Site icon TUNGATARANGA

ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಿ ಮೃತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ,ಮೇ೩೧:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಘಟನೆ ಯನ್ನು ಸಿಬಿಐಗೆ ಒಪ್ಪಿಸಬೇಕು, ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯ ಬೇಕು ಮತ್ತು ಮೃತ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಷ್ಟ್ರ ಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿ ಚಂದ್ರಶೇಖರ್ ಅವರು ಒಬ್ಬ ಪ್ರಾಮಾಣಿಕರು ಆಗಿದ್ದರು. ರಾಜ್ಯ ಸರ್ಕಾರದ ಭ್ರಷ್ಟಚಾರವನ್ನು ಬಯಲಿ ಗೆಳೆಯಲು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಒಬ್ಬ ಅಧಿಕಾರಿ ಹೀಗೆ ಆತ್ಮಹತ್ಯೆ ಮಾಡಿಕೊ ಳ್ಳುತ್ತಿರುವುದು ಅತ್ಯಂತ ದುದೈರ್ವ ಸಂಗತಿಯಾಗಿದೆ ಎಂದರು.


ಇಂದು ಮೃತ ಚಂದ್ರಶೇಖರ್ ಅವರ ಮನೆಗೆ ನಾನು ಹೋಗಿದ್ದೆ. ಕುಟುಂಬದವರ ದುಃಖ ಕಂಡು ಮನನೊಂದಿದ್ದೇನೆ. ಅದು ಅತ್ಯಂತ ಕಡು ಬಡತನದ ಕುಟುಂಬವಾಗಿದೆ. ಚಂದ್ರಶೇಖರ್ ಸಾಲ ಕೂಡ ಮಾಡಿದ್ದರು. ಅವರ ಕಷ್ಟ ನೋಡದೇ ೩ ಲಕ್ಷ ರೂ. ನೀಡಿದ್ದೇನೆ. ಸರ್ಕಾರ ಕೂಡ ೫೦ ಲಕ್ಷ ಮಾನವೀಯತೆಯ ದೃಷ್ಠಿಯಿಂದ ಕೊಡ ಬೇಕು. ಒಂದು ಪಕ್ಷ ಸರ್ಕಾರ ಕೊಡದೇ ಹೋದರೆ ನಮ್ಮ ರಾಷ್ಟ್ರಭಕ್ತಬಳಗದ ವತಿಯಿಂದ ಹಣ ಸಂಗ್ರಹಿಸಿ ನೀಡುತ್ತೇವೆ ಎಂದರು.


ರಾಜ್ಯಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗೃಹಸಚಿವ ಪರಮೇಶ್ವರ್ ಈ ಕೇಸ್‌ನ್ನು ನನ್ನ ಕೇಸಿಗೆ ಹೋಲಿಕೆ ಮಾಡಿ ಇದೇ ಬೇರೆ, ಅದೇ ಬೇರೆ ಎಂದಿದ್ದಾರೆ. ಅದು ಹೇಗೆ ಬೇರೆಯಾಗುತ್ತದೆ. ನನ್ನ ಬಗ್ಗೆ ಈ ರೀತಿಯ ಆರೋಪ ಬಂದಾಗ ನಾನು ತಕ್ಷಣ ರಾಜೀನಾಮೆ ಬರಲಿಲ್ಲವೇ. ಸಚಿವ ನಾಗೇಂದ್ರ ಎಂಬ ಹೆಸರು ಡೆತ್‌ನೋಟ್‌ಲ್ಲಿ ಇಲ್ಲದಿದ್ದರೆ ಏನ್ ಆಯಿತು. ಸಂಬಂಧ ಪಟ್ಟ ಸಚಿವರು ಮೌಖಿಕವಾಗಿ ಹೇಳಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರಲ್ಲವೇ. ಅದು ನಾಗೇಂದ್ರ ಎಂದು ಅರ್ಥವಲ್ಲವೇ. ಈ ಬಂಡತನ ಏಕೆ? ಈ ದ್ವಂದ್ವ ನಿಲುವು ಏಕೆ ಎಂದು ಪ್ರಶ್ನೆ ಮಾಡಿದರು.


