಹಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Exit mobile version