Site icon TUNGATARANGA

ಸಾಗರ;ಲಂಚಕ್ಕೆ ಬೇಡಿಕೆ ಇರಿಸಿದ್ದ ತಹಶೀಲ್ದಾರ್ ಕಚೇರಿಯ ಗುಮಾಸ್ತ ಲೋಕಾಯುಕ್ತ ಬಲೆಗೆ

ಸಾಗರ : ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಜಿ. ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಎಸ್.ಎನ್.ನಗರದ ಆಸಿಬ್ ಎಂಬುವವರು ಭೂಮಿ ಕಚೇರಿಯಿಂದ

೧೯೯೯ರಿಂದ ೨೦೦೧ರವರೆಗೆ ಕೈಬರಹದ ಪಹಣಿ ಪಡೆಯಲು ಹೋಗಿದ್ದಾಗ ಗುಮಾಸ್ತ ಬಸವರಾಜ್ ಅವರು ಎಲ್ಲ ದಾಖಲಾತಿಗಳನ್ನು ಝೆರಾಕ್ಸ್ ಮಾಡಿಸಬೇಕು. ಚಲನ್ ಕಟ್ಟಬೇಕು ಎಂದು ೧೫೦೦

ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಆಸಿಬ್ ೧೫೦೦ ರೂ. ಕೊಟ್ಟಿದ್ದರು. ಬಸವರಾಜ್ ಮತ್ತೆ ೨ಸಾವಿರ ರೂ ಹಣ ಕೇಳಿದ್ದರು.


ಗುರುವಾರ ಸಂಜೆ ೪ಗಂಟೆ ಸುಮಾರಿಗೆ ಬಸವರಾಜ್ ದೂರದಾರರಿಂದ ೨ಸಾವಿರ ರೂ. ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

Exit mobile version