ಭದ್ರಾವತಿ,ಜೂ.8: ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ (ರಿ) ಹಾಗೂ ಭದ್ರಾ ವನ್ಯಜೀವಿ ವಲಯ ಲಕ್ಕವಳ್ಳಿ ಇವರ
ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ವೃಕ್ಷಮಾತೆ ನಾಡೋಜ ಸಾಲು ಮರದ ತಿಮ್ಮಕ್ಕರವರು ಚಾಲನೆ ನೀಡಿದರು.
ಪರಿಸರ ಸಂರಕ್ಷಣೆ ಯು ಕೇವಲ ಆಚರಣೆಗಳಿಗೆ ಸೀಮಿತಗೊಳ್ಳದೆ, ಮಕ್ಕಳಲ್ಲಿ, ಯುವಕರಲ್ಲಿ, ಪರಿಸರ ಪ್ರಜ್ಞೆ ಬೆಳೆಯುವಂತಾಗಬೇಕು ಎಂದು ಸಾಲುಮರದ ತಿಮ್ಮಕ್ಕರವರ ದತ್ತು ಪುತ್ರ ಉಮೇಶ್ ರವರು ತಿಳಿಸಿದರು.
ಮನುಷ್ಯರು ವಾಸಿಸಲು ಒಂದು ಸ್ಥಾನ ಬೇಕು, ಉಸಿರಾಡಲು ಗಾಳಿ ಬೇಕು, ತಿನ್ನಲು ಆಹಾರ ಬೇಕು ಎಂದರೆ ಪರಿಸರ ಉಳಿಯಬೇಕು. ಪರಿಶುದ್ಧವಾದ ಬದುಕಿನ ಕ್ರಮ ಬೇಕಿದೆ ಅಂದರೆ ಪರಿಸರ ಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ರೇಖಾ ಶ್ರೀನಿವಾಸ್ ಹೇಳಿದರು.
ಆಧುನಿಕ ಜೀವನ ಶೈಲಿಯ ಪ್ರಭಾವದಿಂದಾಗಿ ಪರಿಸರ ಹಾಳಾಗುತ್ತಿದೆ. ಹಿಂದಿನ ಕಾಲದಲ್ಲಿ ಮಣ್ಣಿನ ಮೇಲೆ ಜನರು ನಡೆದಾಡು- ತ್ತಿದ್ದರು. ಈಗ ಎಲ್ಲಿ ನೋಡಿದರೂ ಕಾಂಕ್ರೀಟ್ ನೆಲ ಹಾಸಿಗೆಗಳೇ ಕಾಣ ಸಿಗುತ್ತವೆ. ಅಲ್ಲದೆ, ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. bertah, ಯುವಜನರು ತಮ್ಮ
ಜೀವನ ವಿಧಾನದಲ್ಲಿ ಬದಲಾವಣೆಗೆ ಮುಂದಾಗಬೇಕು ಡಾ.ಶ್ರೀ ನಿವಾಸ್ ವೈಧ್ಯಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮ ದಲ್ಲಿ
ವೀರೇಶ್ ಗೌಡ ಪೋಲಿಸ್ ಪಾಟೀಲ್.
ಸಹಾಯಕ ಅರಣ್ಯ ಸಂರಕ್ಷಾಧಿಕಾತಿಗಳು, ವನ್ಯಜೀವಿ ಉಪವಿಭಾಗ ಲಕ್ಕವಳ್ಳಿ..
ಆರ್.ಟಿ.ಮಂಜುನಾಥ್
ವಲಯ ಅರಣ್ಯಧಿಕಾರಿಗಳು
ಭದ್ರ ವನ್ಯಜೀವಿ ವಿಭಾಗ ಲಕ್ಕವಳ್ಳಿ..
ರೇಖಾ ಶ್ರೀ ನಿವಾಸ್
ಅಧ್ಯಕ್ಷರು ಶ್ರೀ ದುರ್ಗಾ ಫೌಂಡೇಶನ್
ಸುಧಾಕರ ಎಲ್.ಕೆ
ಸಮಾಜ ಸೇವಕರು ಲಕ್ಕವಳ್ಳಿ.
ಅಶ್ವಿನಿ ಪಿ.ಗೌಡ
ಸಮಾಜ ಸೇವಕರು
ಶಿವಮೊಗ್ಗ
ಶೃತಿ ಶೇಟ್
ಸಮಾಜ ಸೇವಕರು
ಶಿವಮೊಗ್ಗ
ಸ್ವರೂಪ ಅರಣ್ಯ ಇಲಾಖೆ ಸಿಬ್ಬಂದಿಗಳು, ಕೆಂಚಿಕೊಪ್ಪ ಶಾಲೆ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಮುಂತಾದವರು ಹಾಜರಿದ್ದರು..