Site icon TUNGATARANGA

ಹೊಳೆಹೊನ್ನೂರು ಸರಹದ್ದಿನಲ್ಲಿ ಉತ್ತಮ ಮಳೆ, ರೈತರಲ್ಲಿ ಮೂಡಿದ ಸಂತಸ/ ಕೃಷಿ ಚಟುವಟಿಕೆ ಶುರು- ಮಳೆ ಬರುತ್ತೆಂಬ ಸಂಭ್ರಮಕ್ಕೆ ಹಸಿರಿನ ಕುಶಿ ನೋಡಿ, ವೀಡಿಯೋ ನೋಡಿ- ಜಿ. ಸ್ವಾಮಿ

https://youtu.be/FZ18J8vZTso?si=YDPCr_KgIUbK2mkj
ಮಳೆ ಬರುತ್ತೆಂಬ ಸಂಭ್ರಮಕ್ಕೆ ಹಸಿರಿನ ಕುಶಿ ನೋಡಿ, ವೀಡಿಯೋ ನೋಡಿ- ಗಜೇಂದ್ರ ಸ್ವಾಮಿ


ಶಿವಮೊಗ್ಗ,ಮೇ.17 :
ಹೊಳೆಹೊನ್ನೂರು ಸರಹದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ನಿನ್ನೆ ಸಂಜೆ ನಾಲ್ಕು ಘಂಟೆಗೆ ಆರಂಭವಾದ ಮಳೆ ಭಾರೀ ಗಾಳಿ, ಗುಡುಗು ಮತ್ತು ಮಿಂಚು ಸೇರಿದಂತೆ ಸುಮಾರು ಒಂದು ಘಂಟೆ ಕಾಲ ಸತತವಾಗಿ ಸುರಿಯಿತು.


ಯಡೇಹಳ್ಳಿ, ಅಶೋಕ ನ ನಗರ, ಅಗರದಹಳ್ಳಿ, ಚಂದನಕೆರೆ, ಕಲ್ಲಿಹಾಳ್, ಬೈರನಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ವಿಠಲಾಪುರ, ಜಂಭರಘಟ್ಟೆ, ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನ ಹಳ್ಳಿ, ಹನುಮಂತಾಪುರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.


ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಮೋಡ ಆವರಿಸುತ್ತಿದ್ದು ಮಳೆ ಮಾತ್ರ ಬಂದಿರಲಿಲ್ಲ. ಇದರಿಂದ ಕಂಗಾಲಾಗಿದ್ದ ರೈತರು ಪ್ರತೀ ದಿನ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊಂಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.

Exit mobile version