Site icon TUNGATARANGA

ಭಾರತದ ಕಣ್ಮಣಿ ಸ್ವಾಮಿ ವಿವೇಕಾನಂದ

ಲೇಖನ: ಸುಮಾರಾಣಿ.ಕೆ.ಹೆಚ್.
ಶಿವಮೊಗ್ಗ

“”ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವೆ ಮಾತಾನಾಡಿಕೊಳ್ಳಿ,ಇಲ್ಲವಾದರೆ ಜಗತ್ತಿನ ಅತ್ಯುತ್ತಮ ವ್ಯಕ್ತಿಯೊಬ್ಬನೊಂದಿಗಿನ ಸಂಭಾಷಣೆ ಕಳೆದು ಕೊಳ್ಳುತ್ತೀರಿ”

“ನೀನು ಮಾಡಿದ ತಪ್ಪಿಗೆ ಎಂದೂ ಎದುರು ನುಡಿಯಬೇಡ,ತಪ್ಪು ಮಾಡದೆ ಎದುರಾಳಿಗೆ ಎಂದೂ ತಲೆ ತಗ್ಗಿಸಬೇಡ”

ಜ್ಞಾನಕ್ಕಾಗಿ ಯಾರನ್ನಾದರೂ ಬೇಡು ಅನ್ನಕ್ಕಾಗಿ ಯಾರನ್ನೂ ಬೇಡ ಬೇಡ”

ಇಂತಹ ನುಡಿ ಮುತ್ತುಗಳನ್ನು ಹೇಳಿದ್ದು ನಮ್ಮ ಭಾರತದ ಆಧ್ಯಾತ್ಮಿಕ ಜಗತ್ತಿನ ಅದ್ಬುತ ತತ್ವಜ್ಞಾನಿ “ಸ್ವಾಮಿ ವಿವೇಕಾನಂದ”ರು. ಜಗತ್ತಿನೆಲ್ಲೆಡೆ ಭಾರತದ ಸಂಸ್ಕೃತಿ ಆಧ್ಯಾತ್ಮಿಕತೆಗೆ ಇರುವ ಮಹತ್ವವನ್ನು ಎಲ್ಲೆಡೆ ಸಾರಿದ ಕರ್ಮಯೋಗಿ.
೧೨ ಜನವರಿ ೧೮೬೩ ರಲ್ಲಿ ಪಶ್ಚಿಮ ಬಂಗಳಾದ ಕೋಲ್ಕತಾ ದಲ್ಲಿ ಜನಿಸಿದ ಇವರ ಜನ್ಮ ನಾಮ ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ.ತಾಯಿ ಭುವನೇಶ್ವರಿಯವರು.
ಅತ್ಯಂತ ಶ್ರೀಮಂತ ಕುಟುಂಬದಲ್ಲೇ ಜನಿಸಿದ ನರೇಂದ್ರನಿಗೆ ತಂದೆಯ ಮರಣಾನಂತರ ಆನೇಕ ಸಂಕಷ್ಟಗಳನ್ನು ಇವರ ಕುಟುಂಬ ಎದುರಿಸಬೇಕಾಯಿತು.
ನಂತರ ಇವರು ಆಧ್ಯಾತ್ಮಿಕದೆಡೆ ವಾಲಿದರು.ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಪರಮಪ್ರಿಯ ಶಿಷ್ಯನಾದರು.ಅವರು ತಮ್ಮ ಶಕ್ತಿಯನ್ನೆಲ್ಲಾ ಇವರಿಗೆ ಧಾರೆಯೆರೆದರು.
ಅವರ ಕಾಲಾನಂತರದಲ್ಲಿ ಇಡೀ ವಿಶ್ವವನ್ನು ಸಂಚರಿಸಿ ತತ್ವಜ್ಞಾನ ಭೋದಿಸಿದರು. ೧೮೯೩ ರಂದು ಅಮೆರಿಕಾದ ಚಿಕಾಗೋದಲ್ಲಿ ನೆಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅನೇಕ ಜ್ಞಾನಿಗಳ ಸಮ್ಮುಖದಲ್ಲಿ ತಮ್ಮ ಗುರುಗಳಿಂದ ಪಡೆದ ಜ್ಞಾನ ದೊಂದಿಗೆತಮ್ಮ ನುಡಿಮುತ್ತುಗಳೊಂದಿಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದರು. ಅನೇಕ ದೇಶದ ಜನರೆದರು ಭಾರತದ ಮೌಲ್ಯವನ್ನು ಎತ್ತಿ ಹಿಡಿದರು.
ಸನ್ಯಾಸ ಸ್ವೀಕಾರ ಮಾಡಿ ಭಾರತದ ಬಡತನ ,ಅನಕ್ಷರತೆ ಹೋಗಾಲಾಡಿಸಲು ಶ್ರಮಿಸಿದರು.
ಮಹಾತ್ಮ ಗಾಂಧೀಜಿ,ಅರವಿಂದ ಘೋಷ್,ಸುಭಾಷ್ ಚಂದ್ರಬೋಸ್ ಮುಂತಾದವರು ಇವರಿಂದ ಪ್ರೇರಣೆಗೊಂಡಿದ್ದರು. ನಮ್ಮ ಪ್ರಧಾನಿ ನರೇಂದ್ರ ಮೋದಿ ಜೀ ಕೂಡ ಇವರಿಂದ ಪ್ರೇರೀತರಾಗಿದ್ದಾರೆ.
ರಾಜಯೋಗ,ಕರ್ಮಯೋಗ,ಭಕ್ತಿ ಯೋಗ ಮತ್ತು ಜ್ಞಾನಯೋಗ ದ ಬಗ್ಗೆ ಹಲವಾರು ಪುಸ್ತಗಳನ್ನು ಬರೆದಿದ್ದಾರೆ.
ಬೇಲೂರು ಮಠ,ರಾಮಕೃಷ್ಣ ಮಠ,ರಾಮಕೃಷ್ಣ ಮಿಷನ್ ಗಳನ್ನು ಸ್ಥಾಪಿಸಿ ಭಾರತದೆಲ್ಲೆಡೆ ಆಧ್ಯಾತ್ಮಿಕ ಶಕ್ತಿ ಅದರ ತತ್ವಗಳನ್ನು ಬಿತ್ತಿದ್ದಾರೆ.
ಯುವಜನತೆಯ ಕಣ್ಮಣಿಯಾಗಿದ್ದ ಇವರು “ಶಕ್ತಿಯೇ ಜೇವನ ದೌರ್ಬಲ್ಯವೇ ಮರಣ ” “ಏಳಿ ಎದ್ದೇಳಿ ಗುರಿ ಮುಟ್ಟುವ ವರೆಗೆ ನಿಲ್ಲದಿರಿ” ಎಂದು ಹುರಿದುಂಬಿಸುತ್ತಾ ಯುವಕರಲ್ಲಿ ದೇಶಭಕ್ತಿ ತುಂಬುತ್ತಿದ್ದರು.
ಇಂದು ಸ್ವಾಮಿ ವಿವೇಕಾನಂದ ರ ೧೫೬ ನೇ ಜನ್ನದಿನ ಈ ದಿನವನ್ನು ಸರ್ಕಾರ “ರಾಷ್ಟ್ರೀಯ ಯುವದಿನ” ಎಂದು ಘೋಷಣೆ ಮಾಡಿದೆ.
ಅವರ ನುಡಿಮುತ್ತುಗಳನ್ನು ಸ್ವಲ್ಪವಾದರೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಅದುವೇ ನಾವು ಅವರಿಗೆ ನೀಡುವ ಕೊಡುಗೆ.

                 
Exit mobile version