Site icon TUNGATARANGA

ಭೂಸೇನಾ ದಿನಾಚರಣೆ ಮಹತ್ವ ಸಾರಿದ ಭದ್ರಾವತಿ ಮಾಜಿ ಸೈನಿಕರ ಸಂಘ

ತುಂಗಾತರಂಗ ವರದಿ
ಶಿವಮೊಗ್ಗ, ಜ.15:
ಭದ್ರಾವತಿ ಮಾಜಿ ಸೈನಿಕರ ಸಂಘ ಜನಮೆಚ್ಚುಗೆಯ ಹಾಗೂ ಶ್ಲಾಘನೆಯ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ನಿರಂತರವಾಗಿ ನಡೆಸುತ್ತಾ ಬಂದಿದ್ದು ಇಂದು ಭೂಸೇನಾ ದಿನಾಚರಣೆ ಅಂಗವಾಗಿ 2021ರ ದಿನದರ್ಶಿಕೆ ( ಕ್ಯಾಲೆಂಡರ್) ಬಿಡುಗಡೆ ಸಮಾರಂಭದ ಜೊತೆ ಸ್ವಚ್ಛತೆ ಹಾಗೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ.
ಕಳೆದ ಆರು ತಿಂಗಳಿನಿಂದ ನಿತ್ಯ ಸಿಲ್ವರ್ ಜ್ಯೂಬ್ಲಿ ಕ್ರೀಡಾಂಗಣದಲ್ಲಿ ಭದ್ರಾವತಿ ಸರಹದ್ದಿನ ಯುವಕರಿಗೆ ಸೈನ್ಯ, ಪೊಲೀಸ್, ಅರಣ್ಯ ರಕ್ಷಣಾ ಇಲಾಖೆಯ ಹುದ್ದೆಗಳಿಗೆ ನೇಮಕವಾಗಲು ಅಗತ್ಯವಿರುವ ದೈಹಿಕ ಸಾಮರ್ಥ್ಯ ತರಬೇತಿ ನೀಡುತ್ತಿದ್ದ ಸಂಸ್ಥೆ ಇಂದು ಅತ್ಯಂತ ವಿಶೇಷವಾಗಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿದೆ.

ಭದ್ರೆಯಂಗಳದ ಸ್ವಚ್ಚತೆ


ಆರಂಭದಲ್ಲಿ ನಗರಪಾಲಿಕೆ ಆಯುಕ್ತ ಮನೋಹರ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳೊಂದಿಗೆ ಸದಸ್ಯರು ಹಾಗೂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಭದ್ರಾವತಿ ಬಸ್ ನಿಲ್ದಾಣ ಹಾಗೂ ಭದ್ರಾವತಿ ಭದ್ರೆಯ ಅಂಗಳದಲ್ಲಿ ಇರುವ ಗಲೀಜನ್ನು ಸ್ವಚ್ಛಗೊಳಿಸುವ ಮೂಲಕ ಭೂಸೇನಾ ದಿನಾಚರಣೆಗೊಂದು ವಿಶೇಷ ಅರ್ಥ ಕಲ್ಪಿಸಿದರು.

ಉಚಿತ ತಪಾಸಣಾ ಶಿಬಿರ


ರಾಜ್ಯದಲ್ಲಿ ಮಾದರಿಯಾದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಭದ್ರಾವತಿ ಮಾಜಿ ಸೈನಿಕರ ಸಂಘವು ಇಂದು ಸಂಜೆ ಶಾಸಕ ಬಿಕೆ ಸಂಗಮೇಶ್ವರ್ ಅವರ ಉಪಸ್ಥಿತಿಯಲ್ಲಿ ಮಾಜಿ ಸೈನಿಕರ ಸಂಘ ಪ್ರತಿಭಾವಂತ ಹಾಗೂ ಮಕ್ಕಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ದೇಶದಲ್ಲಿಯೇ ಸಂಘದ ಕಾರ್ಯಕ್ರಮ ಮಾದರಿಯಾಗಿದೆ.

ದೇಶದ ರಕ್ಷಣೆ ಗಾಗಿ ಪ್ರಾಣವನ್ನು ಮುಡಿಪಾಗಿಟ್ಟ ಎಲ್ಲಾ ಯೋಧರನ್ನು ಸ್ಮರಿಸಲಾಯಿತು.

Exit mobile version