Site icon TUNGATARANGA

ಪರಿಷತ್ ಮತ್ತು ಮತದಾರರಿಗೆ ಅನ್ಯಾಯ ಮಾಡಿದವರಿಗೆ ಈ ಬಾರಿ ತಕ್ಕ ಪಾಠ /ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ

ಆನವಟ್ಟಿ : ಈ ಹಿಂದೆ ಆಯನೂರು ಮಂಜುನಾಥ್ ಅವರು ಬಿಜೆಪಿಯಲ್ಲಿದ್ದುಕೊಂಡು ಪರಿಷತ್ ಸದಸ್ಯರಾಗಿ ಆನಂತರ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಈಗ ಕಾಂಗ್ರೆಸ್ ಸೇರಿದ್ದಾರೆ, ಇದು ವಿಧಾನ ಪರಿಷತ್ ಗೂ ಹಾಗೂ ಈ ಹಿಂದೆ ಮತ ನೀಡಿ ಗೆಲ್ಲಿಸಿದ್ದ ಮತದಾರರಿಗೂ ಅನ್ಯಾಯ ಮಾಡಿದಂತೆ, ಹಾಗಾಗಿ ಪ್ರಜ್ಞಾವಂತ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.


ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಜೀ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು, ಅದೇ ನಿಟ್ಟಿನಲ್ಲಿ ಈಚುನಾವಣೆಯು ಅತ್ಯಂತ ಪ್ರಮುಖವಾಗುತ್ತದೆ, ವಿಧಾನ ಪರಿಷತ್ ನಮ್ಮ ಪಕ್ಷದ ಅಭ್ಯರ್ಥಿಗಳ ಬಲ ಹೆಚ್ಚಾದರೆ ವಿಧಾನ ಸಭೆಯನ್ನು

ನಿಯಂತ್ರದಲ್ಲಿಟ್ಟುಕೊಳ್ಳಲು ಸಾಧ್ಯವಿದೆ, ಕರ್ನಾಟಕದಲ್ಲಿ ಪರಿಷತ್ ಗೆ ವಿಶೇಷವಾದ ಸ್ಥಾನವಿದೆ, ಬಹಳಷ್ಟು ಮಂದಿ ಕ್ರಿಡಾಕ್ಷೇತ್ರ, ರಂಗಭೂಮಿ, ಚಲನ ಚಿತ್ರ, ಸಾಹಿತ್ಯ ಕ್ಷೇತ್ರದ ಹೀಗೆ ನಾನಾ ಕ್ಷೇತ್ರದಿಂದ ಬಂದವರು ಪರಿಷತ್ ನಲ್ಲಿ ಜನರ ಪ್ರತಿನಿಧಿಗಳಾಗಿದ್ದಾರೆ, ಪಕ್ಷದ ಕಾರ್ಯಕರ್ತರಿಗೆ ಮತ್ತು ಸಾಧಕರಿಗೆ ಪರಿಷತ್ ನಲ್ಲಿ ಆಯ್ಕೆ ಮಾಡುವ ಸದುದ್ದೇಶದಿಂದ ರಾಜ್ಯದಲ್ಲಿ ಡಾ.ಧನಂಜಯ ಸರ್ಜಿ ಅವರಿಗೆ ಪಕ್ಷ ಅವಕಾಶ

ಮಾಡಿಕೊಟ್ಟಿದೆ, ಈ ನಿಟ್ಟಿನಲ್ಲಿ ನಾವು ಎಲ್ಲರೂ ಒಂದಾಗಿ ಸೇವಾಮನೋಭಾವ ಇರುವ ಡಾ.ಸರ್ಜಿ ಅವರನ್ನು ಹಾಗೂ ಶಿಕ್ಷಕಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.


ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ವೈದ್ಯ ವೃತ್ತಿಯಲ್ಲಿದ್ದುಕೊಂಡು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನನಗೆ ಇದೀಗ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪಕ್ಷವು ಅವಕಾಶ ಮಾಡಿಕೊಟ್ಟಿದೆ, ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದು ಪ್ರತಿ ಮತದಾರರ ಮನವೊಳಿಸಿ ಮತ ಹಾಕಿಸಿ, ಜಯಶೀಲನನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.


ಹಿರಿಯರಾದ ಮಂಜಪ್ಪ ಹೊಸಬಾಳೆ ಅವರು ಮಾತನಾಡಿ, ಪದವೀಧರ ಕ್ಷೇತ್ರ ಆರಂಭವಾದಾಗಿನಿಂದ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ, ಹಾಗಾಗಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇದೆ, ಮತ ನೀಡುವ ವಿಧಾನದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಿ, ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್.ಭೋಜೇಗೌಡರಿಗೆ ಮತವನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.


ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್.ದತ್ತಾತ್ರಿ, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಮಂಡಲದ ಅಧ್ಯಕ್ಷರಾದ

ಪ್ರಕಾಶಣ್ಣ ತಲಕಾಲಕೊಪ್ಪ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಓಬಿಸಿ ಮೋರ್ಚಾದ ಅಧ್ಯಕ್ಷರಾದ ಎಂ ಡಿ ಉಮೇಶ್, ಗೀತಾ ಮಲ್ಲಿಕಾರ್ಜುನ್, ದ್ವಾರಳ್ಳಿ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ, ಅಶೋಕ್ ಶೆಟ್ಟಿ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಮುಖಂಡರು ಹಾಗೂ ಪದವೀಧರ ಕ್ಷೇತ್ರದ ಮತದಾರರು ಭಾಗವಹಿಸಿದ್ದರು.

Exit mobile version