Site icon TUNGATARANGA

ಇಂದು ಸಂಜೆಯ TOP NEWS!

ಜ. 17 ರಂದು ಕರೆಂಟ್ ಕಟ್!
ಶಿವಮೊಗ್ಗ, ಜ.15:
ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಆಲ್ಕೋಳ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-13, ಎ.ಎಫ್-19 ಮತ್ತು ಎ.ಎಫ್-12 ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಾದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಬೋವಿಕಾಲೋನಿ, ಅಂಬೇಡ್ಕರ್ ನಗರ, ಭೈರನಕೊಪ್ಪ, ಹನುಮಂತ ನಗರ, ವೆರ್ಟನರಿ ಕಾಲೇಜ್, ಕ್ರಷರ್ಸ್ ವ್ಯಾಪ್ತಿ, ಆಲ್ಕೋಳ ಎಸ್.ಎಲ್.ವಿ ಲೇಔಟ್, ಜೆ.ಹೆಚ್.ಪಾಟೇಲ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿ ನಗರ ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ ವಿಜಯಲಕ್ಷೀ ಲೇಔಟ್, ಎಂ.ಎಂ.ಎಸ್ ಲೇಔಟ್, ಕೆ.ಹೆಚ್.ಬಿ ಲೇಔಟ್, ಮಹಾಲಕ್ಷೀ ಲೇಔಟ್, ಶಿವಸಾಯಿ ಕ್ಯಾಸ್ಟ್ ಪ್ಯಾಕ್ಟರಿ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ದಿ: 17.01.2021 ರಂದು ಬೆಳಗ್ಗೆ 10.00 ಘಂಟೆಯಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪಾ&ನಿ ಉ.ವಿ.ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ
ಶಿವಮೊಗ್ಗ, ಜ.15:
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 17/01/2021 ರ ಭಾನುವಾರದಂದು 2020-21ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಕಾಶಿಪುರ ಕೆನರಾ ಬ್ಯಾಂಕ್ ಹತ್ತಿರ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ, ಗೋಪಾಳ ಮೋರ್ ಎದುರು ಮತ್ತು ಮಲವಗೊಪ್ಪ ಚನ್ನಬಸವೇಶ್ವರ್ ದೇವಸ್ಥಾನದ ಹತ್ತಿರ ವಿಶೇಷ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುರಗಿಹಳ್ಳಿ: ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆರ್ಜಿ ಆಹ್ವಾನ
ಶಿವಮೊಗ್ಗ, ಜ.15:
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕು ಸುರಗಿಹಳ್ಳಿ ಗ್ರಾಮದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗಿದ್ದು, ಆಸಕ್ತರು ಶಿಕಾರಿಪುರ ತಾಲೂಕು ತಹಶೀಲ್ದಾರ್ ಕಚೇರಿ ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ದಿ: 11/02/2021 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಆ&ನಾಸ&ಗ್ರಾ ಇಲಾಖೆಯ ಜಂಟಿ ನಿರ್ದೇಶಕ ಡಾ|| ಬಿ.ಟಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕಚೇರಿಗಳನ್ನು ಅಥವಾ ದೂ.ಸಂ.: 08182-222203 ನ್ನು ಸಂಪರ್ಕಿಸುವುದು.

ಬಸ್ ಪಾಸ್‍ಗಾಗಿ ಸಕಾಲ ಸೇವಾಸಿಂಧು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ
ಶಿವಮೊಗ್ಗ, ಜ.15:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿ ಬಸ್ ಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತಿ/ಪತ್ನಿಯವರ ಉಚಿತ ಕೂಪನ್ಸ್ ಮತ್ತು ಅಪಘಾತ ಪರಿಹಾರ ನಿಧಿ ಸೇವೆಗಳನ್ನು ಕಡ್ಡಾವಾಗಿ ಆನ್‍ಲೈನ್ ಮುಖಾಂತರ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ವಿಕಲಚೇತನರ ರಿಯಾಯಿತಿ ದರದ ಹೊಸ/ನವೀಕರಣದ ಬಸ್‍ಪಾಸ್ ವಿತರಣೆ ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://serviceonline.gov.in/karnataka ರಲ್ಲಿ ಅರ್ಜಿ ಸಲ್ಲಿಸಿ ಫೆಬ್ರವರಿ-28ರೊಳಗಾಗಿ ನವೀಕರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದ್ದು, ಬಸ್‍ಪಾಸ್ ಪಡೆಯುವಾಗ ಅಗತ್ಯ ದಾಖಲಾತಿಗಳ ಮೂಲ ದಾಖಲೆಗಳು ಹಾಗೂ ಜೇರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ವಿಕಲಚೇತನ್ (ಹೊಸ/ನವೀಕರಣ) ಪಾಸ್‍ಗಳನ್ನು ಪಡೆದುಕೊಳ್ಳುವಂತೆ ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅನಾಮದೇಯ ಶವ ಪತ್ತೆ
ಶಿವಮೊಗ್ಗ, ಜ.15:
ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ-14 ರಂದು ನಗರದ ಸರ್ಕಾರಿ ಬಸ್‍ನಿಲ್ದಾಣದ ಪಕ್ಕದಲ್ಲಿರುವ ಶ್ರೀನಿಧಿ ಬಾರ್ ಬಳಿ ಸುಮಾರು 50 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ. ಮೃತನ ಹೆಸರು, ವಾರಸ್ಸುದಾರರು ಹಾಗೂ ವಿಳಾಸ ತಿಳಿದಿರುವುದಿಲ್ಲ.
ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ 1.5 ಇಂಚು ಕಪ್ಪು ಬಿಳಿ ಕೂದಲು ಇರುತ್ತದೆ. ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಿಳಿ ಮಿಶ್ರ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರ ಬಗ್ಗೆ ಗುರುತು ಬಲ್ಲವರು ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್‍ಇನ್ಸ್‍ಫೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ
ಶಿವಮೊಗ್ಗ, ಜ.15:
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 17/01/2021 ರ ಭಾನುವಾರದಂದು 2020-21ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಕಾಶಿಪುರ ಕೆನರಾ ಬ್ಯಾಂಕ್ ಹತ್ತಿರ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ, ಗೋಪಾಳ ಮೋರ್ ಎದುರು ಮತ್ತು ಮಲವಗೊಪ್ಪ ಚನ್ನಬಸವೇಶ್ವರ್ ದೇವಸ್ಥಾನದ ಹತ್ತಿರ ವಿಶೇಷ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

