Site icon TUNGATARANGA

ಸಿಎಂ ತವರಿನಲ್ಲಿಯೇ ರೈತ ಆತ್ಮಹತ್ಯೆ…!?

ಕಾಲ್ಪನಿಕ ಚಿತ್ರ

ಶಿವಮೊಗ್ಗ, ಜ.13:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿವೈ ರಾಘವೇಂದ್ರ ಅವರ ಸಕ್ಷೇತ್ರದಲ್ಲಿ ರೈತನೋರ್ವನ ಆತ್ಮಹತ್ಯೆ ಮಾಡಿಕೊಂಡಿರುವುದು ನಾನಾ ಪ್ರಶ್ನೆಗಳಿಗೆಡೆ ಮಾಡಿಕೊಟ್ಟಿದೆ.
ಶಿಕಾರಿಪುರ ತಾಲ್ಲೂಕಿನ ಮಟ್ಟಿಕೋಟೆ ಗ್ರಾಮದಲ್ಲಿ ನಿನ್ನೆ ರಾತ್ರಿ ಅಶೋಕಪ್ಪ (41) ಎಂಬ ರೈತನೋರ್ವ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶುಂಠಿ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಆತ ಬೆಳೆದಿದ್ದ ಬಾಳೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 4 ಎಕರೆ ಜಮೀನನ್ನು ಮಾರಿದ್ದ ಈತ ಅರ್ಧ ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದನು. ಶಿಕಾರಿಪುರದ ಅರ್ಬನ್ ಬ್ಯಾಂಕಿನಲ್ಲಿ 8ಲಕ್ಷ ಹಾಗೂ ಸ್ಥಳೀಯ ಶಿವ ಸಹಕಾರಿ ಬ್ಯಾಂಕಿನಿಂದ 2ಲಕ್ಷ ಹಾಗೂ ಕೈ ಸಾಲ ಸೇರಿದಂತೆ ಬಡ್ಡಿ ಕಟ್ಟಲಾಗದ ದುಃಸ್ಥಿತಿಯಲ್ಲಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಆಗಲಿದ್ದು ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version