ಪ್ರಾಮಾಣಿಕ ಅಧಿಕಾರಿಗಳು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳೇಬೇಕೇ? ಬರೆದಿಟ್ಟೇ ಸಾಯಬೇಕೇ? ಈ ಸರ್ಕಾರ ಹೇಗೆ ಭಂಡತನದಿಂದ ವರ್ತಿಸುತ್ತದೆ. ಈ ಘಟನೆಯನ್ನು ಸಿಬಿಐಗೆ ನೀಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.


ರಾಜ್ಯ ಸರ್ಕಾರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ, ಚನ್ನಗಿರಿಯಲ್ಲಿ ನಡೆದ ಘಟನೆಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಘಟನೆ ನಡೆದ ೭ ನಿಮಿಷದ ಒಳಗೆ ಮುಸ್ಲಿಂ ಯುವಕ ಹೃದಯಘಾತದಿಂದ ಸತ್ತಿದ್ದಾನೆ. ಆದರೆ ಸಾವಿರಾರು ಮುಸ್ಲಿಂರು ಮೆರವಣಿಗೆಯಲ್ಲಿ ಭಾಗವಹಿಸಿ ಠಾಣೆಯನ್ನು ಧ್ವಂಸ ಮಾಡಿದ್ದಾರೆ. ನಮ್ಮ ಹಿಂದುಗಳು ಇವರನ್ನು ನೋಡಿ ಕಲಿಯಬೇಕಾಗಿದೆ. ನಾನು ಒಳ್ಳೆಯದಕ್ಕೆ ಮೆರವಣಿಗೆ ಮಾಡಿದರೆ, ಮುಸ್ಲಿಂ ಗುಂಡಾಗಳು ಕೆಟ್ಟದ್ದಕ್ಕೆ ಮೆರವಣಿಗೆ ಮಾಡುತ್ತಾರೆ ಎಂದರು.


ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ. ಮಂಗಳೂರಿನ ರಸ್ತೆಯ ಮೇಲೆಯೇ ನಮಾಜ್ ಮಾಡುತ್ತಾರೆ. ನಮಾಜ್ ಮಾಡಿದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಕೊಂಡರೇ ಆ ಪೊಲೀಸ್‌ನನ್ನು ಕಡ್ಡಾಯ ರಜಾದ ಮೇಲೆ ಕಳುಹಿಸುತ್ತಾರೆ. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಹಿಂದು ಹೆಣ್ಣುಮಕ್ಕಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಬೇಕಾದಷ್ಟು ಉದಾಹರಣೆಗಳು ನನ್ನ ಕಣ್ಣುಮುಂದೆಯೇ ನಡೆದಿವೆ ಎಂದರು.
ಶಿವಮೊಗ್ಗವು ಸೇರಿದಂತೆ ರಾಜ್ಯದ ಎಲ್ಲೆಡೆ ಮಟ್ಕಾ,ಜೂಜು, ಕೊಲೆ, ಸುಲಿಗೆಗಳು ನಡೆಯುತ್ತಲೇ ಇವೆ. ಅನೇಕ ಕಡೆ ಪೊಲೀಸರು ಶಾಮಿಲಾಗಿರುತ್ತಾರೆ. ರಾಜ್ಯ ಸರ್ಕಾರ ಮಾತ್ರ ತನಗೇನು ಗೊತ್ತಿಲ್ಲದಿದಂತೆ ವರ್ತಿಸುತ್ತಿದೆ ಎಂದು ದೂರಿದರು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಘುಪತಿಭಟ್ ಗೆದ್ದೇ ಗೆಲ್ಲುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಶಂಕರ್‌ಗನ್ನಿ, ಕಾಚೀನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಜಾಧವ್, ಭೂಪಾಲ್, ಬಾಲು, ಮೋಹನ್ ಇದ್ದರು.

Exit mobile version