Site icon TUNGATARANGA

ಯಡಿಯೂರಪ್ಪನವರೇ, ನಿಮ್ಮ ಮಗನ ಎಂಪಿ ಸ್ಥಾನಕ್ಕೂ ಕೊಕ್ಕೆ ಹಾಕಬಹುದು, ಎಸ್ ಪಿ ದಿನೇಶ್ ಹೀಗೆ ಹೇಳಲು ಕಾರಣವೇನು


ಶಿವಮೊಗ್ಗ,ಜೂ.1:
ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಕಟ್ಟಾಳು ನಾಯಕರಾದ ಎಸ್ ಯಡಿಯೂರಪ್ಪ ಅವರೇ ತುಂಬಾ ಹುಷಾರಾಗಿ ಗಮನಿಸಿ. ನೀವು ಹಿಂದೆ ನಿಮ್ಮ ಮನೆಯಲ್ಲಿ ಹಾಗೂ ಮನದಲ್ಲಿ ಬೆಳೆಸಿದ್ದ ಆಯನೂರು ಮಂಜುನಾಥ್ ಈಗ ನಿಮ್ಮ ವಿರುದ್ಧ, ನಿಮ್ಮ ಮಕ್ಕಳ ವಿರುದ್ಧ, ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಅಂತೆಯೇ ಈಗ ನೀವು ವಿಧಾನಪರಿಷತ್ತಿಗೆ ಟಿಕೆಟ್ ನೀಡಿರುವ ಅಭ್ಯರ್ಥಿ ಮುಂದೆ ನಿಮಗೊಂದು ದಿನ ದೊಡ್ಡ ಕಂಟಕ ವಾಗುವುದು ಖಚಿತ.


ಏಕೆಂದರೆ ಹಿಂದೆ ಇದೆ ವ್ಯಕ್ತಿಡಾ. ಡಾ. ಸರ್ಜಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಟಿಕೆಟ್ ಗಾಗಿ ಓಡಾಡಿದಂತಹ ವ್ಯಕ್ತಿ. ಅವರು ಮುಂದೆ ನಿಮ್ಮ ಮಗನ ಎಂಪಿ ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಗೆ ಲಗ್ಗೆ ಇಟ್ಟರು ಇಡಬಹುದು. ನಿಮ್ಮ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ.


ನೀವು ಬೆಳೆಸಿದ ಬಹಳಷ್ಟು ಕಾರ್ಯಕರ್ತರು ನಿಮ್ಮ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇಂತಹ ವಿಶ್ವಾಸ ರಹಿತ ವ್ಯಕ್ತಿಗಳನ್ನು ನಂಬಬೇಡಿ. ಒಂದೊಂದು ದಿನ ಇದೇ ಕಾರಣಕ್ಕೆ ನಿಮಗೆ ನಿದ್ದೆ ಮಾಡದಂತೆ ಕೆಲಸ ಮಾಡಿಸುತ್ತಾರೆ. ಈಗ ಅವರನ್ನು ಗೆಲ್ಲಿಸಲು ನಿದ್ದೆ ಮಾಡದೆ ಕೆಲಸ ಮಾಡುತ್ತಿದ್ದೀರಿ. ಅದೇ ನಿಮಗೆ ಮುಂದೆ ಹಾಗಾಗುವಂತೆ ದಯಮಾಡಿ ನೋಡಿ.
ನಿಮ್ಮವರನ್ನು ಆಯ್ಕೆ ಮಾಡಿ. ನಿಮ್ಮ ಆತ್ಮೀಯ ಕಾರ್ಯಕರ್ತರಿಗೆ ನೋವುಂಟು ಮಾಡದಿರಿ.

ಎಸ್ಪಿ ದಿನೇಶ್, ಪದವೀಧರರ ಕ್ಷೇತ್ರದ ಚುನಾವಣಾ ಅಭ್ಯರ್ಥಿ

Exit mobile version