ಬಸ್ ಪಾಸ್‍ಗಾಗಿ ಸಕಾಲ ಸೇವಾಸಿಂಧು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ
ಶಿವಮೊಗ್ಗ, ಜ.15:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿ ಬಸ್ ಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತಿ/ಪತ್ನಿಯವರ ಉಚಿತ ಕೂಪನ್ಸ್ ಮತ್ತು ಅಪಘಾತ ಪರಿಹಾರ ನಿಧಿ ಸೇವೆಗಳನ್ನು ಕಡ್ಡಾವಾಗಿ ಆನ್‍ಲೈನ್ ಮುಖಾಂತರ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ವಿಕಲಚೇತನರ ರಿಯಾಯಿತಿ ದರದ ಹೊಸ/ನವೀಕರಣದ ಬಸ್‍ಪಾಸ್ ವಿತರಣೆ ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://serviceonline.gov.in/karnataka ರಲ್ಲಿ ಅರ್ಜಿ ಸಲ್ಲಿಸಿ ಫೆಬ್ರವರಿ-28ರೊಳಗಾಗಿ ನವೀಕರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದ್ದು, ಬಸ್‍ಪಾಸ್ ಪಡೆಯುವಾಗ ಅಗತ್ಯ ದಾಖಲಾತಿಗಳ ಮೂಲ ದಾಖಲೆಗಳು ಹಾಗೂ ಜೇರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ವಿಕಲಚೇತನ್ (ಹೊಸ/ನವೀಕರಣ) ಪಾಸ್‍ಗಳನ್ನು ಪಡೆದುಕೊಳ್ಳುವಂತೆ ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅನಾಮದೇಯ ಶವ ಪತ್ತೆ
ಶಿವಮೊಗ್ಗ, ಜ.15:
ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ-14 ರಂದು ನಗರದ ಸರ್ಕಾರಿ ಬಸ್‍ನಿಲ್ದಾಣದ ಪಕ್ಕದಲ್ಲಿರುವ ಶ್ರೀನಿಧಿ ಬಾರ್ ಬಳಿ ಸುಮಾರು 50 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ. ಮೃತನ ಹೆಸರು, ವಾರಸ್ಸುದಾರರು ಹಾಗೂ ವಿಳಾಸ ತಿಳಿದಿರುವುದಿಲ್ಲ.
ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ 1.5 ಇಂಚು ಕಪ್ಪು ಬಿಳಿ ಕೂದಲು ಇರುತ್ತದೆ. ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಿಳಿ ಮಿಶ್ರ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರ ಬಗ್ಗೆ ಗುರುತು ಬಲ್ಲವರು ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್‍ಇನ್ಸ್‍ಫೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೊರಬ ತಲಗಡ್ಡೆ ಗ್ರಾಮಲೆಕ್ಕಿಗ ಮಂಜುನಾಥ ವಿ.ಆರ್. ಅಮಾನತ್ತು
ಶಿವಮೊಗ್ಗ, ಜ.15:
ಸೊರಬ ತಾಲೂಕು ತಲಗಡ್ಡೆ ವೃತ್ತ ಗ್ರಾಮ ಲೆಕ್ಕಿಗ ವಿ.ಆರ್. ಮಂಜುನಾಥ ಎಂಬುವವರು ದಿ:13/08/2019 ರಿಂದ ಸೇವೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದು, ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದಿರುವುದು ಮತ್ತು ಕಚೇರಿ ಮುಖ್ಯಸ್ಥರ ಅನುಮತಿ ಪಡೆಯದೇ ಗೈರು ಹಾಜರಾಗಿರುವುದು ಹಾಗೂ ಸರ್ಕಾರಿ ಸೇವೆಯಲ್ಲಿ ಅಕ್ರಮವಾಗಿ ಕರ್ತವ್ಯ ಲೋಪವನ್ನು ಎಸಗಿದ್ದು ಇಲಾಖಾ ವಿಚಾರಣೆಯಲ್ಲಿ ಸಾಬೀತಾಗಿರುವುದು ಕಂಡುಬಂದಿರುವುದರಿಂದ ಕಾರಣ ಕೇಳಿ ತಿಳುವಳಿಕೆ ನೀಡಿದ್ದರೂ ಯಾವುದೇ ಸಮಜಾಯಿಸಿ ಸಲ್ಲಿಸದೇ ಇರುವುದು ಕಂಡುಬಂದಿರುತ್ತದೆ.
ಆದ್ದರಿಂದ ಈ ಪತ್ರಿಕಾ ಪ್ರಕಟಣೆ ಹೊರಡಿಸಿದ ಏಳು ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವುದು. ಇಲ್ಲವಾದಲ್ಲಿ ಕ.ನಾ.ಸೇ. (ವರ್ಗೀಕರಣ, ನಿಯಂತ್ರಣ ಅಪೀಲು) 1957ರ ರೀತ್ಯಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Exit mobile version