Site icon TUNGATARANGA

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ನನ್ನನ್ನು ಗೆಲ್ಲಿಸಿ : ಡಾ.ಧನಂಜಯ ಸರ್ಜಿ

ಶಿವಮೊಗ್ಗ, ಮೇ.೧೮:
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು ನನ್ನನ್ನು ಗೆಲ್ಲಿಸಬೇಕು ಎಂದು ಡಾ.ಧನಂಜಯ ಸರ್ಜಿ ಮನವಿ ಮಾಡಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೂ. ೩ ರಂದು ಚುನಾವಣೆ ನಡೆಯಲಿದೆ.

ನನ್ನ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ನಾಯಕರ ಮಾರ್ಗದರ್ಶನ ಮಾಡುತ್ತಿ ದ್ದಾರೆ. ನಾನು ಆರ್.ಎಸ್.ಎಸ್.ನಿಂದ ಬಂದವನು. ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ

. ಈ ಎಲ್ಲಾ ಕಾರಣಗಳಿಂದ ನನ್ನ ಗೆಲುವು ಖಚಿತ ಎಂದರು.
ವಿವಿಧ ಹಂತಗಳಲ್ಲಿ ಪದವೀದರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿದ್ದೇನೆ, ನೈರುತ್ಯ ಪದವೀಧರ ಕ್ಷೇತ್ರವು ೧೪ ಮೆಡಿಕಲ್ ಕಾಲೇಜು, ೩೦ ಎಂಜಿನಿ ಯರಿಂಗ್ ಕಾಲೇಜು, ೧೦೦ ಕ್ಕಿಂತ ಹೆಚ್ಚು

ದೊಡ್ಡ ದೊಡ್ಡ ವಿದ್ಯಾಸ್ಥೆಗಳನ್ನು ಹೊಂದಿದ ಸುಶಿಕ್ಷಿತರ ಕ್ಷೇತ್ರ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ,

ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಿದೆ, ಕ್ಷೇತ್ರದಲ್ಲಿ ೮೫ ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ ೨೭ ಸಾವಿರ ಮತದಾರರಿದ್ದಾರೆ, ನನ್ನ ಗೆಲುವಿಗಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು.


ನಿಮ್ಮ ವಿರುದ್ಧ ಬಂಡಾಯ ಹೆಚ್ಚಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದ್ದಾರೆ ನಿಜ. ಆದರೆ ಪಕ್ಷದ ಹಿರಿಯರು ಅವರ ಜೊತೆ ಮಾತನಾಡುತ್ತಿದ್ದಾರೆ. ಅವರು ಹಿರಿಯರು. ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳು ತ್ತಾರೆ ಎಂಬ ವಿಶ್ವಾಸವಿದೆ ಎಂದರು.


ಶಾಸಕ ಎಸ್.ಎನ್. ಚನ್ನಬಸಪ್ಪ,ಮಾತನಾಡಿ, ಪಕ್ಷದ ಹಿರಿಯರು ತೀರ್ಮಾನ ಕೈಗೊಂಡು ಡಾ.ಧನಂಜಯ ಸರ್ಜಿ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ.ಎಲ್ಲ ಕಾರ್ಯಕರ್ತರು ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಮೋಹನ್ ರೆಡ್ಡಿ, ಮಾಲತೇಶ್, ನಾಗರಾಜ್, ದೀನದಯಾಳ್, ಮಂಜುನಾಥ್, ಶ್ರೀನಾಗ್ ಇದ್ದರು.

Exit mobile version