ಶಿವಮೊಗ್ಗ ,ಮೇ.೩೧:
ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸಮಗ್ರ ತನಿಖೆ ನಡೆಸಲಾಗುವುದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ನಗರದ ಕೆಂಚಪ್ಪ ಲೇಔಟ್‌ನಲ್ಲಿರುವ ಮೃತ ಚಂದ್ರಶೇಖರನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗೋಷ್ಟಿ ಯಲ್ಲಿನ ಮಾತನಾಡಿದ ಅವರು, ೧೮೭ ಕೋಟಿ ರೂ.ಹಣ ವರ್ಗಾವಣೆ ಯಾಗಿದೆ. ೯೪ ಕೋಟಿ ರೂಪಾಯಿ ಬೇರೆ ಬೇರೆ ಖಾತೆಗೆ ವರ್ಗಾವಣೆಯಾ ಗಿದೆ,. ಯಾವ ಕಾರಣಕ್ಕೆ ಆಗಿದೆ ಎಂಬುದರ ನಿರ್ದಿಷ್ಟ ಕಾರಣ ತಿಳಿಯ ಬೇಕಾಗಿದೆ. ಇದಕ್ಕೆ ಒತ್ತಡ ಇತ್ತ
. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುದನ್ನು ಈಗಲೇ ಹೇಳಲು ಸಾ
ಧ್ಯವಿಲ್ಲ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಕೊಂಡಿದ್ದರು. ಆ ಸಂದರ್ಭ ದಲ್ಲಿ ಮನೆಯಲ್ಲಿದ್ದ ಒಡವೆಯನ್ನು ಅಡವಿಟ್ಟು ಆಸ್ಪತ್ರೆ ಶುಲ್ಕ ಭರಿಸಿದ್ದೇವೆ. ನನ್ನ ಪತಿಯ ಜೀವ ಉಳಿಸಕೊಂ ಡಿದ್ದೇವೆ ಎಂದು ಅವರ ಪತ್ನಿ ಅಳಲು ತೋಡಿಕೊಂಡಿ ದ್ದಾರೆ . ಈಗ ಯಾವುದೇ ಭರವಸೆಯನ್ನು ಹೇಳಲು ಬರುವುದಿಲ್ಲ ಎಂದು ಹೇಳಿದರು.
ಡೆತ್‌ನೋಟ್‌ನಲ್ಲಿ ನಿರ್ದಿಷ್ಟವಾಗಿ ಸಚಿವರ ಹೆಸರು ಹೇಳಿಲ್ಲ . ತನಿಖೆಯಾದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈಶ್ವರಪ್ಪನವರ ಪ್ರಕರಣಕ್ಕೂ ಇದಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ. ಈಶ್ವರಪ್ಪನವರ ಹೆಸರು ಆಗ ನೇರವಾಗಿ ಕೇಳಿಬಂದಿತ್ತು ಎಂದು ಹೇಳಿದರು.
ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದಾರೆ. ಅವರ ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿದೆ. ಸತ್ಯಾಸತ್ಯತೆ ಯನ್ನು ಇವರಿಗೂ ಮತ್ತು ಜನರಿಗೂ ತಿಳಿಸುತ್ತೇವೆ. ಈಗಲೂ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ. ತನಿಖೆ ಪೂರ್ಣಗೊಂಡ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಸಚಿವರು ನೇರ ವಾಗಿ ಶಾಮೀಲಾಗಿರುವುದು ದೃಢಪಟ್ಟರೆ ರಾಜೀನಾಮೆ ಪಡೆಯುತ್ತೇವೆ. ಈ ಪ್ರಕರಣದಲ್ಲಿ ನೇರ ಪಾತ್ರ ಇಲ್ಲ ಎಂದು ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಶುದ್ದ ಸುಳ್ಳು ಯಾವುದೇ ಗುಂಡಾ ಪ್ರಕರಣಗಳನ್ನು ಕೈ ಬಿಡುವುದಿಲ್ಲ. ಅಂತಹವುಗಳನ್ನು ಹತ್ತಿಕ್ಕುತ್ತೇವೆ. ರಾಜ್ಯದಲ್ಲಿ ಕೆಲವು ಕೊಲೆಗಳಾಗಿವೆ ಅದನ್ನು ಒಪ್ಪಿಕೊಳ್ಳುತ್ತೇವೆ. ಅದರೆ ಯಾರಿಂದ ಯಾವ ಕಾರಣಕ್ಕೆ ಆಗಿವೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಧರ್ಮದ ಆಧಾರದಲ್ಲಿ ಕೊಲೆಗಳು ಆಗುತ್ತಿದ್ದವು. ಈ ಬಾರಿ ಇದರ ಆಧಾರದ ಮೇಲೆ ಕೊಲೆಗಳಾಗಿವೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅವಧಿಯಲ್ಲಿ ೪೬೬ ಪ್ರಕರಣಗಳಾಗಿವೆ. ನಮ್ಮ ಅವಧಿಯಲ್ಲಿ ೪೩೭ ಪ್ರಕರಣಗಳಾಗಿವೆ ಎಂದ ಅವರು , ೪೫ ಸಿಇಎಸ್ ಪೊಲೀಸ್ ಠಾಣೆ ಸ್ಥಾಪನೆ ಮಾಡಿದ್ದೇವೆ. ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.