Site icon TUNGATARANGA

ಶ್ರೀನಿಧಿ ಉತ್ಸವ – 40ರ ಸಂಭ್ರಮ /ಜವಳಿ ಪ್ರದರ್ಶನ, ವಿಶೇಷ ರಿಯಾಯ್ತಿ ಮಾರಾಟಕ್ಕೆ ಚಾಲನೆ ನಾಳೆ ಬಹುಮಾನಗಳ ಬಂಪರ್ ಡ್ರಾ/

ಈ ಪ್ರದರ್ಶನ ಹಾಗೂ ಮಾರಾಟ ಮೇಳ ಬೆಳಿಗ್ಗೆ 10 ರಿಂದ ಸಂಜೆ 8ರವರೆಗೆ ನಡೆಯಲಿದೆ. ಶ್ರೀನಿಧಿಯ ಅದೃಷ್ಟ ಬಹುಮಾನದ ಯೋಜನೆಯ ಬಹುಮಾನಗಳ ಬಂಪರ್ ಡ್ರಾ ಮೇ. 19ರ ನಾಳಿನ ಭಾನುವಾರ ಸಂಜೆ 06 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದ ಆವರಣದಲ್ಲಿ, ನಿರ್ಮಿಸಲಾಗಿರುವ ವಿಶೇಷ ಜರ್ಮನ್ ಟೆಂಟ್‌ನಲ್ಲಿ ಈ ಡ್ರಾ ನಡೆಯಲಿದ್ದು, ನಗರದ ಗಣ್ಯರು, ಆಹ್ವಾನಿತರು ಹಾಗೂ ಗ್ರಾಹಕರು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ,ಮೇ.18:
ನಗರದ ಶೀನ ಪ್ರಸಿದ್ಧ ವಸ ಮಳಿಗೆಯಾದ ಶ್ರಿನಿಽ ಸಿಲ್ಕ್ಸ್ ಅಂಡ್ ಟೆಕ್ಸ್‌ಟೈಲ್ಸ್‌ಗೆ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿರುವ ಬಟ್ಟೆಗಳ ಮೇಲಿನ ವಿಶೇಷ ರಿಯಾಯ್ತಿ ಮಾರಾಟಕ್ಕೆ ಶಾಸಕ ಡಿ. ಎಸ್. ಅರುಣ್ ಚಾಲನೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಆಯೋಜನೆಗೊಂಡಿರುವ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವ್ಯಾವಹಾರಿಕ ಸಂಸ್ಥೆಗೆ ನಲವತ್ತು ವರ್ಷಗಳ ಪರಂಪರೆ ಇದೆ ಎಂದರೆ ಅದು ಸುಲಭದ ವಿಷಯವಲ್ಲ.

ಇದರ ಹಿಂದೆ ಸಂಸ್ಥೆಯನ್ನು ಹುಟ್ಟು ಹಾಕಿದವರ ದೂರದೃಷ್ಟಿ ಹಾಗೂ ನಡೆಸಿಕೊಂಡು ಬರುತ್ತಿರುವವರ ಪ್ರಾಂಜಲ ಪರಿಶ್ರಮ ಎರಡೂ ಸೇರಿದೆ ಎಂದು ಪ್ರಶಂಸಿಸಿದರು.

ಅನಿರೀಕ್ಷಿತವಾಗಿ ಸುರಿದ ಮಳೆಯ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೆಲ ಷೋಗಳನ್ನು ರದ್ದುಪಡಿಸ ಲಾಗಿದೆಯಾದರೂ, ಗ್ರಾಹಕರ ಹಿತ ದೃಷ್ಟಿಯಿಂದ ರಿಯಾಯ್ತಿ ಮಾರಾಟವನ್ನು ಏರ್ಪಡಿಸಿರುವುದು ಗಮನಾರ್ಹ ಎಂದ ಅವರು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್‌ರವರು, ಶ್ರೀನಿಧಿ ಪರಂಪರೆಯೊಂದಿಗೆ ಶ್ರೇಷ್ಟ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ನಿರಂತರವಾಗಿ ನಾಲ್ಕು ದಶಕಗಳ ಕಾಲ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀನಿಧಿ ಸಂಸ್ಥೆಯ ಹಿರಿಯರಾದ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ಟಿ. ಆರ್. ವೆಂಕಟೇಶ ಮೂರ್ತಿ ಸೇರಿದಂತೆ ಕುಟುಂಬದ ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.

Exit mobile version