Site icon TUNGATARANGA

ಷಟಲ್ ಬ್ಯಾಡ್ಮಿಂಟನ್ ಗ್ರಾಮೀಣ ಪ್ರತಿಭೆ ಸ್ನೇಹ ಎಸ್.” |ಮಂಗಳಾ ಕಪ್ ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ನೇಹ|

      ಎಳೆಯ ವಯಸ್ಸಿನಲ್ಲೇ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಸ್ನೇಹ  ಎಸ್. ದೇಶದ ಪ್ರಮುಖ ಆಟಗಾರ್ತಿ ಆಗುವ ಭರವಸೆ ಮೂಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್,

ಶಿವಮೊಗ್ಗ ಶಾಖೆಯ ಗುರುಪುರದ  ಪ್ರತಿಷ್ಠಿತ  ಶಿಕ್ಷಣ ಸಂಸ್ಥೆಯಾದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರತಿಭೆಯಾಗಿರುವ ಸ್ನೇಹ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕಗಳಿಸಿರುತ್ತಾರೆ.  ಆಟದ ಜೊತೆಗೆ ಓದಿನಲ್ಲಿಯೂ ಮುಂದಿದ್ದಾಳೆ.

     ಮಂಗಳೂರಿನಲ್ಲಿ ಮಂಗಳಾ ಕಪ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್  ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸ್ನೇಹ ಎಸ್. ಮುಡಿಗೆರಿಸಿಕೊಂಡರು.

   ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ, ನಗರದ ಯು. ಎಸ್. ಮಲ್ಯ ಒಳಾಂಗಣ  ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕರ ಘಟ್ಟ ತಲುಪಿದ್ದ ರಾಜ್ಯದ ಏಕೈಕ

ರಾಂಕಿಂಗ್ ಆಟಗಾರ್ತಿ, ಬೆಂಗಳೂರಿನ ಸೆಲೆನೆಟ್ ಸ್ಪೋರ್ಟ್ಸ್  ಅಕಾಡೆಮಿಯ ಸ್ನೇಹ ಎಸ್.ಫೈನಲ್ ನಲ್ಲಿ ಆರ್ ಆರ್ ಬಿಎಯ ಕನಕ ಕಲಕೋಟಿ ಸವಾಲನ್ನು ಮೀರಿ ನಿಂತರು. ತೀವ್ರ ಪೈಪೋಟಿ ಕಂಡ ಎರಡನೇ ಗೇಮ್ ನಲ್ಲಿ ಸೋತರೂ ಪಂದ್ಯದಲ್ಲಿ ಕನಕ್ ಅವರನ್ನು 21-8,21-23,21-9 ರಲ್ಲಿ ಮಣಿಸಿದ ಸ್ನೇಹ ಎಸ್. ರೂ 15 ಸಾವಿರ ಮೊತ್ತ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.  

    ಈ ಪ್ರತಿಭೆಯೂ ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರಿ ರಾಗಿರುತ್ತಾಳೆ. ಇವಳು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ವಿನೋದ್ ಕುಮಾರ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿರುತ್ತಾರೆ.

      ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ  ಸುರೇಶ್ ಎಸ್. ಎಚ್. ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Exit mobile version